ದೇಶಪಾಂಡೆ ಆರ್ ಸೆಟಿಯ ಬ್ಯೂಟಿ ಪಾರ್ಲರ ತರಬೇತಿಯ ಸಮಾರೋಪ

ದಾಂಡೇಲಿ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಹಸನ್ಮಾಳ ಹಾಗೂ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ದಾಂಡೇಲಿಯವರ ಸಹಯೋಗದೊಂದಿಗೆ ಆರಂಭಿಸಿದ ೧೫ ದಿನಗಳ ಬ್ಯುಟಿ ಪಾರ್ಲರ್ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮ ಹಸನ್ಮಾಳನದಲ್ಲಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ ಸಭಾಂಗಣದಲ್ಲಿ ನಡೆಯಿತು.

ಯೋಜನಾಧಿಕಾರಿ ಮಹಾಬಲೇಶ್ವರ್ ನಾಯ್ಕ್ ಪ್ರಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ಡಾ. ತೃಪ್ತಿ ನಾಯಕ ಭಾಗವಹಿಸಿ ಶುಭಾಶಯ ಮಾತನಾಡಿದರು. ದೇಶಪಾಂಡೆ ರುಡ್ ಸೆಟಿಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಜನರು ಇಂತಹ ತರಬೇತಿಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.

ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ಜೆ.ಆರ್ ,
ಯೋಜನಾ ಸಂಯೋಜಕ ವಿನಾಯಕ್ ಚವ್ವಾಣ
ಶುಭ ಕೋರಿ ಮಾತನಾಡಿದರು.

   ಸಂಸ್ಥೆಯ ನಿರ್ದೇಶಕ ಪ್ರಶಾಂತ ಬಡ್ಡಿ ಅಧ್ಯಕ್ಷತೆ ವಹಿಸಿದ್ದರು.  ಕೆನರಾ ಬ್ಯಾಂಕನ ಗ್ರಾಹಕ  ಅಧಿಕಾರಿ ಶಂಕರ ಕಲಶೆಟ್ಟಿ, ಸಂಪನ್ಮೂಲ ವ್ಯಕ್ತಿ ನಾಸಿಯಾ ನವಾಬ್, ಕ್ಷೇತ್ರಾಧಿಕಾರಿ ನಾರಾಯಣ ವಾಡಕರ ಉಪಸ್ಥಿತರಿದ್ದರು. 

ದಿವ್ಯಾ ಕದಂ ನಿರೂಪಿಸಿದರು. ಸುರ‍್ಣಾ ಲಿಂಗಮ್ ಸ್ವಾಗತಿಸಿದರು. ಸವಿತಾ ವಾಲ್ಮೀಕಿ ವಂದಿಸಿದರು. ಸಂಸ್ಥೆಯ ಕ್ಷೆತ್ರಾಧಿಕಾರಿ ನಾರಾಯಣ ವಾಡಕರ ಕರ್ಯಕ್ರಮ ಆಯೋಜಿಸಿದ್ದರು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*