ಮೂರು ದಿನಗಳ ನಂತರ ಜಲಾಶಯದಲ್ಲಿ ತೇಲಿಬಂದ ಕಾರ್ಮಿಕನ ಶವ

ಬೊಮ್ನಳ್ಳಿ ಜಲಾಶಯದ ಒಂದು ನೋಟ

ದಾಂಡೇಲಿ: ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಯತಪ್ಪಿ ಡ್ಯಾಂ ನಿಂದ ಕೆಳಗಡೆ ಬಿದ್ದ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದ ಬೊಮ್ನಳ್ಳಿಯ ಸುಭಾಶ ಬಸಪ್ಪ ಹರಿಜನ್ ಎಂಬ ಹಂಗಾಮಿ ಕಾರ್ಮಿಕನ ಮೃತ ದೇಹ ಘಟನೆ ನಡೆದ ಮೂರು ದಿನಗಳ ನಂತರ ರವಿವಾರ ಮುಂಜಾನೆ ಜಲಾಶಯದ ನೀರಿನಿಂದ ಮೇಲಕ್ಕೆ ತೇಲಿ ಬಂದಿದೆ.

ಸೆಪ್ಟಂಬರ 25 ರಂದು ಮದ್ಯಾಹ್ನ ಬೊಮ್ನಳ್ಳೀ ಪಿಕಪ್ ಡ್ಯಾಂನಲ್ಲಿ ಘಟನೆ ನಡೆದಿತ್ತು. ಮೃತ ಸುಭಾಶ ಹರಿಜನ್ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಹಂಗಾಮಿ ಕಾರ್ಮಿಕನಾಗಿದ್ದು ಕಳೆದ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಶುಕ್ರವಾರ ಎಂದಿನಮಥೆ ಕಥ್ವ್ಯಲ್ಕೆ ಬಂದಿದ್ದ ಈತ ಡ್ಯಾಂ ನ ಕಂಬವೊಂದರ ಮೇಲಕ್ಕೇರಿ ಸ್ವಚ್ಚತಾ ಕಾರ್ಯ ನಡೆಸುತ್ತಿದ್ದ ವೇಳೆ ಆಯತಪ್ಪಿ ಜಲಾಸಯದ ಹಿನ್ನೀರಿನೊಳಗೆ ಬಿದ್ದಿದ್ದ ಎನ್ನಲಾಗಿದೆ. ಈತ ಡ್ಯಾಂನಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಆತ ಧರಿಸುತ್ತಿದ್ದ ಚಪ್ಪಲಿ ಹಾಗೂ ಕತ್ತಿ ದೊರೆತಿದ್ದು, ಈ ಆಧಾರದಲ್ಲಿ ಆತ ನೀರಲ್ಲಿ ಮುಳುಗಿರಬಹುದೆಂದು ಅಂದಾಜಿಸಲಾಗಿತ್ತು. ದಾಂಡೇಲಿ, ಜೋಯಿಡಾದ ರ್ಯಾಪ್ಟಿಂಗ್ ತಜ್ಞರು ಹಾಗೂ ಶನಿವಾರ ಬೆಳಗಾವಿಯ ಮುಳುಗು ತಜ್ಞರು ಬಂದು ಜಲಾಶಯದಲ್ಲಿ ಮೃತ ದೇಹಕ್ಕಾಗಿ ಹುಡುಕಾಡಿದ್ದರು. ಆದರೆ ಸಿಕ್ಕಿರಲಿಲ್ಲ. ರವಿವಾರ ಮುಂಜಾನೆ ಸುಭಶ ಹರಿಜನನ ಮೃತ ದೇಹ ನೀರಲ್ಲಿ ತೇಲಿ ಬಂದಿತ್ತು.

ಜಲಾಶಯದಲ್ಲಿ ತೇಲಿ ಬಂದ ಶವ

ಮೃತ ಸುಬಾಶ ಹರಿಜನ ಮಡದಿ ಹಾಗೂ ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದಾರೆ. ಸ್ಥಳಕ್ಕೆ ದಾಂಡೇಲಿ ತಹಶಿಲ್ದಾರ್ ಶೈಲೇಶ್ ಸಪರಮಾನಂದ ತಾ.ಪಂ ಕಾರ್ಯನಿರ್ವಣಾಧಿಕಾರಿ ಪರಶುರಾಮ ಗಸ್ತಿ ಹಾಗೂ ಕರ್ನಾಟಕ ವಿದ್ಯುತ್ ನಿಗಮದ ಅದಿಕಾರಿಗಳು ಬೇಟಿ ನೀಡಿದ್ದರು. ಅಂಬಿಕಾನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*