
‘ಪ್ರತಿಯೊಬ್ಬ ಮನುಷ್ಯನಿಗೂ ಮಹತ್ವಕಾಂಕ್ಷೆ ಯಿರುತ್ತದೆ. ಮಹತ್ವಕಾಂಕ್ಷೆ ಇರುವುದು ತಪ್ಪಲ್ಲ. ಆದರೆ ಆ ಮಹತ್ವಕಾಂಕ್ಷೆಗಳೆಲ್ಲವೂ ಈಡೇರುತ್ತವೆ ಎಂದೇನು ಇಲ್ಲ. ಹಾಗೆಯೇ ಈಗ ಮುಖ್ಯಮಂತ್ರಿಯ ವಿಚಾರ ಮಾತನಾಡುವ ಸಮಯವೂ ಅಲ್ಲ. ಯಾಕೆಂದರೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ. ದೇಶಪಾಂಡೆ ನುಡಿದರು.
ದಾಂಡೇಲಿಗೆ ಆಗಮಿಸಿದ್ದ ಅವರನ್ನು ಮಾಧ್ಯಮದವರು ಪ್ರಶ್ನಿಸಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು ನಾನು ಮೈಸೂರಿಗೆ ರಾಮಕೃಷ್ಣಾಶ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯ ಪತ್ರಕರ್ತರು ನನ್ನನ್ನ ಪ್ರಶ್ನಿಸಿದಾಗ ನಾನು ಹೇಳಿದ್ದು ನಿಜ. ಆಗಲೂ ಇದನ್ನೇ ಹೇಳಿದ್ದೆ. ಮುಖ್ಯಮಂತ್ರಿ ಹುದ್ದೆಯ ವಿಚಾರ ಈಗ ಪ್ರಸ್ತುತವಲ್ಲ. ಆ ಬಗ್ಗೆ ಚರ್ಚೆ ಬೇಡ. ಹಾಗೂ ಒಮ್ಮೆ ಆಗುವುದೇ ಇದ್ದರೆ ಸಿದ್ದರಾಮಯ್ಯನವರ ಸಮ್ಮತಿ ಬೇಕಲ್ಲ…? ಅಂತ ಹೇಳಿದ್ದೆ.
ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾರೆ. ಹಾಗಾಗಿ ಆ ಪ್ರಶ್ನೆ ಈಗ ಉದ್ಭವ ಆಗುವುದೇ ಇಲ್ಲ. ಯಾವ ಸಮಯದಲ್ಲಿ ಏನನ್ನು ಮಾತನಾಡಬೇಕು ಅದನ್ನು ಮಾತನಾಡೋಣ. ಇದು ಆ ಸಮಯವಲ್ಲ. ಜೊತೆಗೆ ಮುಖ್ಯಮಂತ್ರಿ ಹುದ್ದೆಯು ಕುರ್ಚಿಯು ಕೂಡ ಕಾಲಿ ಇಲ್ಲ ಎಂದು ನುಡಿದು, ನಡೆದರು

Be the first to comment