ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ– ೬

ಸರ್, ಮಾನಿಲಿ ಉಳ್ದುಳ್ದಿ ಬ್ಯಾಜಾರ್ ಬಂದ್ಬಿಟ್ಟದೆ. ಅದ್ಕೆ ನಿನ್ನಾಗೆ ಆಬ್ಬಿ ಸಂಗ್ತಿಗೆ ಒಡಿನ ಮಾನಿಗೆ ಹೋಗಿದ್ದೆ.ಅವ್ರ ಮಾನಿ ಎಷ್ಟು ದೊಡ್ದಾದೆ. ನಂಗೆ ಖುಷಿ ಆಯ್ತು. ಒಂದ್ನಾಯಿ, ಒಂದ್ ಬೆಕ್ಕು,ದನ್ಕರು, ತೋಂಟ ಎಲ್ಲಾ ಆದೆ. ಅವ್ರ ಮಾನಿ ಅಂಗಳ ಎಷ್ಟು ದೊಡ್ಕೆ ಆದೆ. ನಂಗೆ ಆಟ ಆಡುಕೆ ಲಾಯ್ಕ ಆಗ್ತದೆ. ಆಬ್ಬಿ ಕಸ ಗೂಡ್ಸಿ,ನೆಲ ವರ್ಸಿ,ಪಾತ್ರ ತೊಳ್ಕಂತಿರ್ವಾಗ ನಾನು ಅವರ ಮಾನಿ ತೋಂಟ್ದಲ್ಲಿ ಬಿದ್ದ ಆಡ್ಕೆ, ಕಾಯಿ ಹೆಕ್ಕಂಡಿ ಬಂದೆ. ಆ ಒಡ್ತಿ ನನ್ನ ನೋಡ್ಕಂಡಿ ಒಳಗ್ಹೊಗಿ ತಿಂಡಿ ತಂದ್ಕೊಟ್ರು. ನಾನು ಅಲ್ಲೇ ಜಗ್ಲಿ ಮೇಲೆ ಕೂತ್ಕೊಂಡಿ ತಿಂಡಿ ತಿಂತಿರ್ವಾಗ, ನೀನು ಸಾಲಿಗೋಗಿ ಕಲ್ತು ಉದ್ಧಾರ ಮಾಡುದು ಅಷ್ಟರಲ್ಲೆ ಅದೇ. ಮುಂದೆ ಸಾಲಿಗೆ ಹೋಗುದೂ ಬ್ಯಾಡ. ಆಬ್ಬಿ ಸಂಗ್ತಿಗೆ ನಮ್ಮನಿಗೆ ಬಂದು, ನಮ್ಮನೆಲಿ ಸಣ್ಣಪುಟ್ಟ ಕೆಲಸ ಮಾಡು. ನಿಂಗೆ ದಿನಾಲು ತಿಂಡಿ ಕೊಡ್ತೆ ಅಂದ್ರು. ನಂಗೆ ಚೋಲೊ ಆಯ್ತು ಸರ್. ದೊಡ್ಡವನಾದ್ಮೇಲೆ ನಮ್ಮನೆ ಕೆಲಸ ಮಾಡ್ಕೊಂಡಿರು. ಆವಾಗ ನಿನಗೆ ದುಡ್ಡು ಕೊಡ್ತೆ. ಅಲ್ವೇನೇ ದೇವಿ’ ಎಂದ್ರು.

ಅವಾಗ ನಮ್ಮಬ್ಬಿ ‘ಹೌದ್ರ ಒಡ್ತಿ. ನಾ ಇನ್ನೆ ಎಟ್ಟ ದಿನ ದುಡಿವೆ. ನನ್ಗೂ ಜೀವ್ನನೇ ಸಾಕಾಗೊಗ್ದೆ. ಇವ್ನ ಅಪ್ಪನೊಡ್ದರೆ ಆ ನಮ್ನಿ. ನಾ ಎಂತ ಒಬ್ಳೆ ಒದ್ದಾಡೊದು. ಒಬ್ಳೆ ದುಡ್ದಿ ಎಷ್ಟು ಅಂತ ಹೊಟ್ಟೆ ಹೊರೆಯೋದು. ನನ್ನತ್ರ ಆಗುದ್ರಿಲ್ಲ’ ಅಂತೂ ಸರ್.

