ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ, ಭಾಜಪ ಮಾಜಿ ಮುಖಂಡ ರಾಜು ಧೂಳಿಯವರು ಶನಿವಾರ ಕೊನೆಯುಸಿರೆಳೆದರು.
ಹಳಿಯಾಳದ ರಾಜಕೀಯದಲ್ಲಿ ಗುರುತಿಸಬಹುದಾಗಿರುವಂತಹ ವ್ಯಕ್ತಿಯಾಗಿ, ಹಲವು ಹೋರಾಟ ಹಾಗೂ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ರಾಜು ದೂಳಿ ಹಿಂದೂ ಸಂಘಟನೆಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು.
ಇತ್ತೀಚೆಗೆ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ರಾಜೂ ಧೂಳಿ ರಾಜ್ಯಾದಂತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಇವರು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದಿದ್ದಾರೆ.
Be the first to comment