ಸರಕಾರಿ ಅಧಿಕಾರಿಗಳು, ಗುತ್ತಿಗೆದಾರರಿಂದಲೇ ಪರಿಶಿಷ್ಟರ ಆಹಾರಕ್ಕೆ ಕುತ್ತು…!!

ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದ ಫಲಾನುಭವಿಗಳಿಗೆ ಸರಕಾರಿ ಅಧಿಕಾರಿಗಳಿಂದಲೇ ಫಂಗನಾಮ?

ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಠ ಪಂಗಡದ ಸಿದ್ದಿ ಸಮುದಾಯದ ಫಲಾನುಭವಿಗಳಿಗೆ ಸರಕಾರದಿಂದ ನಿಡುವ ಅನ್ನಕ್ಕೂ  ಕನ್ನ ಹಾಕಿದರಾ ಅಧಿಕಾರಿಗಳು ಹಾಗೂ ಗುತ್ತಿಗೆದಾರರು…? ಇಂಥಹದ್ದೊಂದು ಪ್ರಶ್ನೆಗೆ ಹೌದೆಂಬ ಉತ್ತರ ಸಿಗುತ್ತಿದೆ ನಮಗೆ ದೊರೆತ ದಾಖಲೆಗಳಿಂದ.

ಕರ್ನಾಟಕ ಸರಕಾರ 2019 ರಲ್ಲಿ ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಠ ಪಂಗಡದ ಕೊರಗ, ಕಾಡು ಕುರುಬ, ಸೋಲಿಗ, ಎರವ, ಸಿದ್ದಿ, ಗೊಂಡ, ಮಲೈಕುಡಿ, ಗೌಡಲು, ಮತ್ತು ಹಸಲರು ಜನಾಂಗದ ಸಮುದಾಯದವರಿಗೆ ಮಳೆಗಾಲದಲ್ಲಿ ಕೆಲಸ ಸಿಗದ ಪ್ರಯುಕ್ತ ಜೀವನ ನಿರ್ವಹಣೆಗಾಗಿ ಮತ್ತು ಇವರುಗಳ ಅಪೌಷ್ಟಿಕತೆ ಯನ್ನು ನಿವಾರಿಸಲು ಪಿ.ಡಿ.ಎಸ್ ರವರು ನೀಡುವ ಆಹಾರ ಪದಾರ್ಥಗಳ ಜೊತೆ ಹೆಚ್ಚುವರಿಯಾಗಿ ಈ ಯೋಜನೆಯಡಿ ಆಹಾರ ಪದಾರ್ಥಗಳನ್ನು ವರ್ಷದಲ್ಲಿ 6 ತಿಂಗಳ ಅವಧಿಗೆ (ಜೂನ್ ದಿಂದ ಡಿಸೆಂಬರ್ ) ಮಾತ್ರ ಸಿಮಿತಗೊಳಿಸಿ ಯೊಜನೆಯನ್ನು ಅನುಷ್ಟಾನಗೊಳಿಸಿರುತ್ತಾರೆ.

ಯೋಜನೆಯ ಪ್ರಕಾರ ಒಂದು ಕುಟುಂಬಕ್ಕೆ ಪ್ರತಿ ತಿಂಗಳು  8 ಕೆ.ಜಿ. ಅಕ್ಕಿ, 3 ಕೆ.ಜಿ. ತೋಗರಿಬೇಳೆ, 1 ಕೆ.ಜಿ  ಕಡಳೆಕಾಳು, 1, ಕೆ.ಜಿ. ಶೆಂಗಾ, 2 ಕೆ.ಜಿ. ಅಲಸಂದಿ, 1 ಕೆ.ಜಿ. ಹೆಸರುಕಾಳು, 1 ಕೆ.ಜಿ. ಸಕ್ಕರೆ, 1ಕೆ.ಜಿ. ಬೆಲ್ಲ-1ಕೆ.ಜಿ, 30 ಮೊಟ್ಟೆ, 2 ಲೀ. ಅಡುಗೆ ಎಣ್ಣೆ,  ಅರ್ಧ ಕೆ.ಜಿ. ನಂದಿನಿ ತುಪ್ಪ ನೀಡಬೇಕೆಂದಿದೆ.

(ಸರ್ಕಾರದ ಆದೇಶ ಸಂಖ್ಯೆ:ಸಕಇ 207 ಪವಯೋ 2018,ದಿನಾಂಕ 22/07/2019 ರಂತೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.)

ಉತ್ತರ ಕನ್ನಡ ಜಿಲ್ಲೆಯಲ್ಲಿ 2011 ನೇ ಜನಗಣತಿಯಂತೆ 34,239 ರಷ್ಟು  ಪರಿಶಿಷ್ಠ ಜನರಿದ್ದಾರೆ. ಅದರಲ್ಲಿ ಹಳಿಯಾಳ , ಜೊಯಿಡಾ, ದಾಂಡೇಲಿ ಹಾಗೂ ಯಲ್ಲಾಪುರ ಮುಂಡಗೋಡದಲ್ಲಿ ಸಿದ್ದಿ ಸಮುದಾಯದ  ಜನರು ಹೆಚ್ಛಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಜೊತೆಗೆ ಇವರೆಲ್ಲ ಹೆಚ್ಚಾಗಿ ಬಡತನ ಮತ್ತು ಅನಕ್ಷರತೆಯಿಂದ ಕೂಡಿರುತ್ತಾರೆ.

