ಸಾಹಿತ್ಯ ಅಕಾಡೆಮಿಯು ತಾನು ಅಂಗೀಕರಿಸಿದ 24 ಭಾರತೀಯ ಭಾಷೆಗಳಲ್ಲಿ ಪ್ರಧಾನ ಮಾಡುವ ‘ಯುವ ಪುರಸ್ಕಾರ್-2025’ ಪ್ರಶಸ್ತಿಗಾಗಿ ಆಸಕ್ತ ಪ್ರಕಾಶಕರು ಹಾಗೂ ಯುವ ಸಾಹಿತಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಪ್ರಶಸ್ತಿಯು 50 ಸಾವಿರ ರೂ. ನಗದನ್ನು ಒಳಗೊಂಡಿದ್ದು, 2025 ರ ಜನವರಿ 1 ಕ್ಕೆ 35 ವರ್ಷ
ವಯಸ್ಸು ಮೀರದ ಯುವ ಸಾಹಿತಿಗಳು ತಮ್ಮ ಜನ್ಮ ದೃಢೀಕರಣ ಪತ್ರದ ಜೊತೆಗೆ ಪುಸ್ತಕಗಳನ್ನು ದಿನಾಂಕ: 31 ಆಗಸ್ಟ್, 2024 ರೊಳಗೆ ಸಲ್ಲಿಸಬೇಕಾಗಿ ಕೋರಿದೆ. ಜನ್ಮ ದೃಢೀಕರಣ ಪತ್ರವಿಲ್ಲದ ಪುಸ್ತಕಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಕಾಡೆಮಿ ತಿಳಿಸಿದೆ.
ಈ ಪ್ರಶಸ್ತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ಅಕಾಡೆಮಿ ವೆಬ್‌ಸೈಟ್
www.sahitya.akademi.gov.in
ಸಂಪರ್ಕಿಸುವಂತೆ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment