ಜೋಯಿಡಾ ತಾಲೂಕಿನ ಬಾಮಣಗಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದಾಂಡೇಲಿಯ ಗೃಹರಕ್ಷಕದಳ ಘಟಕದವರು ಉಚಿತ ಪಠ್ಯ, ಪುಸ್ತಕ, ಪಾಠೋಪಕರ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಸಂಜು ಟಿ.ನಾಯಕ ಭಾಗವಹಿಸಿ ಮಾತನಾಡುತ್ತ ಗೃಹರಕ್ಷಕ ಸಿಬ್ಬಂದಿಗಳು ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಅವರ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡುವ ಅಳಿಲು ಸೇವೆ ಉತ್ತಮವಾಗಿದ್ದು. ಇದೇ ರೀತಿ ಸಮಾಜಮುಖಿ ಕೆಲಸ ಮಾಡಲಿ ಎಂದು ಹಾರೈಸಿ, ದಾಂಡೇಲಿ ಗೃಹ ರಕ್ಷಕ ದಳ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಸಾಪ್ಟ್ ವೇರ್ ಎಂಜಿನಿಯರ್ ಕುಣಾಲ್ ಘಟಕಾಂಬಳೆ ಗೃಹರಕ್ಷಕ ಸಿಬ್ಬಂದಿಗಳು ತಮ್ಮ ಕರ್ತವ್ಯಗಳ ಜೊತೆ ಸಮಾಜಮುಖಿ ಕೆಲಸ ಕಾರ್ಯಗಳು ಮಾಡುತ್ತಿರುವುದು ಮಾದರಿಯಾದುದೆಂದರು. ದಾಂಡೇಲಿ ಘಟಕದ ಘಟಕಾಧಿಕಾರಿ ಧನಾಜಿ ಕಾಂಬಳೆ ಪ್ರಾಸ್ತಾವಿಕ ಮಾತನಾಫಧಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರು, ಶಾಲೆಯ ಮುಖ್ಯೊಪಾಧ್ಯಕರು, ಶಿಕ್ಷಕರು, ಶಾಲಾ ಮಕ್ಕಳು, ಗೃಹರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
Be the first to comment