ಜೋಯಿಡಾ ಶಿಕ್ಷಕರ ಚುನಾವಣೆ: ಎಲ್ಲ ಸ್ಥಾನ ಗೆದ್ದುಕೊಂಡ ಯಶವಂತ ನಾಯ್ಕ ತಂಡ

ಯಶವಂತರ ನಾಯ್ಕರಿಗೆ ನಾಲ್ಕನೆಯ ಬಾರಿ ಒಲಿದ ವಿಜಯಮಾಲೆ

ಜೋಯಿಡಾ: ಜೋಯಿಡಾ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಯಶವಂತ ನಾಯ್ಕ ನೇತೃತ್ವದ ತಂಡ ಎಲ್ಲಾ ಸ್ಥಾನಗಳನ್ನೂ ಗೆದ್ದುಕೊಳ್ಳುವ ಮೂಲಕ ಅಭೂತಪೂರ್ವ ಜಯ ಸಾಧಿಸಿದೆ.


ಜೊಯಿಡಾ ತಾಲೂಕಿನಲ್ಲಿ ಒಟ್ಟೂ 242 ಶಿಕ್ಷಕ ಮತದಾರರಿದ್ದರು. ಅವರಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ 224 ಶಿಕ್ಷಕರು ಮತಚಲಾಯಿಸಿದ್ದರು. ಚಲಾವಣೆಯಾದ 242 ಮತಗಳಲ್ಲಿ ಯಶವಂತ ನಾಯ್ಕ 209 ಮತಗಳನ್ನು ಪಡೆದು ನಾಲ್ಕನೆಯ ಬಾರಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ.

ಗೆಲುವಿನ ನಗೆಯಲ್ಲಿ ಶಶಿಕಾಂತ, ಯಶವಂತ, ಮಹಾದೇವ

ಉಳಿದಂತೆ ಇವರದ್ದೇ ನೇತೃತ್ವದ ತಂಡದ ಮಹಾದೇವ ಹಳದನಕರ 191 ಮತಗಳನ್ನು ಪಡೆದು ಎರಡನೆಯ ಗೆಲುವು ಕಂಡರೆ, ಶಶಿಕಾಂತ ಕಾಂಬ್ಳೆ 167 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.


ಉಳಿದಂತೆ ಮಹಿಳಾ ಸದಸ್ಯತ್ವದಲ್ಲಿ ಇವರದ್ದೇ ತಂಡದ ಸುಲಭಾ ಗಾವಡೆ ಹಾಗೂ ಮಿಲನ ಸಾಳುಂಕೆ ಅವಿರೋಧವಾಗಿ ಆಯ್ಕೆಯಾಗಿದ್ದರು. ತಾಲೂಕಿನ ಶಿಕ್ಷಕರ ಸಂಘದ ಐದು ಸ್ಥಾನಗಳಲ್ಲಿ ಐದೂ ಸ್ಥಾನಗಳು ಯಶವಂತ ನಾಯ್ಕ ತಂಡದ ಪಾಲಾಗಿರುವುದು ಉಲ್ಲೇಖಾರ್ಹವಾಗಿದೆ.

ಅವಿರೋಧ ಆಯ್ಕೆಯಾದ ಸುಲಭಾ ಗಾವಡೆ, ಮಿಲನ ಸಾಳುಂಕೆ

ಇವರ ಪ್ರತಿಸ್ಪರ್ದಿ ತಂಡದಿಂದ ಸ್ಪರ್ದಿಸಿದ್ದ ಸದಾನಂದ ಪಟ್ಗಾರ 26, ಕೆ.ಎಸ್. ಟೊನ್ನಿ 21, ಆರ್.ಎನ್. ಚೌಹಾಣ 18 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ.


ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೆಮಠ ಚುನಾವಣಾಧಿಕಾರಿಗಳಾಗಿ, ಪರಮೇಶ್ವರ ಹರಿಕಂತ್ರ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*