140 ಗೃಹ ರಕ್ಷಕ ಸಿಬ್ಬಂದಿಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕಾರವಾರ : ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳ ದಲ್ಲಿ 140 ಜನರನ್ನು ಹೊಸದಾಗಿ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಹೋಂ ಗಾರ್ಡ್ ಜಿಲ್ಲಾ ಕಮಾಂಡೆಂಟ್ ಡಾ.ಸಂಜು ತಿಮ್ಮಣ್ಣ ನಾಯಕ ತಿಳಿಸಿದ್ದಾರೆ.

ಈ ಬಗ್ಗೆ ಗೃಹ ರಕ್ಷಕ ದಳ ಪ್ರಕಟಣೆ ನೀಡಿದೆ. ಆಸಕ್ತಿ ಇದ್ದವರು ಹತ್ತನೇ ತರಗತಿ ಪಾಸ್ ಆಗಿರಬೇಕು, 19 ವರ್ಷಕ್ಕಿಂತ ಮೇಲ್ಪಟ್ಟ , 50 ವರ್ಷ ದೊಳಗಿನ ಪುರುಷ ಮತ್ತು ಮಹಿಳೆಯರಿಗೆ ಮುಕ್ತ ಅವಕಾಶವಿದೆ.
ಕಂಪ್ಯೂಟರ್ ಜ್ಞಾನ ಇದ್ದವರಿಗೆ, ಹೆವಿ ಡ್ರೈವಿಂಗ್ ಲೈಸೆನ್ಸ್, ಅಡುಗೆ ಭಟ್ಟರು, ಮೆಕಾನಿಕ್, ಪೈಂಟರ್, ಪ್ಲಂಬರ್ ಹಾಗೂ ಎನ್. ಸಿ.ಸಿ. ಮತ್ತು ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ಇದ್ದವರಿಗೆ ಮೊದಲ ಪ್ರಾಶಸ್ತ್ಯ ನೀಡಿ ನೇಮಕಾತಿ ಮಾಡಿಕೊಳ್ಳಾಗುತ್ತದೆ.

ಅರ್ಜಿಯನ್ನು ಗೃಹ ರಕ್ಷಕ ದಳದ ಜಿಲ್ಲಾ ಕಛೇರಿ, ಸರ್ವೋದಯ ನಗರ, ದಿವೆಕರ್ ಕಾಮರ್ಸ್ ಕಾಲೇಜ್ ಎದುರು, ಕೋಡಿಭಾಗ, ಕಾರವಾರ ಇಲ್ಲಿಗೆ ಸಲ್ಲಿಸಬೇಕು. ಅರ್ಜಿಯನ್ನು ಉಚಿತವಾಗಿ ನೀಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿ ನೀಡಲು ಕೊನೆಯ ದಿನಾಂಕ ಮಾರ್ಚ್ 3 ಕೊನೆಯ ದಿನವಾಗಿದೆ. ತಾಲ್ಲೂಕು ಸರಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೇಟ್ ಜೊತೆಗೆ ಆಧಾರ ಕಾರ್ಡ ಮತ್ತು ಎಸ್.ಎಸ್.ಎಲ್. ಸಿ ಮಾರ್ಕ್ಸ್ ಕಾರ್ಡನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕೃತ ಮಾಡಿಕೊಂಡು ಅರ್ಜಿ ಜೊತೆಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ 08382 -200137 / 226361 ಅಥವಾ 9480898775 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

1 Comment

Leave a Reply

Your email address will not be published.


*