ದಾಂಡೇಲಿ : ಹುಬ್ಬಳ್ಳಿಯ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಡಾ.ಭಟ್ ಆಸ್ಪತ್ರೆ ದಾಂಡೇಲಿ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ದಾಂಡೇಲಿಯ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಆ.11ರಂದು
ಉಚಿತ ಹೃದಯ ರೋಗ ತಪಾಸಣಾ ಶಿಬಿರ ನಡೆಯಲಿದೆ ಎಂದು ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ಕೇಶವ ರಂಗಾಪುರೆ ತಿಳಿಸಿದರು.
ಅವರು ಡಾ.ಜಿ.ವಿ. ಭಟ್ ಆಸ್ಪತ್ರೆಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಶಿಬಿರದ ಕುರಿತಂತೆ ಮಾಹಿತಿ ನೀಡಿದರು.
ಅಂದು ಮುಂಜಾನೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಈ ಶಿಬಿರವು ಉಚಿತವಾಗಿದ್ದು, ಶಿಬಿರದಲ್ಲಿ ಬಿಪಿ. ಇಸಿಜಿ, 2ಡಿ ಇಕೋ ಮತ್ತು ವೈದ್ಯರೊಂದಿಗೆ ಸಮಾಲೋಚನೆ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಡಾ.ಭಟ್ ಆಸ್ಪತ್ರೆಯ ಮುಖ್ಯಸ್ಥರು ನಗರದ ಖ್ಯಾತ ಹೃದಯ ರೋಗ ತಜ್ಞರಾದ ಡಾ. ಜಿ.ವಿ.ಭಟ್ ಮಾತನಾಡಿ ಇಂದು ಹೃದಯ ರೋಗ ಸಮಸ್ಯೆ ಬಹುತೇಕ ಎಲ್ಲರನ್ನು ಕಾಡುತ್ತಿದೆ. ಹೃದಯ ರೋಗದ ಬಗ್ಗೆ ಯಾರೂ ಕೂಡಾ ನಿರ್ಲಕ್ಷ್ಯ ಮಾಡಬಾರದು. ಎದೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಹಾಗೂ ಹೃದಯ ರೋಗಕ್ಕೆ ಸಂಬಂಧಪಟ್ಟಂತೆ ಲಕ್ಷಣಗಳು ಕಂಡು ಬಂದ ಸಂದರ್ಭದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಈ ಹೃದಯ ರೋಗ ತಪಾಸಣಾ ಶಿಬಿರವು ಬಹಳ ಉಪಯುಕ್ತವಾಗಿದ್ದು, ಹೊರಗಡೆ ನಾಲ್ಕೈದು ಸಾವಿರ ರೂ ವೆಚ್ಚವಾಗುವ ಈ ತಪಾಸಣೆ ಇಲ್ಲಿ ಉಚಿತವಾಗಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಹಿರಿಯರಾದ ಯು.ಎಸ್. ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಶಿಬಿರದ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ 9986827556, 9972537739, 6366919550 ಸಂಪರ್ಕಿಸುವಂತೆ ತಿಳಿಸಿದರು. ಲಯನ್ಸ್ ಕ್ಲಬ್ಬಿನ ವಿಭಾಗಿಯ ಅಧ್ಯಕ್ಷರಾದ ಸಯ್ಯದ್ ಇಸ್ಮಾಯಿಲ ತಂಗಳ್, ಲಯನ್ಸ್ ಕ್ಲಬ್ ಕಾರ್ಯದರ್ಶಿ, ಡಾ. ಎನ್.ಎ. ಜಂಗೂಬಾಯಿ, ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ.ಬಸವರಾಜ ಬಾಳಿ ಉಪಸ್ಥಿತರಿದ್ದರು.
Be the first to comment