‘ಹಾಂ… ಈಗ ಹೇಳು……ಆಲ್ವಾ ಮಾರಾಯಾ ……ಇಡೀ ಊರಲ್ಲಿ ಎಲ್ಲದೂ ಸುರು ಆಗದೆ. ಆದ್ರೆ ಸಾಲಿಗೆ ಮಾತ್ರ ಕೋರೋನಾ ಬಂದದೆ. ಮಕ್ಳ ಮಾತ್ರ ಸಾಲಿಗೆ ಹೋಗ್ವಾಂಗಿಲ್ಲ. ನಾಮ್ಮನಿ ಮಕ್ಳು ಪೂರಾ ಕೆಟ್ಟಿ ಕೆರು ಹಿಡ್ದಿ ಹೋಗಾರೆ. ನಾವಂತೂ ಕಲಿಲೇಲ. ನಮ್ಮಕ್ಳಾದ್ರು ಕಲಿಲಿ ಅಂದೆಳ್ದ್ರೆ ಈ ಕೋರೋನಾ ಬಂದಿ ಪೂರಾ ತೊಳ್ಪಟ್ನ ಮಾಡ್ಬಿಡ್ತು.’
‘ಆಲ್ವಾ ಬೀರಾ; ಸಾಲಿ ಅಂತೂ ಇಲ್ಲಾ. ಆ ಮಕ್ಳಾದ್ರು ಕಲಿಬೇಕಲ್ಲ. ಇಡೀ ದಿನ ಊರ್ಮೆಲೆ ಹೆಕ್ಕುದು. ಅವ್ರಮಾನಿ, ಇವ್ರಮಾನಿ ಹೊಕ್ಕಂತಿ ಇರೋದು. ನೋಡು ನಮ್ಮಾನಿ ಬದಿಕಿರೊದು ಆ ತಿಮ್ಮಪ್ಪನ್ಮನಿ. ಆಂವ ಬರಿ ಹುಳ್ಕ ಮನ್ಸ್. ಬರಿ ದೆವ್ವ ಮಾಡುದು, ಕೀಳ್ ಮುಂದ್ಮಾಡಿ ಕೊಡುದು. ನಮ್ಮಾನೆಲಿ ಒಂದು ಕೋಳಿ ಸಾಕ್ವಾಂಗೆ ಇಲ್ಲ. ಮೊನ್ನಾಗೆ ನಮ್ಮಾನಿ ಕೋಳಿ ಅವ್ರಮಾನಿ ಬಾಗ್ಲಾಗೆ ಹೋಗಿ ಪಿಟ್ಟಿ ಹಾಕ್ತು ಹೇಳಿ, ಆ ಹೆಂಗ್ಸು ಆ ಪಿಟ್ಟಿ ತಂದಿ ನಮ್ಮಾನಿ ಬಾಗ್ಲಾಗೆ ತಂದೊತಾಕಿ ಹೋಯ್ತು.ಒಂದ್ ಸಣ್ಣ ಆಕಳ ಕರು ಇತ್ತು.ಅದು ಸತ್ತೆ ಹೊಯ್ತು ಕಾಡಿಗೆ ನೊಟ್ಕಾರ್ನಂದಲ್ಲೊದ್ರೆ ಇವ್ರು ಕಿಳ್ ಮುಂದ್ಮಾಡ್ಕೊಟ್ಟಿ ತೆಗ್ದೆ ಬಿಟ್ರು. ಆಂತವ್ರ ಮಾನಿಗೆ ಹೊಗ್ಬೇಡ ಹೇಳಿ ಈ ಪೊರ್ನಕೇಲಿ ಹೆಳ್ದ್ರೆ , ದಿನಾ ಬೆಳ್ಗಾದ್ರೆ ಅವ್ರಮಾನಿಗೆ ಹೋಗುದು.
