ಬಹುಭಾಷಾ ಗಾಯಕ, ಸಿನಿ ಲೋಕದ ಗಾನ ತಾರೆ, ಗಾನ ಗಾರುಡಿಗ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಈವರು ಅಗಸ್ಟ 5 ರಿಂದ ಚನೈನ ಎಮ್.ಜಿ.ಎಮ್. ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಬಾಲು ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿತ್ತು. ಶುಕ್ರವಾರ ಮದ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.
ಗಾಯನ ರಂಗದಲ್ಲಿ ಐದು ದಶಕಗಳಿಗೂ ಹೆಚ್ಚುಕಾಲ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್.ಪಿ.ಬಿ. 40 ಸಾವಿರಕ್ಕೂ ಹೆಚ್ಚಿನ ಸಿನಿಮಾ ಹಾಡನ್ನು ಹಾಡಿ ದಾಖಲೆ ಮಾಡಿದ್ದಾರೆ. ಜೊತೆಗೆ ಭಕ್ತಿಗೀತೆ, ಭಾವಗೀತೆಗಳ ಧ್ವನಿ ಸುರುಳಿಗಳೂ ಸಾಕಷ್ಟು ಬಂದಿವೆ. ಒಂದೆರಡು ಕನ್ನಡ ಸಿನಿಮಾಗಳಲ್ಲಿಯೂ ಅಭಿನಯಿಸಿ ಗಮನ ಸೆಳೆದಿದ್ದಾರೆ. 6 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬಾಲಸುಬ್ರಹ್ಮಣ್ಯಂ ತಮ್ಮ ಸರಳ ಸಜ್ಜನಿಕೆಯ ಮೂಲಕವೇ ಎಲ್ಲರ ಮನ ಗೆದ್ದವರು.
ಕನ್ನಡಿಗರ ಜನ ಮಾನಸದಲ್ಲಿ ನೆಲೆ ನಿಂತಿದ್ದ ಎಸ್.ಪಿ . ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ. ಅವರ ಗಾಯನ…. ಗಾನ….. ನಿತ್ಯ ನಿರಂತರ…
ಅಗಲಿದ ಗಾನ ಗಾರುಡಿಗೆ ಒಡನಾಡಿ ಬಳಗದಿಂದ ನುಡಿನಮನಗಳು.
ಕನ್ನಡ ಕುಲಕೋಟಿಗೆ ಎಸ್ಪಿಯವರ ಅಗಲುವಿಕೆ ಬಹಳ ಬೇಸರ ತಂದಿದೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಗಳು ಕನ್ನಡ ನಾಡು ಒಬ್ಬ ಗಾನ ಗಾರುಡಿ ಗಳನ್ನು ಇವತ್ತು ಕಳೆದುಕೊಂಡಂತಾಗಿದೆ
‘ಎಸ್ಪಿ’ ಬಹು ಭಾಷೆಯಲ್ಲಿ ತಮ್ಮ ಸಂಗೀತ ಸುಧೆಯನ್ನು ಉಣಬಡಿಸಿ ತಣಿಸಿ, ಜನಮಾನಸದಲ್ಲಿ ಅಜರಾಮರ ಸ್ಥಾನ ಪಡೆದು, ಇಂದು ಅಗಲಿದ್ದಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ.🌹🙏