
ದಾಂಡೇಲಿ : ಇಲ್ಲಿಯ ಟಿಂಬರ್ ಡಿಪೋ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಅಪರಿಚಿತ ಮೃತದೇಹವೊಂ ಕೊಳತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದಾಂಡೇಲಿಯ ಟಿಂಬರ್ ಡಿಪೋ ಅರಣ್ಯ ಕಚೇರಿಗೆ ಹೋಗುವ ದಾರಿಯಲ್ಲಿರುವ ಟಿಂಬರ್ ಡಿಪೋ ವ್ಯಾಪ್ತಿಯಲ್ಲಿ ಈ ಮೃತ ದೇಹ ಪತ್ತೆಯಾಗಿದೆ. ಕನಿಷ್ಠ 8-10 ದಿನಗಳ ಹಿಂದೆಯೇ ಈ ಸಾವು ಸಂಭವಿಸಬಹುದು ಎಂದು ಅಂದಾಜಿಸಲಾಗಿದ್ದು, ಇದು ಭಿಕ್ಷಕ ಅಥವಾ ಯಾವುದೋ ಅನಾಥ ವ್ಯಕ್ತಿಯ ಶವ ಇರಬಹುದೆಂದು ಅಂದಾಜಿಸಲಾಗಿದೆ.
ಈ ವ್ಯಕ್ತಿ ಅದೇ ಸ್ಥಳದಲ್ಲಿ ಮಲಗಿದ್ದ ಎಂದು ಅಂದಾಜಿಸಲಾಗಿದ್ದು, ಆತನ ಮೃತ ದೇಹ ಚಾದರ್ ಹೊದ್ದುಕೊಂಡ ಸ್ಥಿತಿಯಲ್ಲಿದೆ. ಈ ದೇಹದ ಮೇಲೆ ಮರದ ಒಡಗಿದ ಟೊಂಗೆಯೊಂ ಮುರಿದು ಬಿದ್ದಿದ್ದು, ಇದು ಆತ ಟೊಂಗೆ ಮುರಿದು ಬಿದ್ದ ಕಾರಣಕ್ಕೆ ಸತ್ತಿರುವನೋ ಅಥವಾ ಸತ್ತ ಮೇಲೆ ಟೊಂಗೆ ಬಿದ್ದಿರುವುದೇ ತಿಳಿಯುತ್ತಿಲ್ಲ.
ಈ ಮೃತ ವ್ಯಕ್ತಿ ಕೆಲ ದಿನಗಳಿಂದ ಇಲ್ಲಿ ವಾಸವಿರಬಹುದು ಎಂದು ಹೇಳಲಾಗಿದ್ದು, ಅದಕ್ಕೆ ಅಲ್ಲಿ ಲಭ್ಯವಾಗಿರುವ ಆತನ ಬಟ್ಟೆ ಬರೆ, ಹೊದಿಕೆಗಳು ಸಾಕ್ಷಿ ಎಂಬಂತಿವೆ.
ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment