
ದಾಂಡೇಲಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗದಿಂದ ದಾಂಡೇಲಿ-ಜೋಯಿಡಾದ ಪ್ರವಾಸಕ್ಕಾಗಿ ವಿಶೇಷ ಟೂರ್ ಪ್ಯಾಕೇಜ್ ಪ್ರವಾಸ ಸೌಲಭ್ಯವನ್ನು ಘೋಷಣೆ ಮಾಡಿದೆ.
ಮಳೆಗಾಲದ ಪ್ರಯುಕ್ತ ಜಲಧಾರೆಗಳ ವೀಕ್ಷಣೆ ಹಾಗೂ ದಾಂಡೇಲಿ ಜೋಯಿಡಾದ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ರಜಾ ದಿನಗಳಾದ ಜುಲೈ 21, 25, ಅಗಸ್ಟ್ 1, 8, 15, 22 ಹಾಗೂ 29 ನೇ ತಾರೀಖಿನಂದು ಪ್ರಾಯೋಜಿತ ಪ್ರವಾಸದ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ಯಾಕೇಜ್ 1 ಧಾರವಾಡದಿಂದ ಹೊರಡಲಿದ್ದು ಈ ಪ್ರವಾಸದಲ್ಲಿ ದಾಂಡೇಲಿಯ ಮೊಸಳೆ ಪಾರ್ಕ, ಮೌಳಂಗಿ ಪಾಲ್ಸ್, ಕುಳಗಿ ನೇಚ-ರ್ ಪಾರ್ಕ, ಉಳವಿ ದೇವಸ್ಥಾನ, ಸೂಪಾ ಜಲಾಶಯಗಳ ವೀಕ್ಷಣೆ ಮಾಡಲಾಗುತ್ತದೆ. ಈ ಪ್ರವಾಸಕ್ಕೆ ವಯಸ್ಕರಿಗೆ 340 ರೂ, ಮಕ್ಕಳಿಗೆ 170 ರು. ಗಳ ಪ್ರಯಾಣ ದರ ನಿಗದಿಪಡಿಸಲಾಗಿದೆ.
ಪ್ಯಾಕೇಜ್-2 ದಾಂಡೇಲಿಯಿಂದ ಪ್ರವಾಸ ಹೊರಡಲಿದ್ದು ಈ ಪ್ರವಾಸದಲ್ಲಿ ಕುಳಗಿ ನೇಚರ್ ಕ್ಯಾಂಪ್, ಸಿಂತೇರಿ ರಾಕ್ಸ್, ಉಳವಿ ದೇವಸ್ಥಾನ, ಬಾಪೇಲಿ ಕ್ರಾಸ್ ಬ್ಯಾಕ್ ವಾಟರ್, ಸೂಪಾ ಜಲಶಶಯ, ಮೌಳಂಗಿ ಗಳ ವೀಕ್ಷಣೆ ಮಾಡಲಾಗುತ್ತದೆ. ಈ ಪ್ರವಾಸಕ್ಕೆ ವಯಸ್ಕರಿಗೆ 220 ರೂ ಮಕ್ಕಳಿಗೆ 110 ರೂ ಗಳ ಪ್ರಯಾಣ ದರ ನಿಗದಿಪಡಿಸಲಾಗಿದೆ.
ಈ ಪ್ರವಾಸಗಳಿಗಾಗಿ www.ksrtc.in ನಲ್ಲಿಯೂ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಅವಶ್ಯವಿದ್ದರೆ 7760996271 / 7760991679 ಹೆಲ್ಪಲೈನ್‍ನ್ನೂ ಸಂಪರ್ಕಿಸಬಹುದಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ಆಧಿಕಾರಿಗಳು ತಿಳಿಸಿದ್ದಾರೆ.

Be the first to comment