ಅಂಕೋಲಾ: ಅಂಕೋಲಾ ತಾಲ್ಲೂಕಿನ ಶಿರೂರನಲ್ಲಿ ನಡೆದ ಗುಡ್ಡ ಕುಸಿತದಿಂದಾಗಿ ಹಾನಿಗೊಳಗಾದ ಉಳವರೆಯ ಸಂತ್ರಸ್ಥರಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನಫೆಡರೇಷನ್ ಡಿ.ವೈ.ಎಫ್.ಐ ಉತ್ತರಕನ್ನಡ ಜಿಲ್ಲಾ ಸಮಿತಿ ಹಾಗೂ ಸಿ.ಐ.ಟಿ.ಯು. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಅಗತ್ಯ ನೆರವು ನೀಡಿದರು.
ಈ ಸಂದರ್ಭದಲ್ಲಿ ಡಿ.ವೈ.ಎಪ್.ಐ.ನ ಮುಖಂಡ ರಾಜ್ಯ ಮುಖಂಡ ಡಿ.ಸ್ಯಾಮ್‌ಸನ್ ಮಾತನಾಡ ಗುಡ್ಡ ಕುಸಿತದಿಂದ 8 ಜನರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುರದೃಷ್ಟಕರ ಘಟನೆ, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನಮ್ಮಿಂದಾದ ನೆರವು ನೀಡುವುದು ನಮ್ಮ ಕರ್ತವ್ಯವಾಗಿತ್ತು. ಸರಕಾರ ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಘಟನೆಯಲ್ಲಿ ಮನೆ ಕಳೆದುಕೊಂಡವರಿಗೆ ಸೂಕ್ತ ಸಿುತಿನ ವ್ಯವಸ್ಥೆ ಮಾಡಬೇಕು. ಮಣ್ಣಿನಡಿಯಲ್ಲಿ ಸಿಲುಕಿರುವ ಇನ್ನಿತರ ಶೋಧಕಾರ್ಯವನ್ನು ಆದಷ್ಟು ಬೇಗನೆ ಮುಗಿಸಬೇಕು ಎಂದರು.
ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ ಮಾತನಾಡಿ ಇದೊಂದು ಘೋರ ದುರಂತ. ಈ ಘಟನೆಗೆ ಕಾರಣರಾದವರ
ಮೇಲೆ ಸರಕಾರ ಕಠಿಣ ಕ್ರಮ ಜರುಗಿಸಬೇಕು. ಸಂತ್ರಸ್ಥರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಕೊಟ್ಟು ಮಕ್ಕಳ ವಿದ್ಯಾಭ್ಯಾಸದ ಖರ್ಚುಭರಿಸಿ, ಪ್ರತಿ ಕುಟುಂಬದ ಓರ್ವ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಶಿರೂರಿನಲ್ಲಿ ಮಣ್ಣು ತೆರವು ಕಾರ್ಯಾಚರಣೆ ಮಾಡುತ್ತಿರುವ ಕಾರ್ಮಿಕರಿಗೆ ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ಎಲ್ಲ ಶ್ರಮಿಕರಿಗೂ, ಲಾರಿ ಚಸಲಕರು ಹಾಗೂ ಕೇರಳದಿಂದ ಬಂದ ಜನರಿಗೂ ಸಂಘಟನೆಯವರು ನೆರವು ನೀಡಿದರು.
ಈ ಸಂದರ್ಭದಲ್ಲಿ ಡಿ. ವೈ .ಎಫ್. ಐ. ನ ಮುಖಂಡರಾದ ಇಮ್ರಾನ ಖಾನ , ಸಲ್ಮಾನ ಇಲ್ಯೂರೀ , ಕಾಂತರಾವ, ಇರ್ಷಾದ ರಾಣಿಬೆನ್ನೂರು, ಮೊಹಮ್ಮದ್ ಗೌಸ, ವಿನೀತ್ ಹಾಗೂ ರೈತ ಕಾರ್ಮಿಕರ ಸಂಘದ ಮುಖಂಡರಾದ ಶಾಂತಾರಾಮ್ ನಾಯಕ ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳು ಇದ್ದರು.
ವಿಡಿಯೋ ನೋಡಿ....
Be the first to comment