ದಾಂಡೇಲಿಯ ಉದ್ಯಮಿ ರಿಯಾಜ ಅಹ್ಮದ್ ಕಿತ್ತೂರ್ ಇನ್ನಿಲ್ಲ

ದಾಂಡೇಲಿಯ ಯಶಸ್ವೀ ಉದ್ಯಮಿ, ಕಿತ್ತೂರ್ ಟ್ರಾನ್ಸಪೋರ್ಟನ ಮಾಲಕ, ಸಮಾಜ ಸೇವಕ ರಿಯಾಜ ಅಹ್ಮದ್ ಕಿತ್ತೂರ್ ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದರು.

ದಾಂಡೇಲಿ ನಗರಸಭೆಯ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಯಾಸ್ಮಿನ್ ಕಿತ್ತೂರ ಆವರ ಪತಿಯಾಗಿರುವ ಇವರು ನಗರದಲ್ಲಿ ತಮ್ಮದೇ ಆದ ಟ್ರಾನ್ಸಪೋರ್ಟ ಉದ್ಯಮ ಹಾಗೂ ಇನ್ನಿತರೆ ಉದ್ಯಮಗಳನ್ನು ಮುನ್ನಡೆಸಿಕೊಂಡು ಬಂದಿದ್ದ ಇವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದರು. ಬಡಜನರಿಗೆ ಸಹಾಯ ಮಾಡುವಂತಹ ಉದಾರಿಗಳಾಗಿದ್ದರು. ಎಲ್ಲರನ್ನೂ ಪ್ರೀತಿಸುವ ಅಜಾತಶತ್ರುಗಳಾಗಿದ್ದರು.

ಮೃತರು ಮಡದಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ನಗರದ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.

ಶನಿವಾರ ಸಂಜೆ 7 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಂತಾಪ: ರಿಯಾಜ ಕಿತ್ತೂರ್ ಅವರ ಅಗಲುವಿಕೆಗೆ ಶಾಸಕ ಆರ್. ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಘೋಟ್ನೇಕರ, ಮಾಜಿ ಶಾಸಕ ಸುನೀಲ್ ಹೆಗಡೆ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳ, ನಗರಸಭಾ ಸದಸ್ಯರಾದ ಆದಂ ದೇಸೂರ್, ಅಷ್ಪಾಕ್ ಶೇಖ್ , ಮೋಹನ ಹಲವಾಯಿ, ನಗರಸಭೆ ಮಾಜಿ ಸದಸ್ಯ ಕೀರ್ತಿ ಗಾಂವಕರ, ಅನಿಲ ದಂಡಗಲ, ಮುಸ್ತಾಕ ಶೇಖ್, ಮಾಜಿ ಅಧ್ಯಕ್ಷ ತಸವರ ಸೌದಾಗರ, ನಗರ ಯೋಜನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬಾ ಮುಲ್ಲಾ ಮುಂತಾದವರು ಸಂತಾಪ ಸೂಚಿಸಿದ್ದಾರೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

3 Comments

  1. ರಿಯಾಜ್ ಕಿತ್ತೂರು ಅವರ ನಿಧನಕ್ಕೆ ನಾವು ಸಂತಾಪವನ್ನು ಸೂಚನೆ ಮಾಡುತ್ತೇವೆ ದುಃಖತಪ್ತ ಅವರ ಕುಟುಂಬಕ್ಕೆ ಆ ದೇವರು ಅವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ
    ಜಾಧವ

  2. ರಿಯಾಜ್ ಕಿತ್ತೂರು ಇವರು ನಿಧನಕೆ ನಾವು ವಿಷಾದಿಸುತ್ತೇವೆ ದೇವರು ಅವರಿಗೆ ಚಿರಶಾಂತಿ ನೀಡಲಿ ಮತ್ತು ದುಃಖತಪ್ತ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೆವೆ

  3. ಕಿತ್ತೂರ ಅವರ ಅಕಾಲಿಕ ಮರಣ ಆಘಾತಕಾರಿ ನೋವಿನ ಘಟನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ.

Leave a Reply

Your email address will not be published.


*