ದಾಂಡೇಲಿ: ಕಳೆದ ಎರಡು ವರ್ಷಗಳ ಹಿಂದೆ ದಾಂಡೇಲಿಗೆ ಹತ್ತಿರದ ಬಚ್ಚಿ ವಲಯ ವ್ಯಾಪ್ತಿಯಲ್ಲಿ ನಡೆದಿದ್ದ ಹುಲಿ ಹತ್ಯೆಯ ಘಟನೆಗೆ ಸಂಬಂಧಪಟ್ಟಂತೆ ಅರಣ್ಯ ಅಧಿಕಾರಿಗಳು ಬೆಳಗಾವಿಯ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮತ್ತೋರ್ವನನ್ನ ವಿಚಾರಣೆಗೊಳಪಡಿಸಿದ್ದಾರೆ.
2022ರ ಡಿಸೆಂಬರ್ 18ರಂದು ಭರ್ಚಿಯಲ್ಲಿ ಹುಲಿ ಹತ್ಯೆ ಮಾಡಿದ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಅಧಿಕಾರಿಗಳು ಹಲವು ದಿಕ್ಕುಗಳಿಂದ ತನಿಖೆ ನಡೆಸಿದ್ದರು. ಸಿಸಿ ಕ್ಯಾಮೆರಾ ಹಾಗೂ ಮೊಬೈಲ್ ಟವರ್ ಇನ್ನಿತರೆ ತನಿಖೆಗಳಿಂದ ಬೆಳಗಾವಿಯ ಅತ್ತಿವಾಡದ ಸೋಮನಾಥ್ ಪಾಟೀಲ್ ಎಂಬತನನ್ನು ಬಂಧಿಸಿರುವ ಜಗಲಪೇಟ ಅರಣ್ಯ ಅಧಿಕಾರಿಗಳು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮತ್ತೋರ್ವ ಶಂಕಿತ ಆರೋಪಿ ಬೆಳಗಾವಿಯ ತಾನಾಜಿಗಲ್ಲಿಯ ಇಂದ್ರಜಿತ್ ಗಸರಿ ಎಂಬಾತನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಹೋಂ ಸ್ಟೇ ಮಾಲಕನೋರ್ವನನ್ನು ಕೂಡ ಅರಣ್ಯಾಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ ಎಂಬ ಮಾಹಿತಿಯಿದೆ. ಶಂಕಿತ ಆರೋಪಿಗಳು ಹೋಂ ಸ್ಟೇಯಲ್ಲಿ ವಾಸ್ತವ್ಯ ಇದ್ದು ಈ ಘಟನೆ ನಡೆಸಿದಿದ್ದರೆ ಎಂದು ಹೇಳಲಾಗುತ್ತಿದೆ.
ಜಗಲಪೇಟ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳು ಈ ಘಟನೆಗೆ ಸಂಬಂಧಪಟ್ಟಂತೆ ತೀವ್ರ ವಿಚಾರಣೆ ಮುಂದುವರೆಸಿದ್ದಾರೆ.
They should be punished