ಆದರೆ, ಸರಕಾರದ ಯೋಜನೆಯಂತೆ ಇವರಿಗೆ  ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದಿಂದ ಪೂರೈಸುವ ಆಹಾರಪದಾರ್ಥ ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ. ಹಾಗೂ ನಿಯಮದಂತೆ 75 ಮೈಕ್ರೊ ಏಕಬಳಕೆ ಪ್ಲಾಷ್ಟಿಕ್ ಬ್ಯಾನ್ ಮಾಡಿದರೂ ಸಹಿತ ಅದರಲ್ಲೆ ಆಹಾರ ಪದಾರ್ಥಗಳನ್ನು ಪೂರೈಸುತ್ತಿದ್ದಾರೆ. ಯಾವುದೇ ಸೀಲ್ಡ್ ಚೀಲ (sealed pack )ನಲ್ಲಿ ಪೂರೈಸುತ್ತಿಲ್ಲ.

ಎಲ್ಲ ಆಹಾರ ಪದಾರ್ಥ ಇರುವ ಕಿಟ್ ನ ಮೇಲೆ ಯೊಜನೆಯ ಹೆಸರನ್ನು ನಮೂದಿಸದೇ  ನಿಯಮ ಉಲ್ಲಂಘಿಸಲಾಗುತ್ತಿದೆ. ಟೆಂಡರ್ ಪಡೆದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಒಳ ಒಪ್ಪಂದದಂತೆ ಈ ಗೋಲ್ ಮಾಲ್ ನಡೆಯುತ್ತಿದೆಯೇ ಎಂಬ ಶಂಖೆ ಆ ಜನರದ್ದಾಗಿದೆ.

ಮುಖ್ಯವಾಗಿ  ಜಿಲ್ಲಾ ಪರಿಶಿಷ್ಠ ವರ್ಗದ ಕಲ್ಯಾಣಾಧಿಕಾರಿ  ನಿಡಿದ ಗುರುತಿನ ಚಿಟಿಯಲ್ಲಿ ಗುತ್ತಿಗೆ ಪಡೆದ ಮೊಹರು ಇರುವ ಸೀಲ್ ನ್ನು ಅಗಷ್ಟ್ ತಿಂಗಳು ಬರುವ ಮೊದಲೇ ಅಗಷ್ಟ್ ತಿಂಗಳ ಆಹಾರ ಪದಾರ್ಥ ಪೂರೈಸಲಾಗಿದೆ  ಎಂದು ನಮೂದಿಸಿರುವುದು ನೊಡಿದರೆ ಪರಿಶಿಷ್ಟರ ಅನ್ನಕ್ಕೂ ಕನ್ನ ಹಾಕಿರುವುದು ಸ್ಪಷ್ಟವಾಗಿ ಮೆಲ್ನೊಟಕ್ಕೆ  ಕಂಡುಬರುತ್ತಿದೆ.   (ಈ ದಾಖಲೆ ಕರಾವಳಿ ಮುಂಜಾವುಗೆ ಲಭ್ಯವಾಗಿದೆ) ಈ ಎಲ್ಲ ವಿಚಾರಗಳ  ಬಗ್ಗೆ ಸಮಗ್ರ ತನಿಖೆಯಾದರೆ ಪರಿಶಿಷ್ಠ ಸಿದ್ದಿ ಸಮುದಾಯವರಿಗೆ ವಂಚಿಸಿರುವ ಎಲ್ಲ ಸತ್ಯಾಸತ್ಯತೆಗಳು ಹೊರಬರಲಿವೆ. ಇದರಲ್ಲಿ ಪಾಲುದಾರರಾದ ಅಧಿಕಾರಿಗಳೂ ಹಾಗೂ ಗುತ್ತಿಗೆದಾರರೂ ಖೆಡ್ಡಾಕ್ಕೆ ಬೀಳುವುದು ನಿಶ್ಚಿತವಾಗಿದೆ.

ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ : ಇದು ಪರಿಶಿಷ್ಠರಿಗೆ ಸರಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ವಂಚಿಸಿರುವ ಪ್ರಕರಣವಾಗಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತ ಎಚ್ಚೆತ್ತು ಸಂಬಂದಪಟ್ಟ ಅಧಿಕಾರಿ ಹಾಗೂ ಗುತ್ತಿಗೆ‍ದಾರರ ಮೇಲೆ  ಕಾನೂನು ಕ್ರಮ ಕೈಗೊಳ್ಳಬೇಕಿದೆ. ಜೊತೆಗೆ  ಪರಿಶಿಷ್ಠ ಸಮುದಾಯದವರಿಗೆ ಸಲ್ಲುವ ಆಹಾರ ಪದಾರ್ಥ ಗುಣಮಟ್ಟದಿಂದ ಹಾಗೂ ಸರಿಯಾದ ಪ್ಯಾಕಿಂಗ್ ನಲ್ಲಿ ಯೊಜನೆಯ ಹೆಸರು ನಮೂದಿಸಿ ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯಕ್ಕೆ ಯೊಜನೆ ತಲುಪುವಂತೆ ಆಗಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಡಿ. ಸ್ಯಾಮಸನ್ ಒತ್ತಾಯಿಸಿದ್ದಾರೆ

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*