ಧಾರವಾಡದ ಖ್ಯಾತ ಹೃದಯ ತಜ್ಞ ಡಾ. ಪ್ರಕಾಶ ಎಸ್. ರಾಮನಗೌಡ ಅವರೊಂದಿಗೆ ಕೊರೊನಾದ ಬಗ್ಗೆ ಜಾಗೃತಿ ಮಾಹಿತಿಗಳು

ವೈದ್ಯೋ ನಾರಾಯಣೋ ಹರಿ ಎಂಬ ನಾಣ್ಣುಡಿಯಂತೆ ಪ್ರಸ್ತುತ ದಿನಗಳಲ್ಲಿ ದೇವರ ಧೂತರಂತೆ ನಮ್ಮನ್ನು ರಕ್ಷಿಸುತ್ತಿರುವ ಸಮಸ್ತ ವೈದ್ಯ ವೃಂದಕ್ಕೆ ನಮಿಸುತ್ತಾ ಇಂದಿನ ನಮ್ಮ ವೈದ್ಯರೊಂದಿಗೆ ಮಾತುಗಳನ್ನು ಪ್ರಾರಂಭಿಸುವ ಮುನ್ನ ಅವರ ಒಂದು ಚಿಕ್ಕ ಪರಿಚಯ ತಮ್ಮೆಲ್ಲರ ಮುಂದೆ.

ತಂದೆ ಎಸ್. ಆರ್. ರಾಮನಗೌಡರ ತಾಯಿ ಗಂಗಮ್ಮ ಇವರ ಪುತ್ರರಾಗಿ ೧/೧೨/೧೯೭೫ ರಲ್ಲಿ ಜನಸಿದ ಇವರು
MBN 2000 IN JNMC BELGAUM ಯಲ್ಲಿ‌ಮುಗಿಸಿ ನಂತರ ಎಂಡಿ ಡಿಆರ್ ಬಿ ಆರ್ ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಬೆಂಗಳೂರು 2006 ನಲ್ಲಿ ತದನಂತರ
ಡಿಎನ್‌ಬಿ ಯನ್ನು ಮೌಲಾನಾ ಆಜಾದ್ ಮೆಡಿಕಲ್ ಕಾಲೇಜ್ ನವದೆಹಲಿ 2006 ರಲ್ಲಿಪಡೆದುಕೊಂಡರು.
ಎಮರ್ಜೆನ್ಸಿ ಮೆಡಿಸಿನ್‌ನಲ್ಲಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಬೆಂಗಳೂರಿನಲ್ಲಿ ಸಮಾಲೋಚನೆ ಮತ್ತು 10 ತಿಂಗಳವರೆಗೆ ತೀವ್ರವಾದ ಆರೈಕೆ ಘಟಕ ಕಾರ್ಯವನ್ನು ನಿರ್ವಹಿಸಿ
2007 ರಿಂದ ಡಿಆರ್ ಎಸ್. ಆರ್. ರಾಮನಗೌಡರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಧಾರವಾಡದಲ್ಲಿ ತಮ್ಮ ವೃತ್ತಿ ಬದುಕನ್ನು ‌ಪ್ರಾರಂಭಿಸಿದರು.

ಅವರ ಮಾತುಗಳಲ್ಲಿ ಕೊರೊನಾದ ಸ್ಥಿತಿ ಗತಿಗಳ ಬಗ್ಗೆ ತಿಳಿಯೋಣವೇ…

೧)ಪ್ರಸ್ತುತ ದಿನಗಳಲ್ಲಿ ಕೊರೊನಾ ಉಲ್ಬಣವಾಗಲು‌ ಕಾರಣ ಏನು ?

