ಹೆಣ್ಣು ಬಾಳಿನ ಕಣ್ಣು :ದೇವಿದಾಸ ನಾಯಕ, ಅಗಸೂರು ಅವರ ಕವಿತೆ

ಜಗದೊಳಗೆ ಹೆಣ್ಣೇ ಬದುಕಿನ ನಿತ್ಯ ಬೆಳಕು
ಅಂಧಕಾರದ ಕೊಳಕು ಅಳಿಸುವಳಿಲ್ಲಿ
ಸ್ತ್ರೀ ಯು ಸೃಷ್ಟಿಯ ಅದ್ಭುತವಾದ ಶಕ್ತಿ
ಅಪಾರವಾದ ಭಕ್ತಿ ಈಕೆಗೆ ಸಂಸಾರದಲ್ಲಿ

ನಮ್ಮೀ ಕುಟುಂಬದ ‌ನೆಮ್ಮದಿಯೇ ಈ ನಾರಿ
ಸಾಗಿಸುವಳು ಸಹನೆಯ ದಾರಿ ಹಿಡಿದು ಜೀವನ
ತಾಯಿ,ಸಹೋದರಿ,ಅತ್ತಿಗೆ,ಸೊಸೆ ಮಗಳಾಗಿ
ಉತ್ಕೃಷ್ಟ ದೇವತೆಯಿಂದ ಮನೆ ಮನ ಪಾವನ

ಬಾಳಿನಲು ಜೀವನದಿಯ ಮನಸ್ಸು ಅರಿತು
ಸತ್ ಚಾರಿತ್ರ್ಯದಿ ಸಾಗಬೇಕು ಬೆರೆತು ಗೌರವದಿ
ನೋವು ಕೂಡಾ ನಾಚಿ ನಲಿವಾಗಿ ನಲಿಯಲು
ಚಿಂತೆ ಸುಳಿಯದು ನಗುತ ಬಾಳಲು ಆನಂದದಿ

ಬೆಳಗುವ ಜ್ಯೋತಿಗೆ ಸೌಜನ್ಯವೇ ಭೂಷಣ
ರಾರಾಜಿಸುವುದು ಪ್ರತಿಕ್ಷಣ ಮಧುರ ಬಾಂಧವ್ಯ
ಸತಿ,ಪತಿ,ಅತ್ತೆ,ಸೊಸೆ,ಅಣ್ಣ,ತಮ್ಮಂದಿರೆಲ್ಲರು
ಮನವ ತಿಳಿದು ನಡೆಯಲು ಆ ಬಾಳೇ ಭವ್ಯ

ಅಗಸಳಾಗಿ,ಸಲಹಾಗಾರ್ತಿ,ಸಹಾಯಕಳಾಗಿ
ನಡೆಸುವಳು ಗೃಹ,ಹಣಕಾಸು, ಶಿಕ್ಷಣದ ಖಾತೆ
ಬಿಡುವು ಮಾಡಿ ತಂತ್ರಗಾರಿಕೆಯ ಬಳಸಿ
ನೋವಿದ್ರೂ ಬಚ್ಚಿಟ್ಟು ಬದುಕುವ ಜಗನ್ಮಾತೆ

ದೇವಿದಾಸ ಬಿ. ನಾಯಕ ಅಗಸೂರು
ಶಿಕ್ಷಕರು ಸ.ಕಿ.ಪ್ರಾ.ಶಾಲೆ ರಂಗಾಪುರ
ಅಂಚೆ:ದಾಸನಕೊಪ್ಪ
ತಾಲುಕು:ಶಿರಸಿ
ಶೈ.ಜಿಲ್ಲೆ: ಶಿರಸಿ
(ಉತ್ತರ ಕನ್ನಡ)
581358
7899503158

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*