ಸರ್ವೀಸಿಂಗ್ ಸೆಂಟರ್‌ನಲ್ಲಿ ಕೂಲಿಯಾಗಿದ್ದ ಬಾಲಕ ಈಗ ನಗರಸಭೆಯ ಉಪಾಧ್ಯಕ್ಷ

ದಾಂಡೇಲಿ ನಗರಸಭೆಯ ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ ಎಂಬ ಕ್ರಿಯಾಶೀಲ ಯುವಕ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷವೂ ಸೇರಿದಂತೆ ದಾಂಡೇಲಿಯ ಜನತೆ ಇವರ ಮೇಲೆ ಬಹು ನಿರೀಕ್ಷೆಯನ್ನಿಟ್ಟುಕೊಂಡಿದೆ.

ಅತ್ಯಂತ ಬಡತನದಿಂದ ಬಂದಿರುವ ಸಂಜಯ ನಂದ್ಯಾಳಕರ ಚಿಕ್ಕಂದಿನಿAದಲೇ ಮಹತ್ವಾಕಾಂಕ್ಷೆಯ ಕನಸು ಕಂಡವರು. ತಂದೆ ಕೂಲಿ ಕೆಲಸ ಮಾಡಿ ಸಂಸಾರದ ಹೊಣೆ ನಿರ್ವಹಿಸುತ್ತಿರುವಾಗಲೇ ಸಂಜಯ ಕುಟುಂಭದ ನಿರ್ವಹಣೆಗೆ ಆಸರೆಯಾದವರು. ಪಿ.ಯು.ಸಿ.ಯವರೆಗೂ ಓದಿರುವ ಸಂಜಯ್ ತಾನು ಹೈಸ್ಕೂಲಿಗೆ ಹೋಗುತ್ತಿರುವಾಗ ರಜಾ ದಿನಗಳು ಬಂತೆದರೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕಾರ್ಪೆಂಟರ್ ಕೆಲಸ, ಪೇಂಟಿಂಗ್ ಕೆಲಸ ಮಾಡಿ ತನ್ನ ದುಡಿಮೆಯ ಮೂಲಕ ತನ್ನ ಶೈಕ್ಷಣಿಕ ಖರ್ಚು ಭರಿಸುತ್ತಿದ್ದರು.

ನಂತರ ಕಾಲೇಜಿಗೆ ಹೋಗುವ ಸಂದರ್ಭ. ಮದ್ಯಾಹ್ನವರೆಗೂ ಕಾಲೇಜಿನಲ್ಲಿ ಶಿಕ್ಷಣಾಭ್ಯಾಸ. ಮದ್ಯಾಹ್ನದ ನಂತರ ಹಳೆದಾಂಡೇಲಿಯ ವೆಹಿಕಲ್ ಸರ್ವೀಸಿಂಗ್ ಸೆಂಟರ್‌ನಲ್ಲಿ ಕೆಲಸ. ಕೆಲ ವರ್ಷ ಅಲ್ಲಿಯೇ ಕೆಲಸ ಮಾಡಿದ ಸಂಜಯ್ ನಂದ್ಯಾಳಕರ ನಂತರ ಬರ್ಚಿರಸ್ತೆಯ ಬಾಡಿಗೆ ಕಟ್ಟಡದಲ್ಲಿ ತನ್ನದೇ ಆದ ಸ್ವಂತದ ಸೋಮು ಸರ್ವೀಸಿಂಗ್ ಸೆಂಟರ್ ಆರಂಭಿಸಿ ಇದೀಗ ಸ್ವಂತದ ಕಟ್ಟಡವನ್ನೂ ಹೊಂದಿದವರು. ಸದ್ಯ ಪ್ರವಾಸೋದ್ಯಮ, ರಿಯಲ್ ಎಸ್ಟೇಟ್ ಹಾಗೂ ಇತರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಇವರು ನಗರಸಭಾ ಸದಸ್ಯರಾಗುವುದಕ್ಕೂ ಮುನ್ನ ಯಾವ ರಾಜಕೀಯ ಪಕ್ಷದಲ್ಲಿಯೂ ಗುರುತಿಸಿಕೊಂಡವರಲ್ಲ.

ಹಿಂದೂ ಮರಾಠ ಸಮಾಜಕ್ಕೆ ಸೇರಿದ ಸಂಜಯ್ ೨೦೧೮ರ ನಗರ¸ಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ದಿಸಿ ಅದೃಷ್ಠವೆಂಬAತೆ ಕೇವಲ ನಾಲ್ಕು ಮತಗಳ ಅಂತರದಲ್ಲಿ ಗೆದ್ದು ಬಂದವರು. ಪಲಿತಾಂಶ ಬಂದ ದಿನವೇ ಕಾಂಗ್ರೆಸ್ ಶಾಲು ಹೊದ್ದು ಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಇದೀಗ ಮತ್ತೆ ಅದೃಷ್ಠ ಒಲಿದಿದ್ದು, ಪಕ್ಷೇತರನಾಗಿ ಮೊದಲ ಬಾರಿ ನಗರಸಭೆಗೆ ಗೆದ್ದು ಬಂದಿದ್ದರೂ ಉಪಾಧ್ಯಕ್ಷತೆಯ ಗೌರವ ಅವರನ್ನರಸಿ ಬಂದಿದೆ. ನಗರದ ಅಭಿವೃದ್ದಿ, ಹಾಗೂ ಜನಸೇವೆ ಮತ್ತು ಯುವಜನರ ಬಗ್ಗೆ ಅಪಾರ ಮುನ್ನೋಟವನ್ನಿಟ್ಟುಕೊಂಡಿರುವ ಸಂಜಯ್ ನಂದ್ಯಾಳಕರವರು ಪಕ್ಷದ ಹಾಗೂ ಜನರ ನಿರೀಕ್ಷೆಯನ್ನು ಸಾಕಾರಗೊಳಿಸಬಲ್ಲರೇ ಕಾದು ನೋಡಬೇಕಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಸಂಜೀವ್ ನಂದಾ ಳ್ಕರ್ ಇವರು ಬಡತನವನು ಅರಿತಿದಾರೆ ಒಳ್ಳೆಯ ಚಟುವಟಿಕೆ ಗಾರರು ನಗರಸಭೆಯನ್ನು ಉತ್ತಮ ರೀತಿಯಲ್ಲಿ ಮುಂದೂಡಿಸುವ ಸಾಹಸ ಶಕ್ತಿ ಇವರಿಗಿದೆ cmc ಅಭಿ ವೃದ್ಧಿ ಪಡಿಸುವ ಸಾಮರ್ಥ್ಯ ಇವರಲ್ಲಿದೆ

Leave a Reply

Your email address will not be published.


*