ಕೊರೊನಾ ಕಳೆದ 18 ತಿಂಗಳುಗಳಿಂದ ವಿಶ್ವದಾದ್ಯಂತ ಜನ ಜೀವನದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದೆ. ಮೊದಲನೇ ಅಲೆಗಿಂತ ಎರಡನೆಯ ಅಲೆ ಹೆಚ್ಚು ಭೀಕರ ಹಾಗೂ ಭಯಾನಕವಾಗಿ ತೋರುತ್ತದೆ. ಎರಡನೆಯ ಅಲೆಯು ಹರಡುವಿಕೆ ವೈದ್ಯ ಲೋಕವನ್ನು ಗೊಂದಲಕ್ಕೀಡು ಮಾಡಿದೆ .
ನನ್ನ ಪ್ರಕಾರ ಜನರಲ್ಲಿ ಎರಡು ಗುಂಪುಗಳಾಗಿ ವಿಂಗಡಣೆ ಯಾಗಿರುವುದರಿಂದ ಹೀಗೆ ಆಗುತ್ತಿದೆ.
ಒಂದು ಗುಂಪಿನ ಜನ ನಾನು ಆಸ್ಪತ್ರೆಗೆ ಹೋದರೆ ಎಲ್ಲಿ ಮನೆಗೆ ಮರಳಿ ಬರುವುದಿಲ್ಲ. ನನ್ನ ದೇಹವು ಅವರಿಗೆ ದೊರಕುವುದಿಲ್ಲ. ಯಾಕೆ ಆಸ್ಪತ್ರೆಗೆ ಹೋಗಿ ಸಿಲುಕಬೇಕು. ಎಂದು ಯೋಚನೆ ಮಾಡುವವರು ಇದ್ದರೆ ಮತ್ತೊಂದು ಗುಂಪಿನ ಜನ ಎಷ್ಟೇ ಕಷ್ಟವಾದರು ಏನೆ ಆದರೂ ನಾನು ಆಸ್ಪತ್ರೆಗೆ ಹೋಗುವೆ ಎಂದು ಮುಂದೆ ಸಾಗುವ ಜನ ಇರುವುದರಿಂದ ಹೀಗೆ ಆಗುತ್ತಿರ ಬಹುದು. ವಿಭಿನ್ನ ಅಭಿಪ್ರಾಯ ಜನರ ಪ್ರಾಣವನ್ನು ತೆಗದುಕೊಳ್ಳುತ್ತಿದೆ. ಇದರಿಂದ ಅವರು ಹೊರಬಂದರೆ ನಾವು‌ ಜನರ ಪ್ರಾಣವನ್ನು ಉಳಿಸಬಹುದು. ಮೊದಲು ಅವರ ಆಲೋಚನೆ ಬದಲಾಗಬೇಕು. ಅವರು ಮನೆಯಲ್ಲಿ ಇದ್ದುಕೊಂಡು ಕೊನೆಯ ಕ್ಷಣಕ್ಕೆ ಆಸ್ಪತ್ರೆಗೆ ಬಂದರೆ ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಾಗುವದಿಲ್ಲ. ಈ ಕಾರಣಕ್ಕೆ ಪ್ರತಿನಿತ್ಯ ಆಸ್ಪತ್ರೆಯನ್ನು ತಲುಪುವ ಮೊದಲೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಸಾಲು ಸಾಲು‌ ‌ಕೇಸ್ ಗಳು ಬರುತ್ತಿರುವುದು ಎಂದು ಹೇಳ ಬಹುದು.

