ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಲಿವೆ -ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ

 ಕುಮಟಾ: ಬದುಕಿನ ಮುಖ್ಯ ಭಾಗವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಭವಿಷ್ಯತ್ತನ್ನು ಕಟ್ಟಿಕೊಡಲಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಲ್.ಭಟ್ ಹೇಳಿದರು.

ಅವರು ಇತ್ತೀಚೆಗೆ ದೇವಗಿರಿ ಗ್ರಾಮ ಪಂಚಾಯತ್ ಮತ್ತು ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಸ್ಥಳೀಯತೆ ವಿಚಾರ ಸಂಕೀರ್ಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೆ ಹಲವು ನೀತಿಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡಿದ್ದರೂ ಸಹ ಸ್ಥಳೀಯ ವಿಷಯಗಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡಿರಲಿಲ್ಲವಾಗಿತ್ತು. ಮುಂದೆ ಜಾರಿಯಾಗಲಿರುವ ಹೊಸ ಶಿಕ್ಷಣ ನೀತಿಯೂ ಮಗುವಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ. ದೇವಗಿರಿ ಕೃತಿ ಸ್ಥಳೀಯ ಪರಿಸರದ ಎಲ್ಲಾ ಅಂಶಗಳನ್ನು ಒಳಗೊಂಡ ಸಂಗ್ರಹ ಯೋಗ್ಯ ಕೃತಿಯಾಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಎಸ್. ಡಿ. ಹೆಗಡೆ ಮಾತನಾಡಿ, ದೇವಗಿರಿ ಕೃತಿ ಚಲನಶೀಲ ಸಂಶೋಧನಾ ಗ್ರಂಥವಾಗಿದೆ.ಜನಪದರ ಜೀವನ ಚರಿತ್ರೆಯನ್ನು ತಿಳಿಸುವುದರೊಂದಿಗೆ ಜೀವನ ವಿಜ್ಞಾನವನ್ನು ತೆರೆದು ತೋರಿಸಲು ಈ ಕೃತಿ ಸಹಾಯಕವಾಗಿದೆ. ಗ್ರಾಮದಲ್ಲಿ ನಡೆಯುವ ಎಲ್ಲಾ ಆರಾಧನೆಗಳು ನಿಸರ್ಗದ ನಾಲ್ಕು ಶಕ್ತಿಗಳ ಆರಾಧನೆಯಾಗಿದೆ.ಇಂತಹ ವೈವಿಧ್ಯಮಯ ವಿಚಾರ ಒಳಗೊಂಡ ಸಮಗ್ರ ಮಾಹಿತಿ ದೇವಗಿರಿ ಕೃತಿಯಲ್ಲಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ರೇಖಾ ನಾಯ್ಕ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಸ್ಥಳೀಯತೆ ಪ್ರಸ್ತುತ ಶಿಕ್ಷಣ ನೀತಿಯಲ್ಲಿ ಸಮ್ಮೀಳಿತಗೊಂಡಿದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುವುದರ ಮೂಲಕ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ನೆರವಾಗಬಲ್ಲದು ಎಂದರು.

ನಿವೃತ್ತ ಅಧ್ಯಾಪಕ ವಿ.ಕೆ.ಭಟ್ ಮಾತನಾಡಿ, ಶಿಕ್ಷಣ ನೀತಿ ನಿಂತ ನೀರಲ್ಲ. ಸದಾ ಚಲನಶೀಲ, ಕ್ರಿಯಾಶೀಲ ಮತ್ತು ಆದರ್ಶ ಬದುಕನ್ನು ರೂಪಿಸುವ ಶಿಕ್ಷಕ ಸದಾ ಅಧ್ಯಯನಶೀಲರಾಗಿ ಮಕ್ಕಳ ಭವಿಷ್ಯತ್ತನ್ನು ರೂಪಿಸಬೇಕಾದ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ದೇವಗಿರಿ ಕೃತಿ ರಚನಾಕಾರ ಪಿ.ಆರ್.ನಾಯ್ಕ ಗ್ರಾಮೀಣ ಪರಿಸರದ ಜನಜೀವನವನ್ನು ತೆರೆದಿಟ್ಟು ದೇವಗಿರಿಗೆ ಇನ್ನೊಂದು ಮುಕುಟ ತೊಡಿಸಿದ್ದಾರೆ ಎಂದರು.

