ಸ್ವಾತಂತ್ರ್ಯೋತ್ಸವದ ಅಂಗವಾಗಿ ದಾಂಡೇಲಿಯ ವನವಾಸಿ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿ ಗಳಿಗೆ ಸೆಂಟ್ ಮಿಲಾಗ್ರಿಸ್ ಸಹಕಾರಿಯವರು ಬೆಡ್ ಶೀಟ್ ವಿತರಿಸಿ ಸಹಕರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡುತ್ತ ಸೆಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಸಹಕಾರಿಯು ಜಿಲ್ಲೆಯಾದ್ಯಂತ ತನ್ನ ಸಹಕಾರಿ ಕಾರ್ಯದ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಕೂಡ ಮಾಡಿಕೊಂಡು ಬಂದಿದೆ. ಅಸಹಾಯಕರಿಗೆ, ಬಡವರಿಗೆ, ಸಂತ್ರಸ್ತರಿಗೆ ಹಲವು ರೀತಿಯ ನೆರವನ್ನು ನೀಡುತ್ತಾ ಬಂದಿದೆ. ಅದೇ ರೀತಿ ದಾಂಡೇಲಿಯ ವನವಾಸಿ ಕಲ್ಯಾಣದ ವಿದ್ಯಾರ್ಥಿನಿ ಯರಿಗೂ ಪ್ರತಿ ವರ್ಷ ಬೆಡ್ ಶೀಟ್ ಹಾಗೂ ಇತರ ಸಾಮಗ್ರಿಗಳನ್ನ ನೀಡುತ್ತಿರುವುದು ಸ್ಮರಣಾರ್ಹವಾಗಿದೆ ಎಂದರು.
ವನವಾಸಿ ವಸತಿ ನಿಲಯದ ಅಧ್ಯಕ್ಷರಾದ ಸಂತೋಷ್ ಅಣ್ವೇಕರ್ ಹಾಗೂ ಪ್ರಮುಖರಾದ ವಾಸುದೇವ್ ಜೋಶಿಯವರು ವನವಾಸಿ ಕಲ್ಯಾಣ ನಿಲಯದ ಬಗ್ಗೆ ತಿಳಿಸಿ ಸೆಂಟ್ ಮಿಲಾಗ್ರಿಸ್ ಕೊ ಆಪರೇಟಿವ್ ಶಾಖೆ ಪ್ರತಿ ವರ್ಷ ಸಹಕರಿಸುತ್ತಿರುವುದನ್ನು ಸ್ಮರಿಸಿದರು. ನಿವೃತ್ತ ಯೋಧ ಸಂತೋಷ ನಾಯ್ಕ, ಸಾಲ ವಸೂಲಾತಿಯ ವ್ಯವಸ್ಥಾಪಕ ಇಂತ್ರೂ ಕ್ರಿಶ್ಚನ್, ದಾಂಡೇಲಿ ಶಾಖೆಯ ವ್ಯವಸ್ಥಾಪಕ ದತ್ತಾತ್ರೇಯ ಕೋಟೆಮನೆ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳು ದೇಶಭಕ್ತಿಯ ನೃತ್ಯ ಪ್ರದರ್ಶನ ನಡೆಸಿದರು. ವೈಶಾಲಿ ಶೆಟ್ಟಿ ಸ್ವಾಗತಿಸಿದರೆ, ಮೌರ್ಯ ನಾಯಕ ನಿರೂಪಿಸಿ, ವಂದಿಸಿದರು ಸೇಂಟ್ ಮಿಲಾಗ್ರಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
Be the first to comment