ಅವ್ರಮಾನಿಲ್ಲೊಂದು ಮಗಿ ಇತು. ಅವ್ಳಕೇಲೀ ಮಾತಾಡ್ಬೇಡ ಅಂದ್ರೆ, ಅವ್ಳಸಂತಿಗೆ ಆಟ ಆಡುಕೆ ಹೋಗುದು, ಅವ್ಳು ತಿಂಬುಕೆ ಕೊಟ್ರೆ ತಿಂಬುದು. ಹಿಂಗೆಲ್ಲ ಮಾಡ್ತಿದ್ರೆ ಯಾವ ಆಪ್ಪ ಸುಮ್ನಿರ್ತ ಹೇಳು.ಒಂದ್ಮಾತು ಕೇಳುದಿಲ್ಲ.ಆಪ್ಪಾ ಅಂದ್ರೆ ಕ್ಯಾರೆ ಇಲ್ಲಾ.ನಾಂಗೆ ಇದೆಲ್ಲ ನೋಡ್ನೊಡಿ ಸಾಕಾಗೊಗಾದೆ.ಅದ್ಕೆ ಇವತ್ತೆ ಒಂದ್ಕೊಟ್ಟಿ ಮನ್ಸೆ ಬಿಡ್ವಾ ಹೇಳಿ ದೊಣ್ಣಿ ತಾಕಂಡಿ ಬಂದಿದ್ದೆ. ಅಷ್ಟೊತ್ನಾಗೆ ನೀನ್ಸಿಕ್ದೆ. ಇವತ್ತೆ ನೀನು ಸಿಕ್ದೆ ಇರ್ಬೆಕಿತ್ತು, ಅವ್ನ ನಾನು ಬಿಡುದಿಲ್ಲಾಗಿತ್ತು. ಒಂದ್ಬದಿ ಮಗ್ಲ ಮುರ್ದಿ ಮನ್ಸ ಬಿಡ್ಬೇಕು ಅನ್ಸಿತ್ತು. ಸಿಟ್ಬಂದ್ರೆ ನಾನು ಯಾವಾಪ್ಗು ಕೇಳು ಮಾಗ ಆಲ್ಲಾ. ಸಾಲಿ ಸುರು ಆದ್ರೆ ಅಡ್ಡಿಲ್ಲಾ. ಇಲ್ಲಾಂದ್ರೆ………’
‘ಆಲ್ವಾ ದೇವು…ನೀನು ನಿನ್ಮಾಗ್ನ ಮಗ್ಲ ಮುರ್ದಿ ಮನ್ಸದ್ರೆ ಆವ್ನ ಹೊಟ್ಟಿ ಹೊರ್ವಂವ ನೀನು ಆಲ್ಲಾ ನಿನ್ನ ಹೆಂಡ್ತಿ. ಆ ಹೆಂಗ್ಸು ದುಡ್ದ್ರೆ ಹೊಟ್ಟಿಗೆ ಏನಾದ್ರು ಆದೆ. ಇಲ್ಲಾಂದ್ರೆ……ಏನೂ ಇಲ್ಲಾ.ಆ ಪೊರ್ನ ಬಡ್ದ ಮನ್ಸದ್ರೆ ನಿನ್ನೆಂಡ್ತಿ ಆಪೊರ್ನ ನೊಡ್ಕಂಬೇಕಾ ಇಲ್ಲಾ ದುಡುಕೊಗ್ಬೇಕಾ. ನಿಂಗರೂ ಎಂತಾ ರೊಗ ಹಿಡ್ದದೆ. ನೀನು ಸಾರಾಯಿ ಕೂಡುದು ಜಾಸ್ತಿ ಆಗ್ತದೆ. ನೇಡಿ ಮೊಕತಾಕಂಡಿ. ಕಿಸಿಲಿ ಎಷ್ಟ ದುಡ್ಡದೆ ಏಳು…ಅಂಗ್ಡಿಗೆ ಹೊಗ್ಬಂದ್ಕಂಡಿ ಕಾಡಿಗೆ ಮಾತಾಡ್ವಾ. ಬಾ….ಬಾ…..
Be the first to comment