ದಾಂಡೇಲಿಗೂ ಬಂತು ರಾಡಾರ ಗನ್:  ವಾಹನ ಸವಾರರೇ ಎಚ್ಚರ

ರಾಜ್ಯದ ಯಾವುದೇ ರಸ್ತೆಯಲ್ಲಿ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ವಾಹನ ಚಲಾಯಿಸುವರ ವಿರುದ್ಧ ಎಫ್ಐಆರ್ ದಾಖಲಿಸಲು ಎಡಿಜಿಪಿ ಅಲೋಕ‌ಕುಮಾರ ಸೂಚನೆ ನೀಡಿದ್ದು, ಇದೀಗ ದಾಂಡೇಲಿ‌ಯಲ್ಲಿಯು ಕೂಡ ಆಗಸ್ಟ್ 1 ರಿಂದ ಪೋಲಿಸರಿಂದ ರಾಡಾರ್ ಗನ್ ಕಾರ್ಯಾಚರಣೆ ನಡೆಯಲಿದೆ.

ಬೇಜವಾಬ್ದಾರಿತನದಿಂದ ವಾಹನ ಚಾಲನೆ ಮಾಡುವ ಸವಾರರನ್ನು ನಿಯಂತ್ರಿಸಲು ಇನ್ನು‌ಮುಂದೆ ಪೋಲಿಸರ ತಂಡ ರಾಡರ್ ಗನ್ ಕಾರ್ಯಾಚರಣೆ ನಡೆಸುತ್ತಾರೆ.

ಈ ಅಪರಾಧಕ್ಕೆ 2 ಸಾವಿರ ರು. ಗಳವರೆಗೆ ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಮಂಗಳವಾರ ಮುಂಜಾನೆ ದಾಂಡೇಲಿಗೆ ಬಂದ ರಾಡಾರ್ ಗನ್ ವೇಗ ಮಾಪನವನ್ನು ದಾಂಡೇಲಿ ಗ್ರಾಮಿಣ ಠಾಣೆಯ ಪಿ.ಎಸ್.ಐ ಜಗದೀಶ ನಾಯಕ ಪ್ರಾಯೊಗಿಕ ಪರೀಕ್ಷೆ ನಡೆಸಿದ್ದಾರೆ. ವೇಗವಾಗಿ ವಾಹನ ಚಲಾಯಿಸುವವರು ಇನ್ನು ಮುಂದೆ ಎಚ್ಚರಿಕೆಯಿಂದಿರಬೇಕಿದೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*