ದಾಂಡೇಲಿಯ ಜನತಾ ವಿದ್ಯಾಲಯದ ನಿವೃತ್ತ ಉಪನ್ಯಾಸಕ, ಲೇಖಕ ಎನ್.ಕೆ. ಭಟ್ಟರವರು ಶುಕ್ರವಾರ ನಸುಕಿನ ಜಾವ ಕೊನೆಯುಸಿರೆಳೆದರು.
ಕನ್ನಡ ಹಾಗೂ ಇಂಗ್ಲೀಷ ಭಾಷೆಯಲ್ಲಿ ಅಪಾರ ಜ್ಞಾನ ಹೊಂದಿದ್ದ ಎನ್.ಕೆ. ಭಟ್ಟರವರು ಸಾಹಿತ್ಯಾಸಕ್ತರೂ ಆಗಿದ್ದರು. ಕೆಲಕಾಲ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದರು.
ನಿವೃತ್ತಿಯ ನಂತರ ಶಿರಸಿಯಲ್ಲಿ ವಾಸವಾಗಿದ್ದ ಇವರು ಹಲವು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುತ್ತಿದ್ದರು. ಕೊರೊನಾ ಸೋಂಕಿಗೊಳಗಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮೃತರು ಮಡದಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಛೇ ಛೇ. ದುಃಖದ ಸಂಗತಿ. ತುಂಬಾ ಸಜ್ಜನ ಜೀವಿ ಎನ್ ಕೆ ಭಟ್ಟರು. ಅವರ ಒಡನಾಟದ ದಿನಗಳಲ್ಲಿ ಕಂಡುಕೊಂಡ ಅವರ ಆಂಗ್ಲ ಸಾಹಿತ್ಯದ ಜ್ಞಾನ ಅನುಪಮವಾಗಿತ್ತು.ಅವರ ಅಗಲಿಕೆಗೆ ನೋವಿನ ಸಂತಾಪಗಳು.😪🌹🍀