ರಾಜ್ಯಕ್ಕೆ ಶುಭ ಸುದ್ದಿ ಕೊಟ್ಟ ಮೈಲಾರಲಿಂಗೇಶ್ವರ ಕಾರ್ಣಿಕ!

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಮೈಲಾರಲಿಂಗೇಶ್ವರ್ ಜಾತ್ರೆ ಸಂಭ್ರಮದಿಂದ ನಡೆದಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಜಾತ್ರೆಯಲ್ಲಿ ಕಾರ್ಣಿಕ ನುಡಿಯಲಾಗಿದ್ದು ಕರ್ನಾಟಕ ಜನತೆಗೆ ಶುಭ ಸುದ್ದಿ ಸಿಕ್ಕಿದೆ. ಹಾಗಾದರೆ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ ಹೇಳಿದ್ದೇನು ಇಲ್ಲಿದೆ ವರದಿ.

12 ಅಡಿ ಎತ್ತರದ ಬಿಲ್ಲೇರಿದ ಗೊರವಯ್ಯ ಹನುಮಗೌಡ ಗುರೇಗೌಡರು ದೈವವಾಣಿ ನುಡಿದಿದ್ದು, ‘ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್’ ಎಂದು ನುಡಿದಿದ್ದಾರೆ. ಮೈಲಾರ ಕಾರ್ಣಿಕದ ಅರ್ಥವನ್ನು ಗ್ರಾಮಸ್ಥರು ತಿಳಿಸಿದ್ದು ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂದು ವಿಶ್ಲೇಷಣೆ ಮಾಡಿರುವುದಾಗಿ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಈ ಬಾರಿ ಉತ್ತಮ ಮಳೆ ನಿರೀಕ್ಷೆ. ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಉತ್ತಮವಾಗಿದ್ದ ಕಾರಣ ರಾಜ್ಯದಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಮುಖ್ಯವಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು ಬೇಸಿಗೆಯಲ್ಲೂ ಈ ಬಾರಿ ನೀರಿಗೆ ಸಮಸ್ಯೆ ಇರುವುದಿಲ್ಲ ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನು ಈ ವರ್ಷ ಕೂಡ ಉತ್ತಮ ಮಳೆಯಾದರೆ ರಾಜ್ಯದ ಕೆರೆ ಕಟ್ಟೆಗಳು ಭರ್ತಿಯಾಗಲಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ. ಕಳೆದ ವರ್ಷ ರಾಜ್ಯದಲ್ಲಿ ಸರಿಯಾಗಿ ಮಳೆಯಾಗಿರಲಿಲ್ಲ, ಈ ವರ್ಷ ಮುಂಗಾರು ವೇಳೆಗೆ ವ್ಯಾಪಕ ಮಳೆಯನ್ನು ತರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಳೆದ ವರ್ಷ ನುಡಿದಿದ್ದ ಕಾರ್ಣಿಕ
ಕಾರ್ಣಿಕಗಳನ್ನು ರಾಜ್ಯದ ಜನ ನಂಬುತ್ತಾರೆ. ಅನೇಕ ಬಾರಿ ಕಾರ್ಣಿಕಗಳು ನಿಜವಾದದ್ದೂ ಇದೆ. ಕಳೆದ ವರ್ಷ ಹೂವಿನಹಡಗಲಿ ತಾಲೂಕಿನ ಮೈಲಾರದ ಐತಿಹಾಸಿಕ ಮೈಲಾರಲಿಂಗ ಸಂಪಾಯಿತಲೇ ಪರಾಕ್ ಎಂದು ನುಡಿದಿದ್ದ ಕಾರ್ಣಿಕ ನಿಜವಾಗಿತ್ತು. ದೈವವಾಣಿಯಂತೆ ರಾಜ್ಯದಲ್ಲಿ ಮಳೆ ಉತ್ತಮವಾಗಿತ್ತು. 2023ರಲ್ಲಿ ಬರಗಾಲದಿಂದ ತತ್ತರಿಸಿದ್ದ ಕರ್ನಾಟಕ ರಾಜ್ಯಕ್ಕೆ ಈ ಕಾರ್ಣಿಕ ನಿಟ್ಟುಸಿರು ಬಿಡುವಂತೆ ಮಾಡಿತ್ತು. ನಂಬಿಕೆಯಂತೆ ರಾಜ್ಯಾದ್ಯಂತ ಭರ್ಜರಿ ಮಳೆಯಾಗಿದ್ದು, ಎಲ್ಲಾ ಜಲಾಶಯಗಳು ತುಂಬಿ ಹರಿದಿವೆ.

ಈ ವರ್ಷ ಕೂಡ ರಾಜ್ಯದಲ್ಲಿ ಸುಭಿಕ್ಷವಾಗಿ ಮಳೆಯಾಗಿ, ರೈತರ ಬೆಳೆ ಬಂಗಾರವಾಗಲಿ ಎಂದು ಭಕ್ತರು ಬೇಡಿಕೊಂಡಿದ್ದಾರೆ.

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*