ಸಧ್ಯದಲ್ಲಿಯೇ ‘ದಾಂಡೇಲಿ ಸ್ಕ್ಯಾನ್ ಸೆಂಟರ್’ ಆರಂಭ

ದಾಂಡೇಲಿಗರ ಬಹುದಿನಗಳ ಕನಸು ನನಸಾಗುವತ್ತ…

ದಾಂಡೇಲಿಗೊಂದು ಸ್ಕ್ಯಾನ ಸೆಂಟರ್ ಬೇಕಿತ್ತು….’ ಎಂಬುದು ಈ ಭಾಗದ ಜನರ ಬಹುದಿನಗಳ ಕನಸಾಗಿತ್ತು. ಸದ್ಯದಲ್ಲಿಯೇ ದಾಂಡೇಲಿಗರ ಈ ಕನಸು ನನಸಾಗಲಿದೆ. ನಿಜಕ್ಕೂ ಇದು ಖುಶಿಯ ವಿಚಾರ. ಯಾಕೆಂದ್ರೆ ‘ ಒಂದು ಸ್ಕ್ಯಾನ್ ಮಾಡಿಸಿಕೊಳ್ಳಬೇಕೆಂದರೆ ಇಲ್ಲಿಯವರು ಹುಬ್ಬಳ್ಳಿ, ಧಾರವಾಧ, ಬೆಳಗಾವಿಗೆ ಹೋಗಬೇಕಿತ್ತು. ಅಲ್ಲಿಗೆ ಮುಟ್ಟುವಷ್ಟರಲ್ಲಿ ಮತ್ತಿನ್ನೇನೋ ರೋಗ ವೃದ್ಧಿ…. ಅಪಾಯ… ವಾಹನ ಖರ್ಚು ಬೇರೆ…. ಅದರೆ ಇನ್ನುಂದೆ ಹಾಗಲ್ಲ. ಎಲ್ಲ ಸ್ಕ್ಯಾನ ಇಲ್ಲಿಯೇ ಆಗಲಿದೆ. ಇಲ್ಲಿಯ ವೈದ್ಯರೇ ಔಷಧೋಪಚಾರ ನೀಡಬಹುದು. ಧಾರವಾಡ, ಹುಬ್ಬಳ್ಳಿಯ ವೈದ್ಯರೂ ರಿಪೋರ್ಟ್ ನೋಡಬಹುದು. ಅಂತರ್ಜಾಲದಲ್ಲಿ ರಿಪೋರ್ಟ ವಿಲೇವಾರಿ… ಶೀಘ್ರ…. ಅತಿ ಶೀಘ್ರವಾಗಿ…

ಹೌದು… ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ದಾಂಡೇಲಿ ಸ್ಕ್ಯಾನ್ ಸೆಂಟರ್ ಇನ್ನೂ ಸಧ್ಯದಲ್ಲಿಯೇ ದಾಂಡೇಲಿಯ ಕರ್ನಾಟಕ ಸಂಘ, ಪಂಚಗಾನ ಭವನದ ಹತ್ತಿರವಿರುವ ಐಎಂಎ ಆವರಣದಲ್ಲಿ ಆರಂಭಗೊಳ್ಳಲಿದೆ.

