ಪುಸ್ತಕ ಖರೀದಿಗಾಗಿ ಲೇಖಕ, ಪ್ರಕಾಶಕರಿಂದ ಅರ್ಜಿ ಆಹ್ವಾನ

ಕಾರವಾರ: ಸಾರ್ವಜನಿಕ ಗ್ರಂಥಾಲಯ
ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರದವರು 2024-25 ನೇ ಸಾಲಿನಲ್ಲಿ ಪ್ರಕಟವಾದ ಉತ್ತರಕನ್ನಡ ಜಿಲ್ಲೆಯ ಲೇಖಕರು ಮತ್ತು ಪ್ರಕಾಶಕರಿಂದ ಖರೀದಿಸಲು ಅರ್ಜಿ ಆಹ್ವಾನಿಸಿದೆ. ಪುಸ್ತಕವನ್ನು ಸರ್ಕಾರದ ನಿಯಮಾನುಸಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಕೋಟಾದಲ್ಲಿ ಖರೀದಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಿನಾಂಕ: 1-1-2024 ರಿಂದ 31-12-2024 ರ ಅವಧಿಯಲ್ಲಿ ಪ್ರಥಮ ಮುದ್ರಣಗೊಂಡ ಸಾಹಿತ್ಯ,
ಕಲೆ, ವಿಜ್ಞಾನ, ಪಠ್ಯ ಪುಸ್ತಕ ಸಾಂದರ್ಭಿಕ, ಮಕ್ಕಳ ಸಾಹಿತ್ಯ ವಿಷಯಗಳ ಕನ್ನಡ, ಆಂಗ್ಲ ಮತ್ತು ಇತರೆ ಭಾಷೆಯ ಪುಸ್ತಕವನ್ನು ಖರೀದಿಸಲು ಉತ್ತರಕನ್ನಡ ಜಿಲ್ಲೆಯ ಲೇಖಕ, ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಪುಸ್ತಕದ ಪೂರ್ಣ ವಿವರದೊಂದಿಗೆ ಖರೀದಿಗಾಗಿ 1 ಪುಸ್ತಕದ ಪ್ರತಿಯ ಅರ್ಜಿಯನ್ನು ಲಗತ್ತಿಸಿ ಫೆ.24 ರೊಳಗೆ ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರ ಕಾರ್ಯಾಲಯಕ್ಕೆ
ತಲುಪಿಸಬೇಕು. ಮತ್ತು ಬೆಲೆ ನಿಗದಿ ಬಗ್ಗೆ ಸರ್ಕಾರದ ಆದೇಶದಂತೆ ಪುಸ್ತಕದಲ್ಲಿ ಉಪಯೋಗಿಸಿರುವ ಕಾಗದ, ಮುದ್ರಣ, ಬೈಡಿಂಗ್, ಸೈಜ್ ಇನ್ನಿತರ ವಿಷಯಕ್ಕೆ ಅನುಗುಣಕ್ಕನುಸಾರವಾಗಿ ಬೆಲೆ ನಿಗದಿ ಪಡಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರ ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*