ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಕಾರ್ಮಿಕರ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಕಂಪನಿಯ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ.
2023 ಜನವರಿ 1 ರಿಂದ ಹೊಸ ವೇತನ ಪರಿಷ್ಕರಣೆಯಾಗಬೇಕು. ಅದು ಈವರೆಗೂ ಆಗಿಲ್ಲ. ಕಂಪನಿಯ ಆಡಳಿತ ಮಂಡಳಿ ಹಾಗೂ ಜಂಟಿ ಸಂಧಾನ ಸಮಿತಿಯ ನಡುವಿನ ಮಾತುಕತೆಯೂ ವಿಫಲವಾಗಿದೆ.
ಕಳೆದ ಬಾರಿ 2019 ರಲ್ಲಿ ಕಂಪನಿಯು ಕಾರ್ಮಿಕರಿಗೆ 4100 ರೂ. ಕಂಪನಿಗೆ ತಗಲುವ ವೆಚ್ಚ ನೀಡಿತ್ತು. ಈ ಬಾರಿ ಜಂಟಿ ಸಂಧಾನ ಸಮಿತಿಯು 7002 ರು.ಗಳ ಬೇಡಿಕೆಯನ್ನು ಆಡಳಿತ ಮಂಡಳಿಯ ಮುಂದಿಟ್ಟಿದೆ. ಆದರೆ ಆಡಳಿತ ಮಂಡಳಿ 3600 ರೂ ನೀಡುವುದಾಗಿ ಹೇಳಿರುವ ಮಾಹಿತಿಯಿದೆ. ಇದನ್ನು ಜೆ.ಎನ್.ಸಿ. ಒಪ್ಪಿಲ್ಲ.
ಕಳೆದ ಬಾರಿಗಿಂತ ಹೆಚ್ಚಿಗೆ ಬಂದರೆ ಮಾತ್ರ ಮಾತುಕತೆ ನಡೆಸೋದು ಎಂಬ ಶರತ್ತನ್ನು ಜಂಟಿಸಂಧಾನ ಸಮಿತಿ ಹಾಕಿದ್ದು, ಅಲ್ಲಿಯವರೆಗೂ ಧರಣಿ ಮುಂದುವರೆಸುತ್ತೇವೆ ಎಂದಿದ್ದಾರೆ.
ಕಂಪನಿಯ ಆವರಣದ ರಂಗನಾಥ ಸಭಾಗಂಣದ ಎದುರು ಸರಣಿ ಧರಣಿ ನಡೆಯುತ್ತಿದ್ದು ಧರಣಿಯಲ್ಲಿ ಕಾರ್ಮಿಕ ಮುಖಂಡರ ಜೊತೆ ಕಾರ್ಮಿಕರು ಭಾಗವಹಿಸುತ್ತಿದ್ದಾರೆ.
ಜಂಟಿ ಸಂಧಾನ ಸಮಿತಿಯ ಅಧ್ಯಕ್ಷ ಎಸ್.ವಿ. ಸಾವಂತ, ಕಾರ್ಯದರ್ಶಿ ವಿಷ್ಣು ವಾಜ್ವೆ, ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರೆದಿದೆ
Be the first to comment