ಮುಖ್ಯ ಅತಿಥಿ ನಿವೃತ್ತ ಅಧ್ಯಾಪಕ ಎ.ಆರ್.ಭಟ್ ಮಾತನಾಡಿ, ಈ ದೇಶದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ರಾಷ್ಟ್ರೀಯ ಶಿಕ್ಷಣ ನೀತಿ ತುಂಬಾ ಪ್ರಮುಖವಾಗಿದೆ. ಇದರ ಕಾರ್ಯ ಯೋಜನೆ ಸಮರ್ಪಕವಾಗಿ ಅನುಷ್ಠಾನವಾದಾಗ ವಿದ್ಯಾರ್ಥಿಗಳ ಉತ್ತಮ ಭವಿಷ್ಯತ್ತು ನಿರ್ಮಾಣವಾಗಲು ಸಾಧ್ಯ ಎಂದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ರತ್ನಾ ಸುರೇಶ್ ಹರಿಕಾಂತ, ಉಪಾಧ್ಯಕ್ಷ ಎಸ್. ಟಿ .ನಾಯ್ಕ, ಉಪಸ್ಥಿತರಿದ್ದರು. ಸಭೆಯಲ್ಲಿ ಪಂಚಾಯತ ಸದಸ್ಯರಾದ ನಾಗೇಶ್ ನಾಯ್ಕ, ಪಾಂಡುರಂಗ ಪಟಗಾರ, ದೇವೇಂದ್ರ ಶೇರುಗಾರ, ಸರೋಜಾ ಮಡಿವಾಳ, ದಿನಕರ ದೇಶ ಭಂಡಾರಿ, ನಾಗಪ್ಪ ಹರಿಕಾಂತ, ಕೃಷ್ಣ ನಾಯ್ಕ, ಸುರೇಶ ಹರಿಕಾಂತ,ಕೇಶವ ಮಡಿವಾಳ, ಪ್ರೊ ರಾಜೀವ್ ಕೋನಳ್ಳಿ, ಡಾ. ಶ್ರೀಧರ್ ಉಪ್ಪಿನ ಗಣಪತಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಬ್ಬಯ್ಯ ನಾಯ್ಕ, ಎಸ್. ಎಚ್. ಗೌಡ, ಪ್ರೊ ಪ್ರಮೋದ ನಾಯ್ಕ, ಪ್ರೊ ಗಿರೀಶ ವನ್ನಳ್ಳಿ, ದಯಾನಂದ ದೇಶ ಭಂಡಾರಿ, ಸುರೇಶ್ ಭಟ್, ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾವಂಕರ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಎಂ.ಜಿ. ನಾಯ್ಕ, ರವೀಂದ್ರ ಭಟ್ ಸೂರಿ, ಗೌರವಾಧ್ಯಕ್ಷ ಸುದೀಶ ನಾಯ್ಕ, ಶಿಕ್ಷಕ ಸಂಘದ ಸದಸ್ಯರಾದ ಶಂಕರ ನಾಯ್ಕ, ಪ್ರತಿಮಾ ಹೆಗಡೆ, ಎಂ. ಡಿ. ನಾಯ್ಕ, ಲಕ್ಷ್ಮಿ ಎಚ್. ಸುಬ್ರಾಯ ಶಾನಭಾಗ, ಮುಂತಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಸ್ಥಳೀಯ ಮುನ್ನೋಟದ ಮಾತುಕತೆಯಲ್ಲಿ ಭಾಗವಹಿಸಿದ ಗಣ್ಯರು