ನಾನಲ್ಲೆ ಜಗ್ಲಿ ಮ್ಯಾಲೆ ಕುತ್ಕಂಡಿ ತಿಂಡಿ ತಿಂತಿರ್ವಾಗ ಅಲ್ಲೆ ಟಿವಿ ನೋಡ್ತಾ ಇದ್ದೆ. ಎಷ್ಟ ಮಜಾ ಆಯ್ತು ಸರ್.ಸಾಲಿ ಇಲ್ಲ ಅಂಬುದು ಲಾಯ್ಕ ಆಯ್ತು. ನಾನು ದಿನಾ ನಿನ್ಸಂತಿಗೆ ಒಡಿನ್ಮಾನಿಗೆ ಬರ್ತೆ’ ಅಂದೆ.

‘ಅದ್ಕೆ ಆಬ್ಬಿ ಆಯ್ತು ಬಾ. ಕೊರೋನಾ ಬಂದಿ ಸಾಲಿನ ಮುಚ್ಕಂಡಿ ಹೋಯ್ತು. ಇನ್ಯಾವಾಗ ಸಾಲಿನೋ ಎನೋ? ಅಲ್ಲಿವರಿಗೆ ನೀನು ಸುಮಾರು ದೊಡ್ಕಾಗ್ತೆ. ನೋಡ್ವಾ, ಏನೇನಾಗ್ತಾದ್ಯೊ ಅದೆಲ್ಲಾ ಆಗ್ಲಿ’ ಅಂತಿರ್ವಾಗ್ಲೆ ಒಡ್ತಿ ಓಡೋಡಿ ಬಂದ್ರು ಸರ್.

‘ಒಡ್ತೀ, ನನ್ಮಗ ಕಲೂಕೆ ತುಂಬಾ ಹುಸಾರಿ ಇದ್ದ. ಇ ವಷ೯ ಆರ್ನೆತಿ. ಕಳ್ದ ವಷ೯ ಮಾನಿಲಿ ಕೂತ್ಕೊಂಡೆ ಐದ್ನೇತಿ ಪಾಸಾಗಾನೆ. ಅಂದ್ಮೆಲೆ ಎಷ್ಟು ಹುಸಾರಿ ಆವ್ನೆ ನೋಡಿ.ಆಕ್ಕೊರ್ಗೆ ನನ್ಮಗ ಅಂದ್ರೆ ಆಯ್ತು. ಬಾಳ್ ಪಿರುತಿ ಮಾಡ್ತರ್ರು. ಒಂದೊಂದ್ಸಲ ಮಾನಿಂದ ಬರುವಾಗ್ಲೆ ತಿಂಡಿ ತನ್ಕೊಡ್ತರ್ರು. ಆ ದ್ಯಾವ್ರೂ ಅವರ್ಗೆ ಒಳ್ಳೆದ್ಮಾಡ್ಲಿ.

ಸಾಲಿಲಿ ಕಲ್ತ ಹಾಡು,ಕಾಥಿ ಎಲ್ಲ ಹೇಳ್ತಾ. ಒಂದು ಸಲ ಕೇಳಿಸ್ಕ ಬಿಟ್ರೆ ಸಾಕು ಅವ್ನ ತಲೆಲಿ ಯಾವಾಗ್ಲೂ ಇರ್ತದೆ. ಆದ್ರೆ ಎಂತ ಮಾಡುದೂ ಸಾಲಿನೇ ಇಲ್ಲ. ನಾವಂತೂ ದುಡ್ದು ನಮ್ಜಿಂವ ತೇಂದಾಯ್ತು. ನಮ್ಮ ಕ್ಳಾದ್ರು ಚಲೋ ಕಲಿಲಿಯೆಂದ್ರೆ ಆ ದ್ಯಾವ್ರು ಹಿಂಗ ಮಾಡ್ಬಿಟ್ಟ.

