
ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿರುವ ವಿಶಿಲಿಂಗ್ ಉಡ್ ರೆಸಾರ್ಟ್ ನವರು ನಡೆಸಿದ್ದಾರೆ ಎನ್ನಲಾಗಿರುವ ಅರಣ್ಯ ಭೂಮಿಯ ಅತಿಕ್ರಮಣದ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆಯವರು ತಮ್ಮ ಗಡಿರೇಖೆಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ.

ಗಣೇಶಗುಡಿಯ ವಿಶಿಲಿಂಗ್ ಉಡ್ ರೆಸಾರ್ಟ್ ನವರು ಅರಣ್ಯ ಭೂಮಿಯ ಅತಿಕ್ರಮಣ ಮಾಡಿದ್ದಾರೆ ಎಂದು ಹಲವರು ದೂರ ನೀಡಿದ್ದರು. ನಂತರ ಅರಣ್ಯ ಇಲಾಖೆಯವರು ಈ ಬಗ್ಗೆ ಪ್ರಕರಣ ದಾಖಲಿಸಿದ್ದರು.
ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ 2024ರಲ್ಲಿ ಆದೇಶವನ್ನ ನೀಡಿ ರೆಸಾರ್ಟ್ ನವರು ಮಾಡಿದ್ದ ಅರಣ್ಯ ಭೂಮಿಯ ಅತಿಕ್ರಮಣವನ್ನು ತೆರವುಗೊಳಿಸುವಂತೆ ವಿಶಿಲಿಂಗ್ ವುಡ್ ಮಾಲಕರಿಗೆ ನಿರ್ದೇಶನ ಮಾಡಿದ್ದರು. ಅದನ್ನ ಪ್ರಶ್ನಿಸಿ ವಿಶಿಲಿಂಗ್ ವುಡ್ ಮಾಲಕರು ಧಾರವಾಡ ಹೈಕೋರ್ಟ್ ನ ದ್ವಿ ಸದಸ್ಯ ಪೀಠಕ್ಕೆ ಆಪೀಲು ಹೋಗಿದ್ದರು. ಇದೀಗ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠದ ಮಾನ್ಯ ನ್ಯಾಯಾಧೀಶರು ಅರಣ್ಯ ಇಲಾಖೆಯ ಮತ್ತು ವಿಶಿಲಿಂಗ್ ವುಡ್ ರೆಸಾರ್ಟನ 7.7 ಎಕರೆ ಭೂಮಿಯ ಅಧಿಕೃತ ಗಡಿರೇಖೆಯನ್ನು ಗುರುತಿಸಿ ಫೆಬ್ರುವರಿ 20ರ ಒಳಗಡೆ ವರದಿb ಸಲ್ಲಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶಿಸಿದ್ದಾರೆ. ಆ ಹಿನ್ನಲೆಯಲ್ಲಿ ದಾಂಡೇಲಿ ವಲಯ ಅರಣ್ಯ ಅಧಿಕಾರಿ ಎನ್.ಎಲ್ ನದಾಪ್ ನೇತೃತ್ವದಲ್ಲಿ ಗಣೇಶಗುಡಿಯ ವಿಶಿಲಿಂಗ್ ವುಡ್ ಹಾಗೂ ಅರಣ್ಯ ಇಲಾಖೆಯ ಭೂಮಿಯ ಗಡಿ ಗುರುತಿಸುವ ಕೆಲಸ ನಡೆದಿದೆ.
ಈ ನಡುವೆ ಅರಣ್ಯ ಸಚಿವರು ಸಹ ಕಾಡ ನಡುವೆ ಇರುವ ರೆಸಾರ್ಟ್, ತೋಟ ಹಾಗೂ ಇನ್ನಿತರೆ ವ್ಯಕ್ತಿಗಳು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕೂಡ ನೀಡಿದ್ದರಲ್ಲದೇ, ಅರಣ್ಯ ಇಲಾಖೆಯ ಮೂಲಕ ಆದೇಶವನ್ನು ಹೊರಡಿಸಿದ್ದರು ಎಂಬುದನ್ನ ಇಲ್ಲಿ ನೆನಪಿಸಿಕೊಳ್ಳಬಹುದು.
ನ್ಯಾಯಾಲಯದ ಆದೇಶದಂತೆ ಕಾರ್ಯ :
ಹೈಕೋರ್ಟ್ ನ ಆದೇಶದಂತೆ ಗಡಿ ಗುರುತಿಸುವ ಕೆಲಸ ಮಾಡಲಾಗಿದೆ. ನಾವು ಗಡಿ ಗುರುತಿಸಿ ಫೆ. 20 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ ಎಂದು ದಾಂಡೇಲಿ ವಲಯ ಅರಣ್ಯಾಧಿಕಾರಿ ಎನ್.ಎಲ್. ನದಾಪ ತಿಳಿಸಿದ್ದಾರೆ.

Be the first to comment