ದಾಂಡೇಲಿ: ಬೀದಿಬದಿ ವ್ಯಾಪಾರಿಗಳಿಗೆ ಹಲವು ಸಮಸ್ಯೆಗಳು ಇರುವ ಬಗ್ಗೆ ನಮ್ಮ ಗಮನಕ್ಕೆ ಇದೆ. ವ್ಯಾಪಾರಿಗಳೂ ಸಹ ಸ್ವಚ್ಛತೆ ಮತ್ತು ಕೆಲಸಗಳಲ್ಲಿ ಸಹಕರಿಸಬೇಕು. ಬೀದಿಬದಿ ವ್ಯಾಪಾರಿಗಳಿಗೆ ಅವಶ್ಯವಾಗಿರುವ ಸೌಕರ್ಯಗಳನ್ನು ಒದಗಿಸಲು ನಗರಾಡಳಿತ ಸದಾ ಸಿದ್ಧವಿರುತ್ತದೆ ಎಂದು ದಾಂಡೇಲಿ ನಗರಸಭಾ ಅಧ್ಯಕ್ಷ ಅಶ್ಪಾಕ್ ಅಹಮದ್ ಶೇಖ್ ನುಡಿದರು.
ಅವರು ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು .
ನಗರಸಭೆ ಮಾಜಿ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರ ಬೀದಿ ಬದಿ ವ್ಯಾಪಾರಿಗಳು ತಮ್ಮ ತಮ್ಮ ವ್ಯಾಪಾರದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಣಿ ಗೌಡ , ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅಬ್ಬಾಸ್ ಮುಲ್ಲಾ , ಬೀದಿಬತಿ ವ್ಯಾಪಾರಿಗಳ ಸಮಸ್ಯೆ ಕುರಿತು ಮಾತನಾಡಿ ಸರ್ಕಾರ ಮಟ್ಟದಲ್ಲಿ ಆಗಿರುವ ಕಾನೂನುಗಳು ಹಾಗೂ ನೀಡುವ ಸೌಲತ್ತುಗಳ ಬಗ್ಗೆ ತಿಳಿಸಿದರು. ಬೀದಿಬದಿ ವ್ಯಾಪಾರಿಗಳ ಸಂಘದ ಕಾರವಾರ ತಾಲೂಕು ಘಟಕದ ಅಧ್ಯಕ್ಷ ಪಕೀರಪ್ಪ ಭಂಡಾರಿ, ನಗರಸಭಾ ಸದಸ್ಯರಾದ ಮೌಲಾಲಿ ಮುಲ್ಲಾ, ಶಾಹಿದ ಪಠಾಣ, ರುಕ್ಮಿಣಿ ಬಾಗಡೆ , ರುಹಿನಾ ಖತೀಬ, ಸಪೂರ ಯರಗಟ್ಟಿ, ವೆಂಕಟರಮಣಮ್ಮ ಮೈತುಕುರಿ, ಎ.ಎಸ್.ಐ. ಎಂ.ಬಿ. ನಿಂಬುವಾಲೆ, ಕರವೇ ಜಿಲ್ಲಾ ಉಪಾಧ್ಯಕ್ಷ ಸಾಧಿಕ್ ಮುಲ್ಲಾ ಮುಂತಾದವರಿದ್ದರು.
ಬೀದಿ ಬದಿ ವ್ಯಾಪಾರಿಗಳ ಸಂಘದ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ಸಿಲೇಮಾನ್ ಸೈಫುದ್ದೀನ್ ಶೇಖ್ ಕಾರ್ಯಕ್ರಮವನ್ನು ಸಂಘಟಿಸಿ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
ಸಂಘಟನೆಯ ಪ್ರಮುಖರಾದ ಪ್ರಕಾಶ ಗೋಂದಳಿ, ಗೌರೀಶ ದೇಸಾಯಿ, ಮಹಮ್ಮದ್ ಶಫಿ ತಡಕೋಡ, ರಿಯಾಜ ಅಹ್ಮದ ಲಿಂಬುವಾಲೆ ಮುಂತಾದಚರು ಸಹಕರಿಸಿದರು.
Be the first to comment