ಕುಳಗಿಯಲ್ಲಿ ನಡೆದ ಪ್ರಾದೇಶಿಕ ಮಟ್ಟದ ಲಯನ್ಸ್ ಶಿಬಿರಾರ್ಥಿಗಳ ಶಿಬಿರ
ದಾಂಡೇಲಿ : ಕಾಳಿ ಟೈಗರ ಪ್ರದೇಶ ವಿಶಾಲವಾದ ಅರಣ್ಯ ಮತ್ತ ವನ್ಯಜೀವಿ ಸಂಪತ್ತನ್ನು ಹೊಂದಿದೆ, ಇಂದಿನ ದಿನದಲ್ಲಿ ಹವಾಮಾನದ ವೈಪರಿತ್ಯ ವಿಶ್ವದಲ್ಲಿ ಅಪಾರ ಹಾನಿ ಉಂಟುಮಾಡುತ್ತಿದೆ, ನಿಸರ್ಗದ ರಕ್ಷಣೆ ನಾವು ಮಾಡಿದರೆ ಮಾತ್ರ ನಿಸರ್ಗ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ, ಕಾಳಿ ಟೈಗರ ಸಂರಕ್ಷಣಾ ಪ್ರದೇಶದ ನಿರ್ದೇಶಕ ನಿಲೇಶ ಸಿಂಧೆ ನುಡಿದರು.
ಅವರು ದಾಂಡೇಲಿ ಸಮೀಪದ ಕುಳಗಿ ನಾಗಝರಿ ನಿಸರ್ಗ ಕ್ಯಾಂಪನಲ್ಲಿ ನಡೆದ ಪ್ರಾದೇಶಿಕ ಮಟ್ಟದ ಲಯನ್ಸ್ ಪದಾಧಿಕಾರಿಗಳ ತರಬೇತಿ ಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅವರು ಆರೋಗ್ಯ ಶಿಕ್ಷಣ ರಂಗದ ಕಾರ್ಯಕ್ರಮಗಳ ಜೊತೆಗೆ ಲಯನ್ಸ್ ಸಂಸ್ಥೆಯವರು ನಮ್ಮ ಸಂಸ್ಕೃತಿಯ ಭಾಗವಾಗಿರುವ ಗುಡ್ಡಗಾಡು ಜನರ ಆದಿವಾಸಿಗಳ, ನಿರ್ಗತಿಕರ ಜೀವನ ಶೈಲಿ ಸುಧಾರಣೆಗೆ ಹೆಚ್ಚಿನ ಗಮನ ಹರಿಸಿ ಅವರನ್ನು ಶ್ವಾವಲಂಬಿಗಳನ್ನಾಗಿ ಮಾಡಲು ಕಾರ್ಯಯೋಜನೆ ರೂಪಿಸಬೇಕು ಎಂದರು.
ಲಯನ್ಸ್ ಚೇರಮನ್ ಎಂಜೆಎಫ್ ಅರವಿಂದ ಹೆಬಸುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಬರದಲ್ಲಿ ಸಂಪನ್ನಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮಾಜಿ ಲಯನ್ಸ್ ಪಾಂತಪಾಲ ಹರ್ಷ ದೆಸಾಯಿ, ,ಪಿ.ಎಂಜೆ.ಎಫ ದ್ಯಾನೇಶ ನಾಥು , ಎಂಜೆ.ಎಫ ಡಾ ನಿತೇಶ ಜೈನ್ , ಎಂಜೆಫ್ ಸುದೇಶ ಬೋರಕರ್ ಶಿಬಿರಾರ್ಥಿಗಳಿಗೆ ವಿವಿಧ ವಿಷಯಗಳ ಮೇಲೆ ತರಬೇತಿ ನೀಡಿದರು.
ವನಿತಾ ಹೆಬಸುರ ಪ್ರಾರ್ಥಿಸಿದರು. ಯು.ಎಸ್. ಪಾಟೀಲ ಸ್ವಾಗತಿಸಿದರು. ಎನ್ ವಿ ಪಾಟೀಲ ನಿರುಪಿಸಿದರು, ದಾಂಡೇಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಡಾ ಸಂತೋಷ ಚವಾಣ ವಂದಿಸಿದರು. ಕಾರ್ಯದರ್ಶಿ ಡಾ. ನಾಸಿರಅಹಮ್ಮದ ಜಂಗೂಬಾಯಿ, ಸಯ್ಯದ್ ಇಸ್ಮಾಯಿಲ್ ತಂಗಳ ಉಪಸ್ಥಿತರಿದ್ದರು.
Be the first to comment