ಬೆಂಗಳೂರು: ಸರಕಾರ ಲಾಕ್‍ಡೌನ್ ಆದೇಶದಲ್ಲಿ ಒಂದೊಂದೇ ಹಂತದಲ್ಲಿ ಸಡಿಲಿಕೆ ಮಾಡುತ್ತಿದ್ದು ಇದೀಗ ಜೂನ 8 ರಿಂದ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟ ಹಾಗೂ ಇದೇ ರೀತಿಯ ಆತಿಥ್ಯಗಳನ್ನು ಒದಗಿಸುವ ಖಾಸಗಿ ಸಂಸ್ಥೆಗಳನ್ನು ಸೇವೆಗಳನ್ನು ಹಾಗೂ ಚಾರಣ ಮತ್ತು ಇತರೆ ಚಟುವಟಿಕೆಗಳನ್ನೂ ಆರಂಭಿಸುವಂತೆ ರಾಜ್ಯ ಸರಕಾರ ತಿಳಿಸಿದೆ.
ಈ ಬಗ್ಗೆ ರಾಜ್ಯ ಸರಕಾರದ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸರಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್‍ರವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಕೊರೊನಾ ಕಾರಣಕ್ಕಾಗಿ ಲಾಕ್‍ಡೌನ್ ಜಾರಿಯಿದ್ದುದರಿಂದ ಕಳೆದ ಮೂರು ತಿಂಗಳಿಂದ ಜಂಗಲ್ ಲಾಡ್ಜ್ ಹಾಗೂ ಖಾಸಗಿ ರೆಸರ್ಟ ಹೋಮ್ ಸ್ಟೇ, ಲಾಡ್ಜ್‍ಗಳ ಆತಿಥ್ಯ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ನಡುವೆ ಲಾಕ್‍ಡೌನನ್ನು ಸರಕಾರ ಹಂತ ಹಂತವಾಗಿ ಸಡಿಲಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಮತ್ತು ವಿಹಾರ ಧಾಮಗಳ ಸಂಸ್ಥೆಯವರು ಕಂಟೈನ್ಮೆಂಟ್ ವಲಯಗಳನ್ನು ಹೊರತು ಪಡಿಸಿ ಅರಣ್ಯ ಪ್ರದೇಶಗಳಲ್ಲಿ ಆತಿಥ್ಯ ಹಾಗೂ ಸಫಾರಿ, ಚಾರಣ, ಮತ್ತು ಇತರೆ ಚಟುವಟಿಕೆ ನಡೆಸಲು ಅನುಮತಿ ನೀಡುವಂತೆ ಸರಕಾರಕ್ಕೆ ಮನವಿ ಮಾಡಿದ್ದರು.
ಕೇಂದ್ರ ಗೃಹ ಮಂತ್ರಾಲಯದ ಆದೇಶದ ಮಾರ್ಗಸೂಚಿಯಂತೆ ಜೂನ್ 8ರ ನಂತರ ಆತಿಥ್ಯ ವಲಯದಲ್ಲಿನ ಚಟುವಟಿಕೆಗಳನ್ನು ಆರಂಭಿಸಲು ಅನುಮತಿಸಲಾಗಿರುವುದನ್ನು ಪರಿಗಣಿಸಿ ರಾಜ್ಯದಲ್ಲಿಯೂ ಜಂಗಲ್ ಲಾಡ್ಜ್‍ಗಳು ಮತ್ತು ರೆಸಾರ್ಟಗಳು ಹಾಗೂ ಇದೇ ರೀತಿಯ ಸೇವೆ ಒದಗಿದಸುವ ಖಾಸಗಿ ಸಂಸ್ಥೆಗಳು (ರೆಸಾರ್ಟ, ಹೋಮ್ ಸ್ಟೇ ) ಅವುಗಳು ಒದಗಿಸುವ ಆತಿಥ್ಯ ಸೇವೆಗಳೊಂದಿಗೆ ಸಂಬಂಧಿತ ಎಲ್ಲಾ ಚಟುವಟಿಕೆಗಳನ್ನು ( ಸಫಾರಿ, ಚಾರಣ, ಇಂತರೆ) ಪ್ರಾರಂಭಿಸಲು ಅನುಮತಿ ನೀಡಿದೆ. ಹೀಗೆ ಪ್ರಾರಂಭಿಸುವಾಗ ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆಯು ಕಾಲ ಕಾಲಕ್ಕೆ ನೀಡುವ ಮಾರ್ಗಸೂಚಿ ಹಾಗೂ ಎಸ್.ಓ.ಪಿ.ಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ, ಸಾಮಾಜಿಕ ಅತರ ಕಾದು ಕೊಳ್ಳುವಂತೆ, ನೈರ್ಮಲ್ಯ, ಶುಚಿತ್ವ ಕಾದುಕೊಳ್ಳುವ ಜೊತೆಗೆ ನಿಗದಿ ಪಡಿಸಿದ ರಾಷ್ಟ್ರೀಯ ನಿರ್ದೇಶನಗಳಿಗೆ ಬದ್ಧರಾಗುವ ಶರತ್ತುಗಳಿಗೆ ಒಳಪಟ್ಟು ಜಂಗಲ್ ಲಾಡ್ಜ್ ಹಾಗೂ ರೆಸಾರ್ಟಗಳನ್ನು ಪುನರಾಂಭಿಸುವಂತೆ ಹೇಳಲಾಗಿದೆ. ಆದರೆ ನಗರ ಹಾಗೂ ಪಟ್ಟಣ ಪ್ರದೇಶದೊಳಗಿರುವ ಲಾಡ್ಜ್ ಹಾಗೂ ವಸತಿಗೃಹಗಳ ಪ್ರಾರಂಭದ ಬಗ್ಗೆ ಯಾವುದೇ ಉಲ್ಲೇಖ ಇದ್ದಿರುವುದಿಲ್ಲ.
Be the first to comment