ದಾಂಡೇಲಿಯಲ್ಲಿ 16 ಸಾವಿನ ಜೊತೆ ಸಾವಿರದ ಗಡಿ ದಾಟಿದ ಕೊರೊನಾ

ದಾಂಡೇಲಿಗರೇ ಕೊರೊನಾದಿಂದ ಕಾಳಜಿಯಿಂದಿರಿ....

ಇಡೀ ವೀಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಾಣು ದಾಂಡೇಲಿಯಲ್ಲಿ ಒಂದು ಸಾವಿರದ ಗಡಿ ದಾಟಿದ್ದು, ಇಲ್ಲಿಯವರೆಗೆ 16 ಜನರನ್ನು ಬಲಿ ಪಡೆದುಕೊಂಡಿದೆ.


ದಾಂಡೇಲಿಯಲ್ಲಿ ಶನಿವಾರದವರೆಗೆ 1009 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಈಗ ಸದ್ಯ 74 ಜನರು ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 949 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. 16 ಜನರು ದಾಂಡೇಲಿಯೊಂದರಲ್ಲೇ ಈ ಕೊರೊನಾಕ್ಕೆ ಬಲಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 6750 ರಷ್ಟು ಜನರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಅವರಲ್ಲಿ 1009 ಜನರು ದಾಂಡೇಲಿಯವರೇ ಆಗಿರುವುದು ಗಮನಾರ್ಹವೂ ಆತಂಕಕಾರಿಯೂ ಆಗಿದೆ.

ಶನಿವಾರ 13 ಸೋಂಕು: 10 ಬಿಡುಗಡೆ
ದಾಂಡೇಲಿಯಲ್ಲಿ ಶನಿವಾರ ಮತ್ತೆ 13 ಜನರು ಕೊರೊನಾ ಸೋಂಕಿಗೊಳಗಾಗಿದ್ದು, ಇವರನ್ನು ಚಿಕಿತ್ಸೆಗೊಳಪಡಿಸಲಾಗಿದೆ.
ಹಳೆದಾಂಡೇಲಿಯ 76 ವರ್ಷದ ಪುರುಷ, ಹಳೆ ಡಿ.ಆರ್.ಟಿ.ಯ 65 ವರ್ಷದ ಪುರುಷ, ಟೌನ್‍ಶಿಪ್‍ನ 47, 17 ವರ್ಷದ ಮಹಿಳೆಯರು, ಕೋಗಿಲಬನ ಮೃತ್ಯುಂಜಯ ಮಠ ಬಳಿಯ 28 ವರ್ಷ ಪುರುಷ, ಹಳೆ ಡಿ.ಆರ್.ಟಿ,ಯ 60, 30. ವರ್ಷದ ಮಹಿಳೆ, 37, ವರ್ಷದ ಪುರುಷ, 12,13 ವರ್ಷದ ಬಾಲಕರು, 9 ವರ್ಷದ ಬಾಲಕಿ, ಹಳೆ ದಾಂಡೇಲಿಯ 73 ವರ್ಷದ ಪುರುಷ, ಹಿರೇಮಠ ಶಾಲೆ ಬಳಿಯ 61 ವರ್ಷದ ಪುರುಷನಲ್ಲಿ ಪಾಸಿಟಿವ್ ಬಂದಿದೆ. ಇಲ್ಲಿಯವರೆಗೆ ಒಟ್ಟೂ 1009 ಜನರು ಸೋಂಕಿಗೊಳಗಾಗಿದ್ದಾರೆ.
ಶನಿವಾರ ಗುಣಮುಖರಾಗಿರುವ 10 ಜನರು ಆಸ್ಪತ್ತೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 950 ರಷ್ಟು ಜನರು ಗುಣಮುಖರಾಗಿದ್ದಾರೆ. ಸದ್ಯ 74 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾಂಡೇಲಿಯಲ್ಲೇ ಯಾಕೆ ಹೆಚ್ಚುತ್ತಿದೆ
ದಾಂಡೇಲಿ ತಾಲೂಕಿನ ನಗರ ಪ್ರದೇಶವಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಇದು ಅಂಬಿಕಾನಗರ, ಆಲೂರು, ಗಾಂವಠಣಾ ಸೇರಿದಂತೆ ಹಲವು ಗ್ರಮೀಣ ಪ್ರದೇಶಗಳಿಗೂ ವ್ಯಾಪಿಸಿದ್ದು, ಗ್ರಾಮೀಣ ಬಾಗದ ಜನರೂ ಸಹ ಆತಂಕಕ್ಕೊಳಗಾಗುವಂತಾಗಿದೆ.
ಕೊರೊನಾ ಎಂಬ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಆರಂಭದ ದಿನಗಳಿಂದಲೂ ದಾಂಡೇಲಿಯಲ್ಲಿ ಹಲವಾರು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆರಂಭದ ಎರಡು ತೀಗಳು ದಾಂಡೇಲಿಯಲ್ಲಿ ಈ ಸೋಂಕಿನ ಪ್ರಮಾಣ ಸಾಕಷ್ಟು ಕಡಿಮೆಯಿತ್ತು. ನಂತರದ ದಿನಗಳಲ್ಲಿ ಇದು ದಾಂಡೇಲಿಯಲ್ಲಿ ಭಯಾನಕವಾಗಿ ವ್ಯಾಪಿಸಿತ್ತಲ್ಲದೇ ನಿತ್ಯ ತನ್ನ ಸಂಖ್ಯೆನ್ನು ಎರಡಂಕಿಯಲ್ಲಿ ಹೆಚ್ಚಿಸಿಕೋಳ್ಳುತ್ತಲೇ ಇತ್ತು. ಅದು ಎಲ್ಲಿಯವರೆಗೆಂದರೆ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕೊರೋನಾ ಸೋಂಕಿತನ್ನು ಹೊಂದಿದ ಅಪಖ್ಯಾತಿ ದಾಂಡೇಲಿಗೆ ಅಂಟಿಕೊಳ್ಳುವವರೆಗೂ ಅದು ಮುಂದುವರೆಯಿತು. ಈಗಲೂ ಸಹ ದಾಂಡೇಲಿಯೇ ಜಿಲ್ಲೆಯ ಮೊದಲ ಸ್ಥಾನದಲ್ಲಿದೆ ಎಂಬ ಸಂಗತಿ ಬೇಸರಿಸುವಂತದ್ದಾಗಿದೆ.
ಯಕೆ ದಾಂಡೇಲಿಯಲ್ಲಿಯೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲದಿದ್ದರೂ ಕೂಡಾ ಬೇರೆಡೆಯಿಂದ ವಲಸೆ ಬಂದವರಿಂದಲೇ ಈ ಸೋಂಕು ಇಲ್ಲಿಗೆ ಹೆಚ್ಚಾಗಿ ಅಂಟಿಕೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕೋವಿಡ್ ಹರಡುವಿಕೆಯ ಆರಂಭದಲ್ಲಿ ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಸೋಂಕಿನ ಪ್ರಮಣ ಹೆಚ್ಚಿತ್ತು. ದಾಂಡೇಲಿಗೆ ಈ ಎರಡೂ ಮಹಾನಗರÀಗಳು ಹತ್ತಿರವಿದ್ದು, ಜನರ ವಹಿವಾಟೂ ಕೂಡಾ ಈ ನಗರಗಳ ಜೊತೆ ಸಾಕಷ್ಟಿತ್ತು. ಅಲ್ಲಿಗೆ ಹೋಗಿಬಂದವರಿದಲೂ ಸಹ ಈ ಸೋಂಕು ನಗರಕ್ಕೆ ಸಾಕಷ್ಟು ಬಂದಿತ್ತು. ಇನ್ನು ಇದರೆ ಜೊತೆ ಜನರ ನಿರ್ಲಕ್ಷ ಕೂಡಾ ಕಾಣವಾಗಿದೆ ಎನ್ನಲಾಗುತ್ತಿದೆ.