೨)ಎರಡನೇ ಅಲೆಯಲ್ಲಿ ಆಸ್ಪತ್ರೆಯ ಸ್ಥಿತಿ ಹೇಗಿದೆ ?
ಎರಡನೇ ಅಲೆ ವೈದ್ಯಲೋಕಕ್ಕೆ ಅಚ್ಚರಿಯನ್ನು ಮೂಡಿಸಿದೆ . ನಾವುಗಳು ತುಂಬಾ ಒತ್ತಡದಿಂದಲೇ ನಮ್ಮ ವೃತ್ತಿಯನ್ನು ನಿಭಾಯಿಸುತ್ತಿದ್ದೇವೆ. ದಿನದ ೨೪ ತಾಸು ಸದಾ ಕೆಲಸಕ್ಕೆ ಲಭ್ಯವಾಗಿದ್ದೇವೆ ಸರಕಾರಿ ಆಸ್ಪತ್ರೆಗಳಲ್ಲಿ ದಿನಕ್ಕೆ ೬೦೦ ರಿಂದ ೭೦೦ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ಖಾಸಗಿ ಆಸ್ಪತ್ರೆಗಳಲ್ಲಿ ೫೦ ರಿಂದ ೬೦ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಜೀವನ ತುಂಬಾ ಒತ್ತಡದಿಂದ ಸಾಗುತ್ತಿದೆ. ಪ್ರತಿನಿತ್ಯ ಆಯಾದಿಂದ ಹಿಡಿದು ಮೆಡಿಕಲ್ ಗೆ ಸಂಬಂಧಿಸಿದ ವಸ್ತುಗಳನ್ನು ಸರಬರಾಜು ಮಾಡುತ್ತಿರುವ ಪ್ರತಿಯೊಬ್ಬರು ಒತ್ತಡದಿಂದಲೇ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ನಾವುಗಳು ಒಂದು ದಿನ ಬಿಟ್ಟು ಒಂದು ದಿನ ಕಾರ್ಯವನ್ನು ಮಾಡುತ್ತಿದ್ದೇವೆ. ನಮಗೂ ಸ್ವಲ್ಪ ಆಯಾಸ ಉಂಟಾಗುತ್ತದೆ. ಇಂತಹ‌‌ ಪರಿಸ್ಥಿತಿ ಇದ್ದರು ‌ಕೂಡ‌ ನಾವು ಕರ್ತವ್ಯ ಮಾಡಲು ಸದಾ ಸಿದ್ದ.

೩)ಇತ್ತೀಚಿನ ದಿನಗಳಲ್ಲಿ ಆಮ್ಮಜನಕದ‌ ಕೊರತೆ ತುಂಬಾ ಆಗುತ್ತಿದೆ. ಇದರ ಬಗ್ಗೆ ಏನು ಹೇಳಿತ್ತಿರಿ ?
ಹೌದು ಆಮ್ಮಜನಕದ ಕೊರತೆ ತುಂಬಾ ಆಗಿದೆ . ಒಂದು ಪಾಸಿಟಿವ್ ಬಂದ ವ್ಯಕ್ತಿಗೆ ೧೫ ರಿಂದ ೨೦ ಲೀಟರ ಆಮ್ಮಜನಕದ ಸಿಲಿಂಡರ್ ಬೇಕೆ ಬೇಕು. ಅದು ಎರಡರಿಂದ ಮೂರು ದಿನಗಳಲ್ಲಿ ಖಾಲಿಯಾಗಿ ಬಿಡುತ್ತದೆ. ಆದರೆ ಅದನ್ನು ಸರಬರಾಜು ಮಾಡುವ ವ್ಯಕ್ತಿಗೆ ಈಗ ತುಂಬಾ ಒತ್ತಡ ಆಗುತ್ತಿದೆ. ಅವನಿಗೆ ಗೊಂದಲ ಉಂಟಾಗುತ್ತಿದೆ. ಅವನು ಕೂಡ ಹೇಗೆ ಆಮ್ಮಜನಕದ ವ್ಯವಸ್ಥೆ ಮಾಡಬೇಕು ಎಂಬ ಚಿಂತನೆಯಲ್ಲಿರುತ್ತಾನೆ. ಆದ್ದರಿಂದ ಈ ಸಮಸ್ಯೆ ತುಂಬಾ ಹೆಚ್ಚಾಗಿದೆ ಎಂದು ಹೇಳ ಬಹುದು .

೪)ಒಬ್ಬ ಮನುಷ್ಯನ ದೇಹದಲ್ಲಿ ‌ ಎಷ್ಟು ಮಾತ್ರದಲ್ಲಿ ಆಮ್ಲಜನಕದ ಪ್ರಮಾಣ ಇರಬೇಕು‌ ? ಈಗ ಹೇಗಿದೆ ಪರಿಸ್ಥಿತಿ? ಯಾವ ಪ್ರಮಾಣದಲ್ಲಿ ದೇಹದಲ್ಲಿ ಆಮ್ಲಜನಕ ಕಡಿಮೆಯಾದರೆ ಸಾವು ಉಂಟಾಗುತ್ತದೆ?

