ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ – ೧೦

ನಮ್ಮಪ್ಪ ಗಾನಾಂವ ಎಂದೇಳ್ತಾ ಮಾರು ಓಡ್ತಾ ಸಾಲಿ ಕಡೆ ನಡ್ದೆ ಬಿಟ್ಟ. ಸಾಲಿಲಿರು ಮಾಸ್ತರನ್ನು ನೋಡಿ ಸರ್,’ಸಾಲಿ ಯಾವಾಗ ಸುರು ಆಯ್ತದೆ.’ನಾನೂ ಸಾಲಿಗೆ ಬತ್ತೆ.ಯಾವಾಗ ಬರ್ಲಿ ಸರ್.

ಗುಂಯ್,’ಗುಂಯ್ ಎನ್ನುತ್ತಾ ಕೈಯಲ್ಲೆ ಗಾಡಿ ಎಕ್ಸಲೆಟರ್ ಒತ್ತುತ್ತ ಮತ್ತೆ ಯಾವುದೋ ಕಡೆ ಓಡಿದ.

ಸಾಲಿಲಿ ಕುಂತು ಮಕ್ಕಳ ಪಟ್ಟಿ ನೋಡ್ತಿದ್ದ ಮಾಸ್ತರ್ರು ಮಾರು ಯಾವ ಕಡೆ ಓಡಿ ಹೋದ ಎಂದು ಹೊರಗಡೆ ಬಂದು ನೋಡುತ್ತಿರುವಾಗ, ಕಿಡಕಿಯಲ್ಲಿ ಸಣ್ಣ ಧ್ವನಿ ಕೇಳಿಸಿತು. ಭಾರತಿ ಇದ್ದಾಳಾ….ಈ ಧ್ವನಿ ಕೇಳಿದಾಕ್ಷಣ ಹೌದೌದೆನ್ನುತ ಭಾರತಿ ಹೋರಗೊಡಿ ಹೋದಳು.

ಅರೆ, ಭಾರತಿ ಯಾಕೆ ಇಷ್ಟು ಅವಸರದಿಂದ ಓಡಿದಳು’ ಎಂದು ಕಿಡಕಿಯಲ್ಲಿ ನಿಂತು ಹೊರಗಡೆ ನೋಡಿದಾಗ,ಅದೇ ಕೇರಿಯ ವಿದ್ಯಾರ್ಥಿ ಮಂಜುನಾಥ ಏನೇನೋ ಮಾತನಾಡುತ್ತಿದ್ದ. ತೆರೆಯಲ್ಲಿ ನಿಂತು ನೋಡುತ್ತಿದ್ದಂತೆ ಭಾರತಿ ಕೈಗೆ ಒಂದು ಚೀಟಿಯನ್ನು ಕೊಟ್ಟು ಟಾ..ಟಾ… ಮಾಡುತ್ತಿದ್ದ. ಭಾರತಿ ಗಡಿಬಿಡಿಯಿಂದ ಆ ಚೀಟಿಯನ್ನು ಅಂಗಿಯಲ್ಲಿ ತುರುಕಿಕೊಂಡು ಕೋಣೆಯ ಒಳಗಡೆ ಬಂದಳು.

ಭಾರತಿ ತುಂಬಾ ಗಡಿಬಿಡಿಯಲ್ಲಿದ್ದಳು. ಮೈಯೆಲ್ಲಾ ಬೆವರಿತ್ತು. ಇದನ್ನು ಗಮನಿಸಿದ ಮಾಸ್ತರರು, ಯಾಕೋ ಅನುಮಾನಗೊಂಡು ‘ಭಾರತಿ ಏನಾಯಿತು? ಯಾವುದೋ ಗೊಂದಲದಲ್ಲಿರುವಂತೆ ಕಾಣಿಸುತ್ತಿಯಲ್ಲ.’ ‘ಏನಾಯ್ತು?

ಏನು…… ಏನೂ…ಇಲ್ಲ ಸರ್.’ ‘ಯಾಕೆ ತೊದಲುತ್ತೀಯಾ?’ ಏನಾಯ್ತು? ನೋಡು… ನಿನ್ನ ಪಟ್ಟಿಯನ್ನು ನೋಡ್ತಾ ಇದ್ದೆ, ತುಂಬಾ ತಪ್ಪಾಗಿ ಬರೆದಿದ್ದೀಯಾ. ಅಕ್ಷರವನ್ನು ಓದ್ಲಿಕ್ಕೆ ಆಗ್ತಾ ಇಲ್ಲ. ಯಾಕೋ ನೀನು ತುಂಬಾ ಚಡಪಡಿಸುತ್ತಿದ್ದೀಯಾ. ಹೇಳು, ಏನಾಯ್ತು?