ಅಧಿಕಾರಿಗಳ ಪ್ರಾಮಾಣಿಕ ಕಾರ್ಯ

ಕೊವಿಡ್ 19 ನಿಯಂತ್ರಿಸುವಲ್ಲಿ ಸ್ಥಳೀಯವಾಗಿ ತಹಶಿಲ್ದಾರ್ ಶೈಲೇಶ ಪರಮಾನಂದ ನೇತೃತ್ವದಲ್ಲಿ ಪೌರಾಯುಕ್ತ ಡಾ. ಸಯ್ಯದ್ ಜಾಹೇದ ಅಲಿ, ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ, ದಾಂಡೇಲಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ ಪ್ರಸಾದ, ಹಗೂ ಪೊಲೀಸ್ ಮತ್ತು ಇತರೆ ಆರೋಗ್ಯ ಸಿಬ್ಬಂದಿಗಳು ಉತ್ತಮವಾದ ಹಾಗೂ ಪ್ರಾಮಣಿಕವಾದ ಕಾರ್ಯವನ್ನೇ ನಿರ್ವಹಿಸುತ್ತಿದ್ದಾರೆ. ಆದರೆ ಇತ್ತಿತ್ತಲಾಗಿ ಜನರೇ ಕೆಲ ಮುಂಜಾಗೃತೆ ವಹಿಸುವಲ್ಲಿ ನಿರ್ಲಕ್ಷಿಸುತ್ತಿದ್ದಾರೆಂಬ ಆಕ್ಷೇಪದ ಮಾತುಗಳು ಕೇಳಿ ಬರುತ್ತಿವೆ. ಜನರು ಕೊರೊನಾ ವೈರಸನ್ನು ಕಡೆಗಣಿಸದೇ, ಬದುಕಿನ ಭರಾಟೆಯಲ್ಲಿ ಮೈ ಮರೆಯದೇ ಕಾಳಜಿ ವಹಿಸಬೆಕಾದ ಅಗತ್ಯತೆಯಿದೆ. ಜೊತೆಗೆ ಹಾಲಿ-ಮಾಜಿ ಜನಪ್ರತಿನಿದಿಗಳೂ ಸಹ ತಮ್ಮ ಪ್ರಜೆಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಜರೂರತ್ತಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ದಾಂಡೇಲಿ ಎಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಅವರು ಬಹಳ ಚೆನ್ನಾಗಿ ಕ್ವಿಡ್ ನೈಂಟೀನ್ ವಾರಿಯರ್ಸ್ ಆಗಿ ಕಾರ್ಯವನ್ನು ನಿರ್ವಹಣೆ ಮಾಡುತ್ತಾ ಇದ್ದಾರೆ ಅವರಿಗೆ ಸಮಸ್ತ ನಾಗ ನಾಗರಿಕರು ಅಭಿನಂದನೆಗಳನ್ನು ಹೇಳಬೇಕು

Leave a Reply

Your email address will not be published.


*