‘ಅನೇಕ’ ವೇದಿಕೆಯಿಂದ ಜಿಲ್ಲಾ‌ ಮಟ್ಟದ ಪ್ರಬಂಧ ಸ್ಪರ್ಧೆ

ಶಿರಸಿ : ಮಾನವೀಯತೆ, ಎಲ್ಲರ ಹಕ್ಕುಗಳ ರಕ್ಷಣೆ, ಸಮಸಮಾಜ ನಿರ್ಮಾಣದ ಆಶಯದೊಂದಿಗಿರುವ ನಮ್ಮ ಸಂವಿಧಾನಕ್ಕಿಂತ ಆದರ್ಶ ಬೇರೊಂದಿಲ್ಲ. ಹಲವು ಬಣ್ಣಗಳ ರಂಗೋಲಿಯಂತಿರುವ ಈ ದೇಶದ ವೈವಿಧ್ಯತೆಯನ್ನು, ಬಹುತ್ವದ ಸೊಗಸನ್ನು ಕಾಯುವ ಕವಚವೂ ಅದೇ ಆಗಿದೆ. ಅಸಹಿಷ್ಣುತೆ ಮನಃಸ್ಥಿತಿ ಮತ್ತು ಬಹುತ್ವದ ಮೇಲಿನ ದಾಳಿ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಸಂವಿಧಾನ ಕುರಿತ ಅರಿವಿನ ಮೂಲಕವೇ ಸಮಾಜವನ್ನು ಹೊಸ ಬೆಳಕಿನಲ್ಲಿ ಕಟ್ಟುವುದು ಸಾಧ್ಯ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸಂವಿಧಾನವನ್ನು ಗ್ರಹಿಸುವುದರ ಕಡೆಗೆ ಕರೆದೊಯ್ಯುವ ಮತ್ತು ಆ ಮೂಲಕ ಅವರಲ್ಲಿ ಉತ್ತಮ ಸಮಾಜದ ಕಲ್ಪನೆಯನ್ನು ಮೂಡಿಸುವ ಹಂಬಲದಿಂದ‘ಅನೇಕ’ ಸಾಂಸ್ಕೃತಿಕ ವೇದಿಕೆ ಶಿರಸಿ ಪ್ರಾಯೋಜಕತ್ವದಲ್ಲಿ ಪ್ರಬಂಧ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದೆ.

ಪ್ರಬಂಧ ಸ್ಪರ್ಧೆಯ ವಿಷಯ: “ಸಂವಿಧಾನದ ಆಶಯ ಮತ್ತು ಬಹುತ್ವ ಭಾರತ.”

ಈ ವಿಷಯದ ಮೇಲೆ ಐದು ಪುಟ ಮೀರದಂತೆ ದಿನಾಂಕ : 01/ 08/2024 ರೊಳಗೆ ಉತ್ತರ ಕನ್ನಡ ಜಿಲ್ಲೆಯ ಪ್ರತಿ ಪಿಯು ಕಾಲೇಜಿನಿಂದ ಮೂರು ಪ್ರಬಂಧಗಳನ್ನು ಭಾರತಿ ನಾಯ್ಕ ಪ್ರಥಮ ದರ್ಜೆ ಸಹಾಯಕರು. ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲೆ ಶಿರಸಿ (ಉ.ಕ) ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಲು ‘ಅನೇಕ’ ಸಾಂಸ್ಕೃತಿಕ‌ ವೇದಿಕೆಯ ಸಂಚಾಲಕರಾದ ಉಪನ್ಯಾಸಕ ಉಮೇಶ್ ನಾಯ್ಕ ವಿನಂತಿಸಿರುತ್ತಾರೆ.

ಜಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತ್ರತೀಯ ಸ್ಥಾನ ಗಳಿಸಿದ ಪ್ರಬಂಧಗಳಿಗೆ ಕ್ರಮವಾಗಿ 3000, 2000, 1000 ರೂಪಾಯಿ ನಗದು ಮತ್ತು 500 ರೂಪಾಯಿ ಮುಖ ಬೆಲೆಯ ಪುಸ್ತಕ ಹಾಗೂ ಸಮಾಧಾನಕರ ಸ್ಥಾನ ಗಳಿಸಿದ ಎರಡು ಪ್ರಬಂಧ ಗಳಿಗೆ ತಲಾ 500 ರೂಪಾಯಿ ನಗದು ಹಾಗೂ 500 ರೂಪಾಯಿ ಮೊತ್ತದ ಪುಸ್ತಕ ನೀಡಿ ಅಗಷ್ಟ 15 ರಂದು ಶಿರಸಿಯಲ್ಲಿ ಗೌರವಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ವಿವರಗಳಿಗಾಗಿ ಪೋನ್ ನಂಬರ : 9448906589 ಗೆ ಸಂಪರ್ಕಿಸಲು ವಿನಂತಿಸಿರುತ್ತಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*