ದಾಂಡೇಲಿ: ನೂತನವಾಗಿ ಆಯ್ಕೆಯಾದ ದಾಂಡೇಲಿ ನಗರಸಭಾ ಅಧ್ಯಕ್ಷ ಅಷ್ಪಾಕ್ ಅಹ್ಮದ ಶೇಖ್ , ಉಪಾಧ್ಯಕ್ಷೆ ಶಿಲ್ಪಾ ಕೋಡೆಯವರನ್ನು ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿಸಿ ಗೌರವಿಸಿತು.
ನಗರಾಡಳಿತದ ಅಧ್ಯಕ್ಷರ ಕಚೇರಿಗೆ ತೆರಳಿ ಸನ್ಮಾನಿಸಿದ ಕನ್ನಡ ಸಾಹಿತ್ಯ ಪರಿಷತ್ತಿನವರು ನಗರದ ಅಭಿವೃದ್ಧಿಗೆ ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳುವಂತೆ ಆಶಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ಗೌರವ ಕಾರ್ಯದರ್ಶಿ ಪ್ರವೀಣ ನಾಯ್ಕ, ಗೌರವ ಕೋಶಾಧ್ಯಧ್ಯಕ್ಷ ಶ್ರೀಮಂತ ಮದರಿ, ಹಿರಿಯ ಪತ್ರಕರ್ತ ಯು.ಎಸ್. ಪಾಟೀಲ್, ಸದಸ್ಯರಾದ ನಾಗೇಶ ನಾಯ್ಕ, ಸುರೇಶ್ ಪಾಲನಕರ್, ನರೇಶ ನಾಯ್ಕ, ವೆಂಕಮ್ಮ ನಾಯ್ಕ, ಆಶಾ ದೇಶಭಂಡಾರಿ, ಕಲ್ಪನಾ ಪಾಟೀಲ್ ಮುಂತಾದವರಿದ್ದರು.
Be the first to comment