ಶಾಸಕ ದಿನಕರ್ ಕೆ. ಶೆಟ್ಟಿ, ಉಪ ನಿರ್ದೇಶಕ ಈಶ್ವರ ಎಚ್.ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನಯ್ ಕುಮಾರ ನಾಯ್ಕ. ಪ್ರೊ.ಕಿಶೋರ ನಾಯ್ಕ, ದಯಾನಂದ ದೇಶಭಂಡಾರಿ, ಯೋಗೇಶ ಪಟಗಾರ, ಸುರೇಶ ಹೆಗಡೆ, ಸಾಹಿತಿಗಳಾದ ಎಮ್.ಡಿ.ಹರಿಕಾಂತ, ಎಂ.ಜಿ‌.ನಾಯ್ಕ, ಸುರೇಶ ಭಟ್, ಎಂ.ಜಿ.ನಾಯ್ಕ, ಗಣೇಶ್ ಜೋಶಿ, ಸಂಪನ್ಮೂಲ ವ್ಯಕ್ತಿ ಅಣ್ಣಪ್ಪ ನಾಯ್ಕ, ನಾಸಿರ ಖಾನ, ಸಂಜೀವಿನಿ ಮಾಸಪತ್ರಿಕೆ ಸಂಪಾದಕ ಜನಾರ್ಧನ ಹರನೀರು, ಉದ್ಯಮಿ ರಾಮದಾಸ ಪೈ, ಸಚಿನ ನಾಯ್ಕ, ಆನಂದ ಶೆಟ್ಟಿ, ರಾಮಚಂದ್ರ ಪಟಗಾರ, ಕೇಶವ ಮಡಿವಾಳ, ಯಕ್ಷಗಾನ ಕಲಾವಿದ ಮೋಹನ ನಾಯ್ಕ, ಕೂಜಳ್ಳಿ, ಕಲಾವಿದ ಅಶೋಕ ನಾಯ್ಕ, ರಾಜು ದೇಶ ಭಂಡಾರಿ, ಗಣೇಶೋತ್ಸವ ಸಮಿತಿಯ ಗೋಪಾಲ ಮಡಿವಾಳ, ಜೆ. ಕೆ.ನಾಯ್ಕ, ಸುರೇಶ ಹರಿಕಾಂತ, ಮಂಗಳಗೌರಿ ಭಟ್ಟ, ಶ್ರೀಧರ ಆಚಾರ್ಯ, ದುರ್ಗು ಹರಿಕಾಂತ, ಹೆಗಡೆಯ ಪ್ರಕಾಶ ನಾಯ್ಕ, ಭಾಸ್ಕರ್ ಭಟ್ , ಪ್ರಕಾಶ ಕುಮ್ಟಾಕರ್, ಸುಧಾ ಭಟ್ಟ, ದತ್ತಾತ್ರೇಯ ಹೆಗಡೆ, ಸರಸ್ವತಿ ಭಟ್ಟ, ಉಮೇಶ ಕೆರೆಕಟ್ಟೆ, ವಿಲ್ಸನ್ ಪಿ. ರೋಡ್ರಗಿಸ್, ಉದಯ ನಾಯಕ, ಬಿ. ಎನ್. ಹೆಗಡೆ, ಶೇಖರ ಟಿ. ನಾಯ್ಕ, ವಿಜಯಲಕ್ಷ್ಮಿ ಕೆ.ಆರ್. ರತ್ನಾಕರ ಭಂಡಾರಿ, ಸುವರ್ಣ ಭಟ್ಟ, ರಾಜೇಶ ಶೇಟ್, ಕೃಷ್ಣ ಹರಿಕಾಂತ, ವಿ. ಕೆ.ನಾಯ್ಕ, ನಿತ್ಯಾನಂದ ನಾಯ್ಕ , ತಿರುಮಲ ನಾಯ್ಕ, ಗಜಾನನ ಶಾನಭಾಗ, ಲೂವೇಜಿನ್ ಪಿಂಟೋ, ಹೊನ್ನಾವರದ ಇನಾತ್ ಗೊನ್ಸಾಲ್ವೀಸ್, ಶಾಂತರಾಮ ಭಟ್ಟ, ಷಣ್ಮುಖ ನಾಯ್ಕ, ಮಂಜುನಾಥ ನಾಯ್ಕ, ಗೋಪಾಲಕೃಷ್ಣ ಭಂಡಾರಿ, ಎನ್.ಜೆ ನಾಯ್ಕ, ಎಂ. ಎಸ್. ನಾಯ್ಕ, ಉಮೇಶ ನಾಯ್ಕ್ ಕೊನಳ್ಳಿ, ರೋಹಿದಾಸ ನಾಯ್ಕ, ಗಜಾನನ ನಾಯ್ಕ, ಸೀಮಾ ಭಟ್ಟ, ಹೇಮಾ ಭಟ್ಟ, ವಿ.ಜಿ.ಹೆಗಡೆ, ನಾಗರಾಜ ಪಟಗಾರ, ಎಸ್. ಎನ್. ಪಟಗಾರ, ಬಿ. ವಿ. ನಾಯ್ಕ, ರಮಾ ಟಿ. ನಾಯ್ಕ, ಅನಿಲ್ ಬೇರಂಕಿ, ಸರೋಜಾ ಪಿ.ನಾಯ್ಕ, ನಾಗವೇಣಿ ಎಚ್.ಪೈ. ಶಂಕರ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ದೇವಗಿರಿ ಕೃತಿಕಾರ ಪಿ.ಆರ್.ನಾಯ್ಕ ಸ್ವಾಗತಿಸಿದರೆ, ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ ವಂದಿಸಿದರು.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*