ದಾಂಡೇಲಿಯ ಟೌನ್ ಶಿಪ್ ನ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಸುಮಾರು 12.50 ಲಕ್ಷ ರೂ ಮೌಲ್ಯದ ಬಂಗಾರದೊಡವೆಗಳನ್ನು ಕದ್ದೊಯ್ದಿದ್ದಾರೆ.
ಟೌನ್ ಶಿಪ್ ನ ಅಶೋಕ ಶಿವರುದ್ರಪ್ಪ ಹೊಳಿ ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು, ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಮನೆಯ ಮುಂದಿನ ಗೇಟ್ ನ್ನು ಹಾರಿಕೊಂಡು ಬಂದು ಮನೆಯ ಹೊರಗಿನ ಇಂಟರ್ ಲಾಕ್ ಇರುವ ಬಾಗಿಲನ್ನು ಒಡೆದು ಮನೆಯ ಒಳಗೆ ಪ್ರವೇಶ ಮಾಡಿ, ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಬೀಗ ಮುರಿದು, ಒಳ ಲಾಕರ ತೆರೆದು ಕಳ್ಳತನ ನಡೆಸಿದ್ದಾರೆ.
30 ಗ್ರಾಂ ನ ಬಂಗಾರದ ಕಡಾ (ಬಳ), (2 ಲಕ್ಷ 10 ಸಾವಿರ ರೂಪಾಯಿ), 50 ಗ್ರಾಂ ತೂಕದ 2 ಬಂಗಾರದ ಬಳೆ , ( 3 ಲಕ್ಷ 50 ಸಾವಿರ ರೂ) , 50 ಗ್ರಾಂ ನ 4 ಬಂಗಾರದ ಚಿಲವಾರ (ಬಳೆ) ( 3ಲಕ್ಷ 50 ಸಾವಿರ ರೂ ), 15 ಗ್ರಾಂ ನ ಬಂಗಾರದ ಚೈನ್ ( 1 ಲಕ್ಷ 5 ಸಾವಿರ ರೂಪಾಯಿ ), 21 ಗ್ರಾಂ ನ 8 ಬಂಗಾರದ ಸಣ್ಣ ಸಣ್ಣ ತುಂಡುಗಳು ( 1 ಲಕ್ಷ 75 ಸಾವಿರ ರೂಪಾಯಿ , ಬೆಳ್ಳಿಯ ಆರತಿ ಸೆಟ್ 5೦೦ ಗ್ರಾಂ (40 ಸಾವಿರ ರೂ.) ಹೀಗೆ ಒಟ್ಟು 12,30,000/- ರೂ. ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಡಿ.ವೈ.ಎಸ್.ಪಿ. ಶಿವಾನಂದ ಮದರಕಂಡಿ, ಸಿ.ಪಿ.ಐ. ಭೀಮಣ್ಣ ಸೂರಿ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿ.ಎಸ್.ಐ. ಯಲ್ಲಪ್ಪ ಎಸ್. ಪ್ರಕರಣ ದಾಖಲಿಸಿ ಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
Be the first to comment