ಪಾಸಿಟಿವ್ ಬಂದ ವ್ಯಕ್ತಿಯಲ್ಲಿ ಶೇಕಡಾ ೮೦ ಕ್ಕಿಂತ ಹೆಚ್ಚು ಆಮ್ಮಜನಕ ಪ್ರಮಾಣ ಇದ್ದರೆ ಖಂಡಿತ ಆವ್ಯಕ್ತಿ ಸಂಪೂರ್ಣ ವಾಗಿ ಗುಣಮುಖವಾಗುತ್ತಾನೆ. ಪ್ರಸ್ತುತವಾಗಿ ಒಬ್ಬವ್ಯಕ್ತಿ ಸಂಪೂರ್ಣ ವಾಗಿ ಗುಣಮುಖವಾಗಲು ೭ರಿಂದ ೧೦ ದಿನಗಳು ಬೇಕು. ಆವ್ಯಕ್ತಿಗೆ ೧೫ ರಿಂದ ೨೦ ಲೀಟರ ಆಮ್ಮಜನಕ ಬೇಕೆ ಬೇಕು. ಹಾಗೆ ಇದ್ದಾಗ ಮಾತ್ರ ಅವನಿಗೆ ಒಳ್ಳೆಯ ಚಿಕಿತ್ಸೆ ದೊರಕುತ್ತದೆ. ಅದೇ ರೀತಿ ಹಾಸಿಗೆಗಳ ವ್ಯವಸ್ಥೆ ಇರಬೇಕು. ಒಂದು ಸಾವಿರ ಹಾಸಿಗೆಗಳು ಇದ್ದರೆ ಅದರ ಜೊತೆ ಒಂದು ಸಾವಿರ ಆಮ್ಮಜನದಕ ವ್ಯವಸ್ಥೆ ಇರಬೇಕು. ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು‌ಅವಶ್ಯಕತೆ ಇದ್ದವರಿಗೆ ಚಿಕಿತ್ಸೆಯನ್ನು ನೀಡಬಹುದು.
ಸೊಂಕಿತ ವ್ಯಕ್ತಿಯಲ್ಲಿ . ಪ್ರತಿಶತ ೫೦ ರಿಂದ ೪೦ ಪ್ರಮಾಣದಷ್ಟು ಆಮ್ಲಜನಕ ಇದ್ದರೆ ಆ ವ್ಯಕ್ತಿಯು ಬದುಕುಳಿಯುವುದರು ತುಂಬಾ ಕಷ್ಟ !

೫)ಕೊರೂನಾ ಜನರನ್ನು ಮತ್ತು ವೈದ್ಯರನ್ನು ಗೊಂದಲಕ್ಕೆ ಈಡುಮಾಡುತ್ತಿದೆಯಾ?
ಖಂಡಿತವಾಗಿಯು ಇದು ಜನರನ್ನು ಮತ್ತು ವೈದ್ಯರನ್ನು ಗೊಂದಲಕ್ಕೆ ಸಿಲುಕುವಂತೆ ಮಾಡುತ್ತಿದೆ . ಒಂದು ಮನೆಯಲ್ಲಿ ೪ ಜನರಿಗೆ ಸೋಂಕು ತಲುಗಿದಾಗ ಒಬ್ಬ ವ್ಯಕ್ತಿ ಬಲಿಷ್ಠ ಇದ್ದರೆ ಅವನು ಯಾವರೀತಿಯಲ್ಲಿ ಎಲ್ಲರನ್ನೂ ನೋಡಿಕೊಳ್ಳ ಬೇಕು ಎಂಬ ಗೊಂದಲದಲ್ಲಿ‌ ಅವನು ಇದ್ದರೆ ಮತ್ತೊಂದು ಕಡೆ ‌ಈ ವೈರಸ್ ಯಾವ ರೀತಿಯಲ್ಲಿ ಬದಲಾವಣೆಯಾಗುತ್ತಿದೆ ಎಂಬುದನ್ನು ತಿಳಿಯದೆ ಗೊಂದಲಕ್ಕೆ ಈಡಾಗುತಿದ್ದೇವೆ. ಹೀಗೆ ಆಗಿದೆ ಎಂದರೆ ಪ್ರತಿದಿನವು ‌ಹಲವಾರು ಮನಕಲಕುವ ದೃಶ್ಯಗಳನ್ನು ನೋಡುತ್ತೇವೆ .

