ಹಳಿಯಾಳ-ದಾಂಡೇಲಿ ಶಿಕ್ಷಕರ ಚುನಾವಣೆ: ಸತೀಶ ನಾಯಕ, ಭಾವಿಕೇರಿ ತಂಡಕ್ಕೆ ಗೆಲುವು


ಹಳಿಯಾಳ: ಹಳಿಯಾಳ ಹಾಗೂ ದಾಂಡೇಲಿ ತಾಲೂಕುಗಳನ್ನೊಳಗೊಂಡ ಶಿಕ್ಷಕರ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಸತೀಶ ನಾಯಕ ಭಾವಿಕೇರಿ ನೇತೃತ್ವದ ತಂಡ 11 ಸದಸ್ಯರಲ್ಲಿ 9 ಸದಸ್ಯರನ್ನು ಗೆದ್ದುಕೊಳ್ಳುವ ಮೂಲಕ ಗಮನಾರ್ಹ ಜಯಬೇರಿ ಸಾಧಿಸಿದೆ.


ಎರಡು ಬಾರಿ ಅಧ್ಯಕ್ಷರಾಗಿದ್ದ ಸತೀಷ ನಾಯಕರದ್ದು ಇದು ನಾಲ್ಕನೆಯ ಗೆಲುವಾಗಿದೆ.
ತಾಲೂಕಿನಲ್ಲಿ ಒಟ್ಟೂ 553 ಶಿಕ್ಷಕರ ಮತಗಳಿತ್ತು. ಇದರಲ್ಲಿ 528 ಮತದಾನವಾಗಿತ್ತು. ಇದರಲ್ಲಿ ಸತೀಶ ನಾಯಕ ಭಾವಿಕೇರಿ ನೈತೃತ್ವದ ತಂಡದಿಂದ ಸತೀಶ ನಾಯಕ ಭಾವಿಕೇರಿ 402 ಮತಗಳನ್ನು, ಪ್ರಶಾಂತ ಡಿ. ನಾಯಕ 386, ವೆಂಕಟೇಶ ನಾಯಕ 347, ಉದಯ ನಾಯಕ 288, ಪ್ರವೀಣ ನಾಯ್ಕ 262, ಸುಲೇಮಾನ ಶೇಖ 233, ಜೊನೆಟಾ ರೊಬರ್ಟ್ ರೊಜಾರಿಯೋ 346, ವಿಜಯಲಕ್ಷ್ಮಿ ಮುರುಗೇಶ 310, ಮಮತಾ ಕಾಮತ 304 ಮತಗಳನ್ನು ಪಡೆದುಕೊಂಡು ಆಯ್ಕೆಯಾಗಿದ್ದಾರೆ. ಪಿ.ಡಿ. ಮಡಿವಾಳ ನೇತೃತ್ವದ ತಂಡದಿಂದ ಪಿ.ಡಿ. ಮಡಿವಾಳ 243 ಹಾಗೂ ಭಾರತಿ ನೆಲವಡೆ 286 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ಶಿಕ್ಷಕರು


ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹ್ಮದ್ ಮುಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*