ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ , ಪುರಸಭೆಯ ನಿವೃತ್ತ ಮುಖ್ಯಾಧಿಕಾರಿ ಎನ್. ಎಸ್. ನಾಯ್ಕ ಮಂಗಳವಾರ ಕೊರೊನಾದಿಂದ ಕೊನೆಯುಸಿರೆಳೆದರು. ಇವರಿಗೆ 70 ವರ್ಷ ವಯಸ್ಸಾಗಿತ್ತು.
ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಇವರನ್ನು ಶಿರಸಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದರು.
ಮೂಲತಹ ಅಂಕೋಲಾದ ಹಟ್ಟಿಕೇರಿಯವರಾಗಿದ್ದ ಎನ್.ಎಸ್. ನಾಯ್ಕರು ದಾಂಡೇಲಿಯಲ್ಲಿ ವೃತ್ತಿ ಬದುಕು ಕಂಡುಕೊಂಡಿದ್ದರು.
ದಾಂಡೇಲಿ ನಗರಸಭೆಯಲ್ಲಿ ಲೆಕ್ಕಪತ್ರ ಅಧಿಕಾರಿಯಾಗಿದ್ದ ಇವರು ಪದೋನ್ನತ್ತಿಗೊಂಡು ಭಟ್ಕಳ ಹಾಗೂ ಅಳ್ನಾವರ ಪುರಸಭೆಯ ಮುಖ್ಯಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ನಿವೃತ್ತಿಯ ನಂತರ ರಾಜಕೀಯ ಪ್ರವೇಶಿಸಿದ್ದ ನಾಯ್ಕರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಮಡದಿ, ಮಗ, ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಎನ್. ಎಸ್. ನಾಯ್ಕರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.
ಎನ್ ಎಸ್ ನಾಯಕರು ನನ್ನ ಸಹೋದ್ಯೋಗಿ ಆಗಿದ್ದರು. ಅವರ ನಿವೃತ್ತಿ ಬದುಕು ಚೆನ್ನಾಗಿತ್ತು. ಕರೋನಾ ಮಾರಿ ಅವರನ್ನು ಬಲಿ ತಗೊಂಡಿದ್ದು ಅತ್ಯಂತ ನೋವಿನ ಸಂಗತಿ. ಅವರ ಮನೆಯವರಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.ಅವರ ಆತ್ಮಕ್ಕೆ ಶಾಂತಿ ಸಿಗಲಿ.🙏