೬) ವ್ಯಾಕ್ಸಿನೇಷನ್‌ ಬಗ್ಗೆ ಏನು ಹೇಳುತ್ತಿರಿ‌ ?
ವ್ಯಾಕ್ಸಿನೇಷನ್‌ ಬಗ್ಗೆ ಮೊದಲು ನಾನು ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇದರಿಂದ ಜನರಿಗೆ ಜಾಗೃತಿಯನ್ನು ಮೂಡಿಸುವ ಒಂದು ಉತ್ತಮ ಪ್ರಯತ್ನ ನಡೆಯುತ್ತಿತ್ತು. ಆಗ ಕೊರೊನಾ ಅಷ್ಟೊಂದು ಉಲ್ಬಣಗೊಂಡಿರಲಿಲ್ಲ ಹಾಗೇ ವ್ಯಾಕ್ಸಿನೇಷನ್‌ ಕೂಡಾ ಲಭ್ಯವಾಗುತ್ತಿತ್ತು. ಆದರೆ ಮಾರ್ಚ ತಿಂಗಳ ಕೊನೆಯ ವಾರಗಳಲ್ಲಿ ವ್ಯಾಕ್ಸಿನೇಷನ್‌ ಸರಬರಾಜು ಕಡಿಮೆ ಯಾಯಿತು. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಬರಲು‌ ಪ್ರಾರಂಭಿಸಿದವು. ಆದರೆ ಜನ ವ್ಯಾಕ್ಸಿನೇಷನ್‌ ಬೇಕು ಎಂದು ಕೇಳಿದಾಗ ಬಂದಾಗ ಹೇಳುತ್ತೇವೆ ಎಂದು ಉತ್ತರಿಸ ಬೇಕಾದ ಪರಿಸ್ಥಿತಿ ಈಗ ಬಂದಿದೆ ಅಷ್ಟೇ ಜನ ವ್ಯಾಕ್ಸಿನೇಷನ್‌ ಇಲ್ಲ ಎಂದರು ಜಾಗೃತಿಯಿಂದ ಇರಬೇಕು .

೭)ಯಾವರೀತಿ ನಿರ್ಲಕ್ಷಿಸಿದರೆ ಸೋಂಕು ತಗುಲುವ ಸಂಭವವಿದೆ ?

