ಕಾರವಾರ : ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಹಾಗೂ ಅರೋಗ್ಯ ಇಲಾಖೆಯ ನಿಯಮಾವಳಿಯಂತೆ ಮಾಸ್ಕ ಧರಿಸಿಲ್ಲ ಎಂಬ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ನಿಂದ ಈವರೆಗೆ ಸರಿ ಸುಮಾರು ನಾಲ್ಕು ಲಕ್ಷ ರು. ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲೆಲ್ಲಿ ಎಸ್ಟೆಷ್ಟು ನೋಡಿ…
ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ವಿರುದ್ಧ ಹೋರಾಡಬೇಕಾದಲ್ಲಿ ನಮ್ಮ ರಕ್ಷಣೆಗೆ ಮಾಸ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ. ಈ ನಿಯಮಗಳ ಉಲ್ಲಂಘನೆಯಾಗಿದ್ದು ಕಂಡು ಬಂದರೆ ಅಂಥವರ ಮೇಲೆ ಕಟ್ಟು ನಿಟ್ಟಿನ ಕ್ರಮಕ್ಕೆ ಜಿಲ್ಲಾಧಿಕಾರಿ ಹರೀಶಕುಮಾರ್ ಕೆ. ಆದೇಶ ನೀಡಿದ್ದಾರೆ.
ಭಾರತ ಅನ್‍ಲಾಕ್ 4.00 ಮಾರ್ಗಸೂಚಿಯಲ್ಲಿ ಅನೇಕ ಚಟುವಟಿಕೆಗೆ ವಿನಾಯಿತಿ ನೀಡಿದೆ. ಇದರಿಂದ ಸಾರ್ವಜನಿಕರ ಓಡಾಟ ಹೆಚ್ಚಾಗಿದ್ದು, ಎಲ್ಲಡೆ ನಿಯಮಗಳ ಪಾಲನೆಯಾಗುತ್ತಿಲ್ಲ. ಇದರಿಂದ ಕೊರೊನಾ ಸೋಂಕು ಅಧಿಕವಾಗಿ ಏರುತ್ತಿದೆ. ಈರೋಗದಿಂದ ದೂರವಿದ್ದು ಸುರಕ್ಷತವಾಗಿರಲು ನಿಯಮ ಪಾಲನೆಯಾಗಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತೀ ಅವಶ್ಯ. ಕಾರಣ ಸಾರ್ವಜನಿಕ ಸ್ಥಳ, ಸಭೆ- ಸಮಾರಂಭದಲ್ಲಿ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಅಥವಾ ನಿಯಮದ ಉಲ್ಲಂಘನೆ ಪುರಾವರ್ತನೆಯಾದಲ್ಲಿ ಅಂಥವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ 1897, ವಿಪತ್ತು ನಿರ್ವಹಣಾ ಕಾಯ್ದೆ 2005, ಭಾರತೀಯ ದಂಡ ಸಂಹಿತೆ 1860 ಮತ್ತು ದಂಡ ಪ್ರಕ್ರಿಯಾ ಸಂಹಿತೆ ವಿವಿಧ ನಿಬಂಧನೆ ಅಡಿಯಲ್ಲಿ ಕ್ರಮ ಕೈಕೊಳ್ಳಲು ಜಿಲ್ಲೆಯ ಎಲ್ಲಾ ತಹಶೀಲ್ದಾರ್, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ನಿಯಮ ಮೀರಿ ವಸೂಲಾದ ದಂಡದ ಒಟ್ಟೂ ಮೊತ್ತ: ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳೊಂದರಲ್ಲೇ 2254 ಕೇಸ್ ದಾಖಲಾಗಿದ್ದು ಒಟ್ಟೂ ರೂ.228920 ಸಂಗ್ರಹವಾಗಿದೆ. ಮತ್ತು ಲಾಕ್ಡೌನ್ ಅವಧಿ ಏಪ್ರಿಲ್ ತಿಂಗಳಿನಿಂದ ಸೆ.24 ರವರೆಗೆ ರೂ.489610 ಮೊತ್ತ ಸಂಗ್ರಹವಾಗಿದೆ.
ತಾಲೂಕಾವಾರು ವಿವರ ಹೀಗಿದೆ ನೋಡಿ:
ಕಾರವಾರ: ಸೆಪ್ಟೆಂಬರ್ ತಿಂಗಳಿನಲ್ಲಿ 41 ಪ್ರಕರಣಗಳಿಂದ 4100 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 74600 ರೂ ಸಂಗ್ರಹವಾಗಿದೆ. ಶಿರಸಿ: ಸೆಪ್ಟೆಂಬರ್ ತಿಂಗಳಿನಲ್ಲಿ 152 ಪ್ರಕರಣಗಳಿಂದ 15000 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 27600 ರೂ ಸಂಗ್ರಹವಾಗಿದೆ. ದಾಂಡೇಲಿ: 318 ಪ್ರಕರಣಗಳಿಂದ 32320 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 58420 ರೂ ಸಂಗ್ರಹವಾಗಿದೆ. ಭಟ್ಕಳ: 285 ಪ್ರಕರಣಗಳಿಂದ 28400 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 39600 ರೂ ಸಂಗ್ರಹವಾಗಿದೆ. ಕುಮಟಾ: 71 ಪ್ರಕರಣಗಳಿಂದ 7100 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 11300 ರೂ ಸಂಗ್ರಹವಾಗಿದೆ. ಅಂಕೋಲಾ: 193 ಪ್ರಕರಣಗಳಿಂದ 26300 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 47700 ರೂ ಸಂಗ್ರಹವಾಗಿದೆ. ಹಳಿಯಾಳ: 106 ಪ್ರಕರಣಗಳಿಂದ 9440 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 57630 ರೂ ಸಂಗ್ರಹವಾಗಿದೆ. ಹೊನ್ನಾವರ: 410 ಪ್ರಕರಣಗಳಿಂದ 32700 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 35100 ರೂ ಸಂಗ್ರಹವಾಗಿದೆ. ಸಿದ್ದಾಪುರ: 128 ಪ್ರಕರಣಗಳಿಂದ 12960 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 31260 ರೂ ಸಂಗ್ರಹವಾಗಿದೆ. ಯಲ್ಲಾಪುರ: 57 ಪ್ರಕರಣಗಳಿಂದ 10300 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 27700 ರೂ ಸಂಗ್ರಹವಾಗಿದೆ. ಮುಂಡಗೋಡ: 328 ಪ್ರಕರಣಗಳಿಂದ 33300 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 44400 ರೂ ಸಂಗ್ರಹವಾಗಿದೆ. ಜೋಯಿಡಾ: 165 ಪ್ರಕರಣಗಳಿಂದ 17000 ರೂ ದಂಡ ಸಂಗ್ರಹಿಸಲಾಗಿದ್ದು, 2020 ಏಪ್ರಿಲ್‍ನಿಂದ ಈವರೆಗೆ ಒಟ್ಟೂ 34300 ರೂ ಸಂಗ್ರಹವಾಗಿದೆ.
ಮಾಹಿತಿ ಕೃಪೆ: ಗುರುಪ್ರಸಾದ ಶಾಸ್ತ್ರಿ
Be the first to comment