ಜೋಯಿಡಾ: ಶ್ವಾನ ದಾಳಿಯಿಂದ ಸತ್ತ ಜಿಂಕೆಯ ಮಾಂಸ ಬಳಸಿದ ಪ್ರಕರಣಕ್ಕೆ ಸಂಬಂದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ವಿರ್ನೋಲಿ ಅರಣ್ಯಾಧಿಕಾರಿಗಳು ಕರ್ತವ್ಯಲೋಪವೆಸಗಿರುವುದು ಇದೀಗ ದಾಖಲೆ ಸಹಿತ ಬಯಲಾಗಿದೆ.
ದಾಂಡೇಲಿಗೆ ಸಮೀಪದ ಜನತಾ ಕಾಲನಿಯಲ್ಲಿ ಸೆಪ್ಟಂಬರ 23 ರಂದು ಶ್ವಾನವೊಂದು ಜಿಂಕೆಯನ್ನು ಬೇಟೆಯಾಡಿ ಸಾಯಿಸಿತ್ತು. ಇದು ಗ್ರಾಮಸ್ಥರ ಕಣ್ಣೆದುರೇ ನಡೆದಿದ್ದು, ಗ್ರಾಮಸ್ಥರು ಜಿಂಕೆಯನ್ನು ನಾಯಿಯಿಂದ ಬಿಡಿಸುವಲ್ಲಿ ಪ್ರಯತ್ನಿಸಿ ವಿಫಲರಾಗಿದ್ದರು. ಈ ವಿಷಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಬಾರದಿದ್ದ ವಿರ್ನೋಲಿ ಅರಣ್ಯಾಧಿಕಾರಿಗಳು ರಾತ್ರಿ ಜನತಾಕಾಲನಿಯ ಕೆಲವರ ಮನೆಗಳಿಗೆ ನುಗ್ಗಿ ಜಿಂಕೆ ಬೇಟೆಯಾಡಿದ್ದೀರೆಂದು ಆರೋಪಿಸಿ ನಾಲ್ವರನ್ನು ಎಳೆದೊಯ್ದಿದ್ದರು.
ಜನತಾ ಕಾಲನಿಯ ಸಂದೀಪ ಜಾಧವ್, ಪರಶುರಾಮ ಜಾಧವ್, ಗೋಪಾಲ ಮೇದಾರ್ ಹಾಗೂ ಮತ್ತೋರ್ವನನ್ನು ಅರಣ್ಯ ಸಿಬ್ಬಂದಿಗಳು ವಶಕ್ಕೆ ಪಡೆದು ರಾತ್ರಿಯಿಡೀ ಥಳಿಸಿದ್ದರು. ಸೆ. 24 ರಂದು ಬೈಲಪಾರನಲ್ಲಿರುವ ಇದೇ ವಿರ್ನೋಲಿ ವಲಯ ಅರಣ್ಯಾಧಿಕಾರಿಗಳ ಕಾರ್ಯಾಲಯದೆದುರು ಜನರ ಸಮಕ್ಷಮ ಇದೇ ನಾಲ್ವರು ಆರೋಪಿಗಳನ್ನು ಮುಂದೆ ಕೂರಿಸಿ ಫೋಟೋ ತೆಗೆಯಿಸಿದ್ದರು. ಇದರ ಹೊರತಾಗಿ ಕಚೇರಿಯ ಕೊಠಡಿಯೊಳಡೆ ಗೌಪ್ಯವಾಗಿ ಮತ್ತೆ ಪ್ರತ್ಯೇಕವಾಗಿ ಸಂದೀಪ, ಪರಶುರಾಮ, ಗೋಪಾಲ ಈ ಮೂವರೇ ಇರುವ ಪೋಟೋ ತೆಗೆಯಿಸಿಕೊಂಡರು. (ಈ ಎರಡೂ ಪೋಟೋಗಳೂ ಒಡನಾಡಿಗೆ ಲಭ್ಯವಾಗಿದ್ದು, ಇಲ್ಲಿ ತೋರಿಸಲಾಗಿದೆ.) ನಂತರ ನಾಲ್ವರನ್ನೂ ನ್ಯಾಯಾಲಯಕ್ಕೆ ಕರೆದೊಯ್ದು ಆನ್‍ಲೈನ್ ಮೂಲಕ ಹಾಜರು ಪಡಿಸಿದ್ದರು. ಈ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳು ಮತ್ತೋರ್ವನನ್ನು ನ್ಯಾಯಾದೀಶರೆದುರು ಹಾಜರು ಪಡಿಸಲಿಲ್ಲ ಎನ್ನಲಾಗಿದೆ. ಎಷ್ಟು ಜನರ ಹೆಸರನ್ನು ನ್ಯಾಯದೀಶರೆದರು ಹಾಜರು ಪಡಿಸಿದ್ದರೆನ್ನುವುದು ಗೌಪ್ಯವಾಗಿದೆ.
