ಹಿರಿಯ ಸಾಹಿತಿ ಯಲ್ಲಾಪುರದ ನಾ.ಸು. ಭರತನಹಳ್ಳಿ ಇನ್ನಿಲ್ಲ

ಯಲ್ಲಾಪುರ: ಹಿರಿಯ ಸಾಹಿತಿ, ಅಂಕಣಕಾರ ಯಲ್ಲಾಪುರದ ನಾ.ಸು. ಭರತನಹಳ್ಳಿ ಶುಕ್ರವಾರ ಕೊನೆಯುಸೆರೆಳೆದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಪತ್ರಕರ್ತರಾಗಿ, ಅಂಕಣಕಾರರಾಗಿ, ಸಾಹಿತಿಯಾಗಿ, ರಂಗಭೂಮಿ ಕಲಾವಿದರಾಗಿ, ಪ್ರಕಾಶಕರಾಗಿ, ಸಮಾಜ ಸೇವಕರಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿದ್ದ ನಾಸು ಭರತನಹಳ್ಳಿಯವರು ಆರು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಸೇವೆ ಮಾಡಿದ್ದರು. ನಾಸು ಎಂದೇ ಚಿರಪರಿಚಿತರಾಗಿದ್ಕದ ಇವರು ಕಥೆ, ಕಾದಂಬರಿ, ಕವನ, ಪ್ರವಾಸಿ ಕಥನ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ ಬರಹ ಸೇರಿದಂತೆ 25 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಪತ್ರಕರ್ತರಾಗಿ, ಸಂಪಾದಕರಾಗಿ, ಅಂಕಣಕಾರರಾಗಿ ಮಾದ್ಯಮ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದರು.

ಯಲ್ಲಾಪುರ ತಾಲೂಕಾ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾಸು ಉತ್ತರ ಕನ್ನಡ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಗೌರವ ಪಡೆದಿದ್ದರು. ಶ್ಯಾಮರಾವ್ ದತ್ತಿ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕಶ್ರೀ ಪ್ರಶಸ್ತಿ, ಕಾಸರಗೋಡಿನ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಭರತನಹಳ್ಳಿ ಅವರು ಸೊಸೆ, ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಾಸು ಅಗಲುವಿಕೆಗೆ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

3 Comments

  1. ನಮಗೆಲ್ಲ ಮಾರ್ಗದರ್ಶನ ನೀಡಿ ಪ್ರೋತ್ಸಾಹ ನೀಡಿದ ಗುರು.ನಾ.ಸು ಎಂದಾಕ್ಷಣ ಒಂದು ಚೈತನ್ಯದ ಸಂಕೇತದಂತಿದ್ದರು.ಗುರುವಿಲ್ಲದ ಮನಸ್ಸು ಭಾರವಾಗಿದೆ.ಓಂ ಶಾಂತಿ

  2. ಹಿರಿಯ ಸಾಹಿತಿ ನಾಸು ಭರತನಹಳ್ಳಿ ಅವರು ಇನ್ನಿಲ್ಲ ಎಂಬ ಸಂಗತಿ ಖೇದಕರ. ಅವರಿಗೆ ಹಾರ್ದಿಕ ಸಂತಾಪಗಳು.😪🙏🏻

  3. ಮಾತಿಲ್ಲ ಎಲ್ಲ ಮೌನದ ಹಾದಿ ಹಿಡಿದಿದೆ…ಗುರುವನ್ನು ಕಳೆದು ಕೊಂಡು ಬರಿದಾಗಿದೆ.

Leave a Reply

Your email address will not be published.


*