*ಮೊದಲು ಜನರಿಗೆ ಸೋಂಕಿನ ಬಗ್ಗೆ ಅರಿವು ಇರಬೇಕು
ಹಾರಿಕೆಯ ಮಾತುಗಳ ಆಡಬಾರದು . *ರೋಗದ ಗಂಭೀರತೆಯನ್ನು ಅರಿಯಬೇಕು. *ಸಣ್ಣ ಪುಟ್ಟ ಜ್ವರ, ತಲೆನೋವು, ಕೆಮ್ಮು, ನೆಗಡಿ‌ ಎಂದು ನಿರ್ಲಕ್ಷಿಸಬಾರದು . *ಊಟ ಸೇವನೆ ಕಡಿಮೆ ಯಾಗಬಾರದು. *ಊಟ ಸೇವೆನೆ ಕಡಿಮೆಯಾದರೆ ವ್ಯಕ್ತಿ ದೇಹದಲ್ಲಿ ನಿಮೋನಿಯಾ ಉಲ್ಬಣವಾದಂತೆ. *ಯಾವ ವ್ಯಕ್ತಿಗೆ ಆಯಾಸಾ , ಊಟ ಮಾಡಲು ಆಗುವುದಿಲ್ಲವೋ ಇವು ನಿಮೋನಿಯಾ ಹೆಚ್ಚಿಸಲು‌ಕಾರಣವಾಗುತ್ತದೆ. ಇದರಿಂದ ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ.
ದಮ್ಮು ,ತೆಕು ,ಹತ್ತುವುದು ‌. *Rtpcr ರಿಪೋರ್ಟ್ ನೆಗೆಟಿವ್ ಬಂದರು‌ ಸಮಾಧಾನ ವಾಗುವ ಹಾಗೇ ಇಲ್ಲ hrct 5ರಿಂದ7 ದಿನಗಳವರೆಗೆ ರೋಗದ ಸ್ಯಾಚುರೇಶನ್ ೯೪% ಕಡಿಮೆಯಿದ್ದರೆ ಅಥವಾ ಊಟ ಹೋಗತಾ ಇಲ್ಲ ಎಂದರೆ hrct ಪರೀಕ್ಷೆ ಮಾಡಿಸಬೇಕು. *ಆಮ್ಲಜನಕ ಕಡಿಮೆ ಯಾದರೆ ಸಾವುಗಳು ಹೆಚ್ಚಾಗುತ್ತದೆ . ಈ ಎಲ್ಲ ವಿಷಯಗಳ ಕಡೆ ಗಮನ ಹರಿಸಬೇಕು‌

೮)ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಅಂಶಗಳು ಯಾವವು ಸರ್?
*ಸರಕಾರದ ಮಾರ್ಗಸೂಚಿ ಪಾಲನೆಯನ್ನು ಮಾಡಬೇಕು‌ *ಸಾಮಾಜಿಕ ಅಂತರ ಕಾಪಾಡಬೇಕು. ಒಂದಕ್ಕಿಂತ ಎರಡು ಮಾಸ್ಕಗಳನ್ನು ಧರಿಸುವುದು ಉತ್ತಮ. *ಸಾಬೂನಿನಿಂದ ಕೈ ತೋಳೆಯ ಬೇಕು . *ದಿನಕ್ಕೆ ಎರಡು ಸಾರಿ ಸ್ನಾನ ಮಾಡಬೇಕು. *ಸ್ಯಾನಿಟ್ಯಾಜರ್ ಉಪಯೋಗಿಸಬೇಕು. *ಅಗತ್ಯವಿದ್ದರೆ ಮಾತ್ರ ಹೊರಗಡೆ ಹೋಗಬೇಕು‌. *ಅನಾವಶ್ಯಕ ಓಡಾಟ ಬೇಡ. *ಯಾವುದೇ ಊಹೆಗಳಿಗೆ ಕಿವಿಗೊಡಬೇಡಿ‌. ಎಲ್ಲರೂ ಜಾಗೃತರಾಗಿ ಮತ್ತೊಬ್ಬರನ್ನು ಜಾಗೃತಗೊಳ್ಳಿಸಿ. ಭಯ ಬೇಡ ಜಾಗೃತಿ ಇರಲಿ. *ಯಾವುದೇ ರೀತಿಯ ಲಕ್ಷಗಳು ಇದ್ದರೆ ತಕ್ಷಣ ಆಸ್ಪತ್ರೆ ಗೆ ಭೇಟಿ‌ ನೀಡಿ‌.

ಎಲ್ಲರೂ ಒಟ್ಟಾಗಿ ಕೂಡಿ ಈ ಮಹಾಮಾರಿಯನ್ನು ಓಡಿಸೋಣ. ಮನೆಯಲ್ಲಿ ಇರಿ. ಹುಷಾರಾಗಿ ಇರಿ.

ಲೇಖಕಿ
ಭಾಗ್ಯಶ್ರೀ ಎಸ್. ಆರ್. (ಶಿರಭ)
ರಜಪೂತಗಲ್ಲಿ ‌ಮದಿಹಾಳ‌
ಧಾರವಾಡ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*