ಸ್ಕ್ಯಾನ್ ಸೆಂಟರ್ ನ ಯಂತ್ರ ಸಾಮಗ್ರಿಗಳು

ಇದು ಧಾರವಾಡ ಸ್ಕ್ಯಾನ್ ಸೆಂಟರ್ ನ ಒಂದು ಶಾಖೆ , ಇದರಲ್ಲಿ ಎಲ್ಲ ರೀತಿಯ ಸ್ಕ್ಯಾನ್ ಮಾಡಲಾಗುತ್ತದೆ. ದಾಂಡೇಲಿ ಹಾಗೂ ಸುತ್ತಮುತ್ತಲಿನ ಜನರು ಅನಾರೋಗ್ಯ ಪೀಡಿತರಾದಾಗ ತುರ್ತು ಸ್ಕ್ಯಾನ್ ಮಾಡಬೇಕಾದ ಸಮಯ ಬಂದಾಗ ಧಾರವಾಡ, ಹುಬ್ಬಳ್ಳಿ , ಹಾಗೂ ಬೆಳಗಾವಿಯನ್ನ ಅವಲಂಬಿಸಬೇಕಿತ್ತು. ದಾಂಡೇಯಿಂದ ಆ ದೂರದ ಪ್ರಯಾಣದವರೆಗೆ ಸಮಯ ವಿಳಂಬವಾಗಿ ರೋಗ ಇಮ್ಮಡಿಸುತ್ತಿತ್ತು. ಅಪಾಯವು ನಡೆದಿತ್ತು. ಹಾಗೂ ವಾಹನ ವೆಚ್ಚ ಕೂಡ ದುಬಾರಿಯಾಗಿತ್ತು. ಇದನ್ನು ಮನಗಂಡ ಧಾರವಾಡ ಸ್ಕ್ಯಾನ್ ಸೆಂಟರನವರು ದಾಂಡೇಲಿಯ ಐಎಂಎ ಸಂಘಟನೆಯ ಹತ್ತಿರ ಮನವಿ ಮಾಡಿಕೊಂಡು ದಾಂಡೇಲಿಯಲ್ಲಿ ಆರಂಭಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಇದೀಗ ಐಎಮ್ಎ ಸ್ಥಳದಲ್ಲಿ ಸ್ಕ್ಯಾನ್ ಸೆಂಟರ್ ಗಾಗಿ ಕಟ್ಟಡ ನಿರ್ಮಾಣಗೊಂಡಿದೆ. ಈಗಾಗಲೇ ಕೋಟ್ಯಾಂತರ ರೂಪಾಯಿ ವೆಚ್ಚದ ಯಂತ್ರ ಸಾಮಗ್ರಿಗಳು ಬಂದಿದ್ದು , ಪೂಜಾ ಕಾರ್ಯ ಕೂಡ ನೆರವೇರಿದೆ. ಕೆಲವೇ ದಿನಗಳಲ್ಲಿ ಶುಭಾರಂಭಗೊಳಲಿದೆ ಎಂದು ಧಾರವಾಡ ಸ್ಕ್ಯಾನ್ ಸೆಂಟರ್ ನ ಪ್ರಮುಖರಲ್ಲೊಬ್ಬರಾದ ಡಾ. ಆದಿತ್ಯ ಪಾಂಡುರಂಗಿ ತಿಳಿಸಿದ್ದಾರೆ.

ಈ ಪೂಜಾ ಕಾರ್ಯದ ಸಂದರ್ಭದಲ್ಲಿ ಧಾರವಾಡ ಸ್ಕ್ಯಾನ್ ಸೆಂಟರ್ ನ ಅಧ್ಯಕ್ಷರಾದ ಡಾ. ಸುಧೀರ ಜಂಬಗಿ, ಪ್ರಮುಖರಾದ ಡಾ. ಆದಿತ್ಯ ಪಾಂಡುರಂಗಿ. ಡಾ. ಪ್ರಕಾಶ ರಾಮನಗೌಡರ, ಡಾ. ಜ್ಯೋತಿ ಪ್ರಕಾಶ, ಡಾ. ಸತೀಶ ಇರಕಲ್ , ಡಾ. ಸ್ವಪ್ನಾ ಆದಿತ್ಯ ಪಾಂಡುರಂಗಿ ಹಾಗೂ ದಾಂಡೇಲಿಯ ವೈದ್ಯರುಗಳಾದ ಡಾ. ಮೋಹನ ಪಾಟೀಲ, ಡಾ. ಆರ್.ಕೆ. ಕುಲಕರ್ಣಿ, ಡಾ. ಜಿ.ವಿ. ಭಟ್, ಡಾ. ಎಮ್.ವಿ. ಕಾಮತ್, ಡಾ. ಶೇಖರ ಹಂಚನಾಳಮಠ ಮುಂತಾದವರು ಉಪಸ್ಥಿತರಿದ್ದರು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*