ಸರ್, ಹೇಳ್ಕೊಳ್ಳಕ್ಕೆ ನಾಂಗೆ ನಾಚ್ಕಿ ಆಗ್ತಾದೆ. ಆದ್ರೆ ಏನ್ ಮಾಡ್ಲಿ ಸಾರ್. ನಮ್ಮನೇಲಿ ನಮ್ಮಪ್ಗೆ ನಾನೊಬ್ಳೇ ಮಗ್ಳು. ಪಾಪ ! ಅಪ್ಪ-ಅಮ್ಮ ಕೂಲಿ ಮಾಡಿ ಸಾಕ್ತಿದ್ದಾರೆ. ನನಗೆ ಏನು ಕಮ್ಮಿ ಮಾಡ್ಲಿಲ್ಲ.ನಮ್ಮಪ್ಗೆ ನಾನು ಅಂದ್ರೆ ಆಯ್ತು ಸರ್. ನನ್ನನ್ನು ತುಂಬಾ ಪ್ರೀತಿಸ್ತಾನೆ. ನನ್ಗೇನೂ ಕಾಡ್ಮೆ ಮಾಡ್ಲಿಲ್ಲ. ನಾನು ಕೇಳಿದೆಲ್ಲ ತಂದು ಕೊಟ್ಟವ್ರೆ. ಯಾವಾಗ ಆನ್ಲೈನ್ ಕ್ಲಾಸ್ ಪ್ರಾರಂಭವಾಯ್ತೊ ಆವಾಗ ಅಪ್ಪನತ್ರ ಎಂಬ್ರಾಯ್ಡ್ ಮೊಬೈಲ್ ತಂದ್ಕೊಡುಕೆ ಹೇಳ್ದೆ.ಮಗ್ಳೆ ಅಷ್ಟೊಂದು ದುಡ್ಡು ನನ್ನತ್ರ ಇಲ್ಲ.ಸ್ವಲ್ಪ ದಿನ ಹೋಗ್ಲಿ, ಒಡಿನ್ಕೆಲಿ ಸಾಲ ತಾಕಂಡಾದ್ರು ತೆಗಿಸ್ಕೊಡ್ತೆ.ಅಲ್ಲಿವರಿಗೆ ನೀನು ಮಂಜು ಮಾನಿ ಹತ್ರೆ ಹೋಗು.ಅವನತ್ರ ದೊಡ್ಡ ಮೊಬೈಲ್ ಆದೆ.

ಆಂವಾ ಕಲೂಕೆ ಹುಸಾರಿನು ಆವ್ನೆ.ಆದ್ರೆ ಮಗ್ಳೆ ಆ ಮೊಬೈಲ್ನಲ್ಲಿ ಕೆಟ್ಟ ಕೆಟ್ಟ ಸಿಲಿಮೆಲ್ಲ ಬರ್ತದ್ಯಂತೆ. ನೀನು ಅದೆಲ್ಲ ನೋಡ್ ಬ್ಯಾಡ.’ಆಚಿ ಮಾನಿ ತಿಮ್ಮಪ್ಪ, ಗೋವಿಂದ, ಯೆಂಕ್ಟೇಶ ಎಲ್ಲಾ ಸೇರ್ಕಂಡಿ ಸಂಜಿಕೆ ಅದೇ ನೋಡ್ತಿದ್ದುದು ಆಪ್ಗೆ ಗುತ್ತಾಗಿ, ಒಂದಿನಾ ಮೂರು ಮಕ್ಳಿಗೆ ಹಿಡ್ದಿ, ಕೋಣಿ ಒಳ್ಗೆ ಹಾಕಿ ಜಿಂವ್ಗೊಲಿ ಹೊಡ್ದಿ ಬಿಟ್ಟನ್ಯಂತೆ.ಆದ್ರೆ ಈ ಮಕ್ಳು ಕೇಳ್ಬೇಕಲ್ಲಾ.ಆಂವ ಬೆಳ್ಗಾಗೆದ್ದಿ ಕೆಲ್ಸಕ್ಕೆ ಹೊದ್ರೆ ಬರುದು ಸಂಜಿಕೆ. ಅಲ್ಲಿವರಿಗೆ ಇವರ್ದೆ ದರ್ಬಾರ.ಯಾರ ಎಂತ ಮಾಡುಕು ಆಗುದಿಲ್ಲ. ಇದ್ಕೆಲ್ಲಾ ಸಾಲಿ ಸುರು ಆದ್ರೆ ಮಾತ್ರ ಪರಿಹಾರ ಆದೆ. ಇಲ್ಲಾಂದ್ರೆ ನಾಮ್ಕೇರಿ ಮಕ್ಳೇಲ್ಲ ಹಿಂಗೆ ಹಾಳಾಗೊಗುರು. ಅದ್ಕೆ ಮಗ್ಳೆ ನಾನು ಮೊಬೈಲ್ ತೆಗಿಸ್ಕೊಡುವರಿಗೆ ನೀನು ಹುಸಾರಿ ಮ್ಯಾಲೆ ಅವ್ರ ಮಾನಿಗೆ ಹೋಗಿ ಪಾಠ ನೋಡ್ಕಂಡಿ ಬಂದ್ಬಿಡು.’

ಇಷ್ಟು ಹೇಳಿದ್ದೆ ಭಾರತಿಗೆ ಒಳಗಿಂದೊಳ್ಗೆ ತುಂಬಾ ಖುಷಿ ಆಯ್ತು.ಆಯ್ತಪ್ಪ ನಾನು ನಾಳಿಕ್ನಿಂದ ಅವ್ರ ಮಾನಿಗೆ ಹೊಯ್ತೆ ಎಂದ ಹೇಳ್ತಾ ಒಳ್ಗೆ ಓಡಿ ಹೋಯ್ತು……….



– ಪಿ.ಆರ್. ನಾಯ್ಕ, ಹೊಳೆಗದ್ದೆ

  ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾ
ರೆ… (ಸಂ)

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*