ನೋಡ್ ದೇವಿ, ಸಾಲಿಯಂತೂ ಸುರು ಆಗುದಿಲ್ಲ. ದಿನಾ ಬೆಳ್ಗಾದ್ರೆ ಟಿವಿಲಿ ಅದೇ ಸುದ್ದಿ.ಈಗಂತೂ ಮತ್ಯಾಂತದೋರೋಗ ಬಂದದ್ಯಂತೆ. ಅದ್ಬಂದ್ರೆ ಬದ್ಕೊದೆ ಕಷ್ಟಂತೆ. ನಿಂಗಿರುದು ಒಬ್ನೆ ಪೋರ. ನಿಂಗೆ ದುಡುಕೆ ಆಗ್ದೆ ಇದ್ದ ಕಾಲ್ದಲ್ಲಿ ನಿನ್ನ ಹೊಟ್ಟಿ ಹೊರುಕೆ ಆವ್ನೆ ಬೇಕು.ಇನ್ಮೂಂದೆ ಆಂವಾ ಎಲ್ಹೊಗೂದು ಬ್ಯಾಡ. ನೀ ಬರ್ವಾಗ ಆವ್ನ ಕರ್ಕಂಡಿ ನಮ್ಮನೀಗ್ಬಾ.ಆಂವಾ ಎಂತ ಕೆಲ್ಸಾ ಮಾಡುದೂ ಬ್ಯಾಡ.ಅಂಗ್ಳ ಎದರ್ಗಿನ ಕಾಳಿ ಕಿತ್ರೆ ಸಾಕು.ಕೊಟ್ಗಿ ಅಟ್ಟದ್ಮೆಲಿದ್ದ ಹುಲ್ಕಟ್ಟತೆಗ್ದಿ ದನಗೆ ಹಾಕದ್ರೆ ಸಾಕು.ಎದ್ರಗಡೆ ತೋಟದಲ್ಲಿ ಬಿದ್ದ ಆಡ್ಕಿ,ಕಾಯಿ ಹೆಕ್ಕಬಂದ್ರೆ ಸಾಕು.ಇನ್ನು ಸಣ್ಣಪುಟ್ಟ ಕೆಲ್ಸಾ ಇದ್ದೆ ಇರ್ತದೆ.ನಾ ಆವ್ನಿಗೆ ಬೆಳ್ಗಾನ ಚಾತಿಂಡಿ, ರಾತ್ರಿದು ತಾಣ್ಣಿದು ಏನಾದ್ರು ಇದ್ರೆ ಕೊಡ್ತೆ. ಆಂವ ಇಲ್ಲೆ ಕೆಲ್ಸಾ ಕಲ್ತರ್ರೆ ಮುಂದೆ ದೊಡ್ಡವ್ನಾದ್ಮೇಲೆ ಯಾವ ಕೆಲ್ಸಾನೂ ಹೇಳ್ಕೊಡುದು ಬ್ಯಾಡ. ತನ್ನಿಂದತಾನೆ ಕಲ್ತ ಬಿಡ್ತ.ಆವಾಗ್ನಾನು ಸಂಬ್ಳಕೊಡ್ತೆ. ನಾಳಿಕೆ ನಿಂಗೆ ಲಾಯ್ಕ ಆಗ್ತದೆ.ಮಗ ದುಡ್ಕ ಬಂದ್ರೆ ನೀನು ಕುಂತಲ್ಲೆ ತಿನ್ಬಹುದು.

ಅಡ್ಡಿಲ್ರ ಒಡ್ತಿ, ಆದ್ರೆ ಆ ಆಕ್ಕೊರ್ಗೆ ಒಂದ್ಮಾತು ನೀವೆ ಹೇಳ್ರಾ, ಎಂದಾಗ ಅಲ್ಲೆ ಜಗ್ಲಿ ಮ್ಯಾಲೆ ಟಿವಿ ನೋಡ್ತಾ ಕುಂತಿದ್ದ ವೆಂಕ್ಟೇಶ, ಬ್ಯಾಡ,ಬ್ಯಾಡ ಆಕ್ಕೊರ್ಗೆ ಹೇಳಿದ್ರೆ ಅವ್ರು ಇಲ್ಲಿ ಬರೂದ್ಕೆ ಬಿಡೂದಿಲ್ಲ. ನೋಡ್ವಾ, ಸಾಲಿ ಸುರು ಆಗ್ಲಿ. ಅಲ್ಲಿ ತನ್ಕಾ ಈ ಒಡಿನ್ಮನೀಗೆ ಬರ್ತೆ. ಕೋರೋನಾಗೆ ಜಯವಾಗ್ಲಿ’ ಎಂದು ಗಟ್ಟಿಯಾಗಿ ಕೂಗ್ತಾ,
ಸರ್, ಸಾಲಿ ಯಾವಾಗ ಸುರು ಆಗ್ತದೆ….?’

-ಪಿ.ಆರ್. ನಾಯ್ಕ, ಹೊಳೆಗದ್ದೆ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

2 Comments

  1. ನಿಜ ವಾಸ್ತವ ಚೆನ್ನಾಗಿ ಬಿಂಬಿಸಿದ್ದಿರಿ ಸರ್.

Leave a Reply

Your email address will not be published.


*