ದಾಂಡೇಲಿ: ಅಂತೂ ಇಂತೂ ದಾಂಡೇಲಿ ನಗರಸಭಾ ಸದಸ್ಯರು ಬರೋಬ್ಬರಿ ಎರಡು ವರ್ಷ ಮೂರು ತಿಂಗಳ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಮಣ ವಚನ ಸ್ವೀಕರಿಸಿ ಅಧಿಕೃತವಾಗಿ ತಮ್ಮ ಹುದ್ದೆ ಅಲಂಕರಿಸಿದ್ದಾರೆ.
ದಾಂಡೇಲಿ ನಗರಸಭೆಯ ಸಾಮಾನ್ಯ ಸಭೆ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯ ಆರಂಭದಲ್ಲಿ ಪೌರಾಯುಕ್ತ ಶೈಲೇಶ ಪರಮಾನಂದರವರು ನೂತನ, ಅಧ್ಯಕ್ಷ ಸರಸ್ವತಿ ರಜಪೂತ, ಉಪಾಧ್ತಕ್ಷ ನಂದ್ಯಾಳಕರ ಹಾಗೂ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. 31 ಸದಸ್ಯರಲ್ಲಿ ನಂದೀಶ ಮುಂಗರವಾಡಿಯವರೊಬ್ಬರು ಗೈರಾಗಿದ್ದರು.
ನಗರಸಭೆಗೆ ಆಯ್ಕೆಯಾಗಿ ಎರಡು ವರ್ಷಗಳೇ ಕಲದರೂ ಇಲ್ಲಿಯವರೆಗೂ ಅಧಿಕೃತವಾಗಿ ಸದಸ್ಯರಾಗಿ ಅಧಿಕಾರ ಸ್ವೀಕರಿಸಿರಲಿಲ್ಲ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಗೆ ಬಂದ ತಡೆ, ನ್ಯಾಯಾಲಯದ ಕೆಲ ಆದೇಶ ಹಾಗೂ ಇತರೆ ಕಾರಣಗಳಿಂದ ಈ ಪ್ರಕ್ರಿಯೆ ಮುಂದೂಡುತ್ತಲೇ ಬಂದಿತ್ತು. ಇದೀಗ ಎಲ್ಲವೂ ಸರಿಯಾಗಿ ನೂತನ ಅಧ್ಯಕ್ಷ- ಉಪಾಧ್ಯಕ್ಷರು ಹಾಗೂ ಸದಸ್ಯರು ಅಧಿಕಾರಕ್ಕೇರುವಂತಾಗಿದೆ.
ಸರ್ವ ಸದಸ್ಯರಿಗೂ ಹಾರ್ದಿಕ ಶುಭಾಶಯಗಳು.🌹🙏🙏