ನಂತರ ನ್ಯಾಯಾದೀಶರ ಆದೇಶದಂತೆ ಆರೋಪಿಗಳನ್ನು ಧಾರವಾಡ ಕಾರಾಗೃಹಕ್ಕೆ ಸಾಗಿಸುವ ಸಂದರ್ಭದಲ್ಲಿಯೂ ಮೂವರ ಜೊತೆಯೇ ನಾಲ್ಕನೆಯವನನ್ನೂ ಕರೆದೊಯ್ದು ಹಳಿಯಾಳದ ಹತ್ತಿರ ನಾಲ್ಕನೆಯವನನ್ನು ವಾಹನದಿಂದ ಕೆಳಗಿಳಿಸಿದರು. ಅಲ್ಲಿಂದ ಮುಂದಕ್ಕೆ ಸಂದೀಪ ಜಾಧವ್, ಪರಶುರಾಮ ಜಾಧವ್, ಹಾಗೂ ಗೋಪಾಲ ಮೇದಾರ್ ಎಂಬವರನ್ನು ಮಾತ್ರ ಧಾರವಾಡ ಕಾರಾಗ್ರಹಕ್ಕೆ ಕರೆದೊಯ್ಯಲಾಯಿತು.ಮೊದಲು ನಾಲ್ವರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದವರು ನಂತರ ಅದು ಹೇಗೆ ಮೂವರನ್ನು ಮಾತ್ರ ನ್ಯಾಯಾಲಯದೆದುರು ಹಾಜರು ಪಡಿಸಿದರು ಎಂಬುದು ಇದೀಗ ಗ್ರಾಮಸ್ಥರ ಪ್ರಶ್ನೆಯಾಗಿದೆ.
ಈಬಗ್ಗೆ ವಲಯ ಅರಣ್ಯಾಧಿಕಾರಿಗಳನ್ನು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಕೇಳಿದರೆ ಸ್ಪಷ್ಟ ಮಾಹಿತಿ ನೀಡದೇ ನುಣುಚಿಕೊಳ್ಳುತ್ತಿರುವುದು ಪ್ರಕರಣದಲ್ಲಿ ನಡೆದಿರಬಹುದಾದ ಗೋಲ್‍ಮಾಲ್ ಬಗ್ಗೆ ಇನ್ನಷ್ಟು ಸಂಶಯ ಮೂಡುವಂತಾಗುತ್ತಿದೆ. ಈ ಪ್ರಕರಣದ ಸಮಗ್ರ ತನಖೆಯಾದಲ್ಲಿ ವಿರ್ನೋಲಿ ವಲಯದ ಅರಣ್ಯ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರುವುದು ಹಾಗೂ ಬಂಧಿಸಿದ ಆರೋಪಿಯನ್ನು ಬಿಟ್ಟು ಅಪರಾಧಕ್ಕೆ ಪ್ರಚೋದನೆ ನೀಡಿರುವುದು ಮತ್ತೆ ನ್ಯಾಯಾಲಯ ಹಾಗೂ ಇಲಾಖೆಗೂ ವಂಚನೆ ಮಾಡಿರುವುದು ಬಹಿಂಗಗೊಳ್ಳಲಿದೆ. ಶಿಕ್ಷಾರ್ಹರೂ ಆಗಲಿದ್ದಾರೆ.
ಮಾದ್ಯಮಗಳಿಗೂ ತಪ್ಪು ಮಾಹಿತಿ
ಜನತಾ ಕಾಲನಿಯ ಜಿಂಕೆ ಬೇಟೆಯ ಪ್ರಕಣದಲ್ಲಿ ವಿರ್ನೋಲಿ ವಲಯ ಅಣ್ಯಾಧಿಕಾರಿಗಳು ಮಾದ್ಯಮದವರಿಗೂ ತಪ್ಪು ಮಾಹಿತಿ ನೀಡಿದ್ದಾರೆ. ಸಂದೀಪ ಜಾಧವ್, ಪರಶುರಾಮ ಜಾಧವ್ ಹಾಗೂ ಗೋಪಾಲ ಮಾದಾರ ಈ ಮೂವರ ಜೊತೆ ಮಾತ್ರ ಪೋಟೋ ತೆಗೆಯಿಸಿ ಮಾದ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಈ ಅರಣ್ಯಾಧಿಕಾರಿಗಳು ಮತ್ತೋರ್ವ ಆರೋಪಿಯನ್ನು ರಕ್ಷಣೆ ಮಾಡಿರುವುದು ಇದೇ ಪ್ರಕರಣದಲ್ಲಿ ಅವರೇ ಮಾಡಿರುವ ಮತ್ತೊಂದು ಫೋಟೋದಲ್ಲಿ ( ನಾಲ್ಕು ಜನ ಆರೋಪಿಗಳಿದ್ದಾರೆ) ಸ್ಪಷ್ಟವಾಗಿ ಕಂಡುಬರುತ್ತದೆ. ಒಂದೇ ಪ್ರಕರಣ, ಆರೋಪಿಗಳಿರುವ ಫೋಟೋ ಮಾತ್ರ ಎರಡು. ಇದು ಸಂಶಯಕ್ಕೆಡೆಯಾಗುತ್ತಿದೆ.
Be the first to comment