ಗಾಂಧಿನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಗದ ಕಂಪನಿಯಿಂದ 5 ಲಕ್ಷ ರು.ಗಳ ರಕ್ತ ತಪಾಸಣಾ ಯಂತ್ರ

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ತಾಲೂಕಿನ ಗಾಂಧಿನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ 5 ಲಕ್ಷ ರೂಪಾಯಿ ವೆಚ್ಚದ ರಕ್ತ ತಪಾಸಣಾ ಯಂತ್ರ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ನೀಡಿದ್ದಾರೆ.

ದಾಂಡೇಲಿ ನಗರದ ಕೊಳಚೆ ಪ್ರದೇಶವೆಂದೆ ಕರೆಯಲ್ಪಡುವ ಗಾಂಧಿನಗರದಲ್ಲಿ ಹಲವಾರು ವರ್ಷಗಳಿಂದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಆಸ್ಪತ್ರೆಯಲ್ಲಿ ಸ್ಥಳೀಯರಿಗೆ ರಕ್ತಪಾಸಣೆ ಸೇರಿದಂತೆ ಹಲವು ಚಿಕಿತ್ಸೆಗಳಿಗೆ ವ್ಯವಸ್ಥೆಗಳು ಇರಲಿಲ್ಲ. ಅವರು ಈ ಚಿಕಿತ್ಸೆಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸುತ್ತಿದ್ದರು. ಜೊತೆಗೆ ತಮ್ಮಲ್ಲಿರುವ ಕೊರತೆ ಹಾಗೂ ಸಮಸ್ಯೆಗಳ ಬಗ್ಗೆ ದಾಂಡೇಲಿಯ ವೆಸ್ಟ್  ಕೋಸ್ಟ್ ಪೇಪರ್  ಮಿಲ್ ರವರಲ್ಲಿ ನಿವೇದಿಸಿಕೊಂಡ ಹಿನ್ನೆಲೆಯಲ್ಲಿ ಕಂಪನಿಯವರು ಅವರು ಸಿಎಸ್ಆರ್ ಯೋಜನೆಯಡಿಯಲ್ಲಿ ಈ ಆಸ್ಪತ್ರೆಗೆ 5 ಲಕ್ಷ ರೂಪಾಯಿ ವೆಚ್ಚದ ಆಧುನಿಕ ತಂತ್ರಜ್ಞಾನದ ರಕ್ತ ತಪಾಸಣಾ ಯಂತ್ರ ಹಾಗೂ ಇತರೆ ಪರಿಕೆಗಳನ್ನು ಉಚಿತವಾಗಿ ನೀಡಿದ್ದಾರೆ.
ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ  ರಾಘವೇಂದ್ರ  ಜೆ. ಆರ್.  ಹಾಗೂ ರಾಜೇಶ ತಿವಾರಿಯವರು ಗಾಂಧಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿವೇಣಿಯವರಿಗೆ ಈ ಪರಿಕರಗಳನ್ನು  ಬುಧವಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ಸಿಬ್ಬಂದಿಗಳಾದ ಖಲೀಲ ಕುಲಕರ್ಣಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿದ್ದರು.

*ಇದು ಕಂಪನಿಯ ಸಾಮಾಜಿಕ ಸೇವೆ*
ಕಾಗದ ಕಂಪನಿಯು ಸಿಎಸ್ಆರ್ ಯೋಜನೆಯಡಿಯಲ್ಲಿ ಹಲವಾರು ಜನ೮ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು , ಈಗಾಗಲೇ ದಾಂಡೇಲಿ ನಗರ ಸೇರಿದಂತೆ ಹಲವಡೆ ಹಲವು ಕೊಡಗೆಗಳನ್ನ ನೀಡಿದ್ದೇವೆ. ಇದೀಗ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನವರ ನಿರ್ದೇಶನದಂತೆ ಗಾಂಧಿನಗರ ಆಸ್ಪತ್ರೆಗೆ 5 ಲಕ್ಷ ರು. ವೆಚ್ಚದ  ರಕ್ತ ರಪಾಸಣಾ  ಯಂತ್ರವನ್ನು ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದ್ದಾರೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*