
ಬೆಂಗಳೂರು: ಕರ್ನಾಟಕ ರಾಜ್ಯದ ಹಾಲಿ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ಮೊಟ್ಟ ನೊದಲ ಬಾರಿ ಮಹಿಳೆಯೋರ್ವರು ಅಧಿಕಾರ ವಹಸಿಕೊಂಡದ್ದಾರೆ.
ಅವರು ಯಾರು ಗೊತ್ತಾ…? ಚಿತ್ರ ನಟಿ ಶೃತಿ. ಹೌದು ಚಿತ್ರನಟಿ ಹಾಗೂ ಭಾ.ಜ.ಪ. ಮುಖಂಡೆ ಶ್ರುತಿ ಅವರನ್ನು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ರಾಜ್ಯಪಾಲರ ಆದೇಶದ ಅನುಸಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಶ್ರುತಿ ಅವರು ಮದ್ಯಪಾನ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರೆ ಎಂದು ತಿಳಿಸಿದೆ.
ಈ ಹಿಂದೆ ಶೃತಿಯವರು ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಹುದ್ದೆಯಿಂದ ಇತ್ತೀಚೆಗಷ್ಟೇ ಅವರನ್ನು ಕೆಳಗಿಳಿಸಲಾಗಿತ್ತು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿ ಯಡಿಯೂರಪ್ಪನವರ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಿಸಿ, ಸಿಎಂ ಕಚೇರಿ ಆದೇಶ ಹೊರಡಿಸಿತ್ತು. ಇದು ಶೃತಿಯವರ ಅಸಮಾದಾನಕ್ಕೂ ಕಾರಣವಾಗಿತ್ತು. ಇದೀಗ ಅವರರನ್ನು ಸಮಾದಾನ ಪಡಿಸಲೆಂಬಂತೆ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಇವರಾಗಿದ್ದಾರೆ.

Be the first to comment