
ದಾಂಡೇಲಿ: ನಗರದ ವ್ಯಕ್ತಿಯೋರ್ವರಿಗೆ ‘ ನೀನು ನಕಲಿ ವೈದ್ಯ ಇದ್ದೀಯಾ… , ಎಂದು ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟ ಮೂವರು ಹುಬ್ಬಳ್ಳಿಯ ಮೂವರು ಪತ್ರಕರ್ತರನ್ನು ದಾಂಡೇಲಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ವಿಜಯ ಶಂಕರ ಮೇತ್ರಾಣಿ, ಧರ್ಮರಾಜ ನಾರಾಯಣ ಕಠಾರೆ, ಸತೀಶ ಬಾಗವಾನ ಕೇದಾರಿ ಎಂಬವರೇ ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ನಕಲಿ ಪತ್ರಕರ್ತರಾಗಿದ್ದಾರೆ.



ಹುಬ್ಬಳ್ಳಿಯ ಈ ಮೂವರು ಕೂಡಿಕೊಂಡು ಫೆ 9 ರಂದು ದಾಂಡೇಲಿಯ ನ್ಯಾಚುರೋಪತಿ ( ಪ್ರಕೃತಿ ಚಿಕಿತ್ಸಕ) ಅಶೋಕ ಪರಬ ಎಂಬರ ಕ್ಲಿನಿಕ್ ಗೆ ಬಂದು
‘ ನಾವು ಹುಬ್ಬಳ್ಳಿಯ ವಿಜಯ-9 ನ್ಯೂಸ್ ನವರು’ ಅಂತಾ ಹೇಳಿ ‘ನೀನು ನಕಲಿ ಡಾಕ್ಟರ ಇದ್ದೀಯಾ’ ಎಂದು ಹೇಳಿ ಹೆದರಿಸಿರುವುದಷ್ಟೆ ಅಲ್ಲದೇ ವಿಡಿಯೋ ಮಾಡಿ ಬ್ಲಾಕ್ ೇಲ್ ಮಾಡಿದ್ದಾರೆ. ‘ ನೀನು ನಮಗೆ 2.50 ಲಕ್ಷರೂಪಾಯಿ ಕೊಡಬೇಕು. ಇಲ್ಲದಿದ್ದರೇ ನೀನು ನಕಲಿ ವೈದ್ಯ ಅಂತಾ ನ್ಯೂಸ್ ಮಾಡಿ ಚಾನೆಲ್ ಗಳಲ್ಲಿ ಹಾಕುತ್ತೇವೆ’ ಎಂದು ಹೆದರಿಸಿದ್ದಾರೆ.
ನಂತರ ಫೆ. 13 ರಂದು ರಂದು ವಿಜಯ ನಿವ್ಸ್ 9 ಎಂಬ ಯೂಟ್ಯೂಬ್ ಚಾನಲ್ ದಲ್ಲಿ ಸುದ್ದಿ ಒಂದನ್ನು ಪ್ರಸಾರ ಮಾಡಿ, ಫಿರ್ಯಾದುದಾರರಿಗೆ ಮತ್ತೆ ಫೋನ್ ಮಾಡಿ ‘ನೋಡು ಈಗಾಗಲೇ ಸಣ್ಣ ಚಾನಲ್ ದಲ್ಲಿ ನಿನ್ನ ಸುದ್ದಿ ಪ್ರಸಾರ ಮಾಡಿದ್ದೇವೆ. ನೀನು ನಮಗೆ 2.50 ಲಕ್ಷ ರೂಪಾಯಿ ಕೊಡದಿದ್ದರೆ , ಇನ್ನೂ ನೀನು ನಕಲಿ ವೈಧ್ಯ ಅಂತಾ ಇನ್ನೂ ದೊಡ್ಡ ದೊಡ್ಡ ಚಾನೆಲ್ ಗಳಲ್ಲಿ ಪ್ರಸಾರ ಮಾಡುತ್ತೇವೆ. ತಾಲೂಕಾ ವೈಧ್ಯಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಎಸ್.ಪಿ ಸಾಹೇಬರಿಗೆ ಹಾಗೂ ಹೋಮ್ ಮಿನಿಸ್ಟರ್ ರವರಿಗೆ ವಿಡಿಯೋ ಕಳುಹಿಸಿ ನಿನ್ನ ಜೀವನ ಹಾಳು ಮಾಡುತ್ತೇವೆ’ ಎಂದು ಪದೇ ಪದೇ ಫೋನ್ ಮಾಡಿ ಬ್ಲಾಕ್ ಮೇಲ್ ಮಾಡಿ ಹೆದರಿಸಿದ್ದಾರೆ. ಜೊತೆಗೆ ಪದೇ ಫೋನ್ ಮಾಡಿ ಹಣ ಕೊಡುವಂತೆಯೂ ಒತ್ತಾಯಿಸಿದ್ದಾರೆ.
ಫೆ. 17 ರ ಮದ್ಯಾಹ್ನ 2:40 ಗಂಟೆಗೆ ದಾಂಡೇಲಿಯ ಅಶೋಕ ಪರಬರವರ ಕ್ಲಿನಿಕ್ ಗೆ ಮತ್ತೆ ಬಂದು ‘ಹಣ ಕೊಡುವಂತೆ ಹೆದರಿಸಿ’ ಬೆದರಿಸಿದ್ದಾರೆ. ನಂತರ ಅಶೋಕ ಪರಬ ಈ ಮೂವರು ಪತ್ರಕರ್ತರೆಂಬವರ ಮೇಲೆ ದೂರು ದಾಖಲಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ದಾಂಡೇಲಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ. ಕಿರಣ ಪಾಟೀಲ ಹುಬ್ಬಳ್ಳಿ ಮೂಲದ ಆರೋಪಿಗಳಾದ ತಾವು ಪತ್ರಕರ್ತರು ಎಂದು ಹೇಳಿಕೊಂಡಿದ್ದ ವಿಜಯ ಶಂಕರ ಮೇತ್ರಾಣಿ, ಧರ್ಮರಾಜ ನಾರಾಯಣ ಕಠಾರೆ, ಸತೀಶ ಬಾಗವಾನ ಕೇದಾರಿ ಎಂಬ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ, ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಅನಾರೋಗ್ಯದ (ಅನ್ ಫಿಟ್ ). ಕಾರಣದಿಂದ ತಪ್ಪೊಪ್ಪಿಗೆಯ ಮುಚ್ಚಳಿಕೆ ಬರೆಯಿಸಿಕೊಂಡು, ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.

Be the first to comment