ದಾಂಡೇಲಿ ಸರಕಾರಿ ಪದವಿ ಕಾಲೇಜಿನಲ್ಲಿ ಪರಿಸರ ದಿನಾಚರಣೆ

ದಾಂಡೇಲಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಎನ್.ಸಿ.ಸಿ. ಎನ್.ಎಸ್.ಎಸ್, ಸ್ಕೌಟ್ ಮತ್ತು ಗೈಡ್ಸ, ಇಕೋ ಕ್ಲಬ್‍ಗಳ ಆಶ್ರಯದಲ್ಲಿ ದಾಂಡೇಲಿ ವಲಯ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.

    ಗಿಡ ನರೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಲಯ ಅರಣ್ಯಾಧಿಕಾರಿ ವಿನಯ ಭಟ್ಟರವರು  ಈ ಪರಿಸರ ನಮ್ಮ ಪೂರ್ವಜರಿಂದ ನಮಗೆ ಬಂದ ಬಳುವಳಿ. ಇದನ್ನು ಉಳಿಸಿ ಬೆಳೆಸಿ ನಮ್ಮ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿ. ಪಶ್ಚಿಮ ಘಟ್ಟಗಳ ಪ್ರದೇಶ ವಿಶ್ವದಲ್ಲಿಯೇ ಅತ್ಯಂತ ಸಮೃದ್ಧ ಆರೋಗ್ಯವಂತಿಕೆಯ ನೆಲ ಅದನ್ನು ಸಂರಕ್ಷಿಸಿಕೊಳ್ಳಬೇಕು ಎಂದರು.

  ಕಾಲೇಜಿನ ಪ್ರಾಚಾರ್ಯ ಡಾ. ಎಂ. ಡಿ. ಒಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಉಪವಲಯ ಅರಣ್ಯಾಧಿಕಾರಿ ಅನಿಲ ಆಚಾರಾತಿ, ಡಾ. ನಾಸೀರಅಹ್ಮದ. ಎಂ. ಜಂಗೂಬಾಯಿ, ಪ್ರೊ. ಎಸ್.ವಿ. ಚಿಂಚಣಿ, ಡಾ.  ಬಿ.ಎನ್. ಅಕ್ಕಿ, ಡಾ. ವಿನಯಾ ಜಿ. ನಾಯಕ, ಶ್ರೀಮತಿ ಸುನೀತಾ ಎಂ. ಜೋಗ, ಶ್ರೀಮತಿ ನಿಶಾತ್ ಶರೀಫ್ ಡಾ. ಸುಜಾತಾ ಮಗದುಮ್, ಶ್ರೀಮತಿ ಲಕ್ಷ್ಮಿಬಾಯಿ ಕಬಾಡಿ, ವಿನೋದಕುಮಾರ ಮೆತ್ರಿ ಮುಂತಾದವರಿದ್ದರು.

About ಬಿ.ಎನ್‌. ವಾಸರೆ 704 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*