ಗಣೇಶನ ಹಬ್ಬಕ್ಕೆ ತುಸು ನೆಮ್ಮದಿಯ ಸುದ್ದಿ ಕೊಟ್ಟ ಕೊರೊನಾ…

ಆತ್ಮೀಯ ಓದುಗ ಬಳಗಕ್ಕೆ ಗಣೇಶ ಚತುರ್ಥಿಯ ಶುಭಾಶಯಗಳು…

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಕೊರೊನಾ ಗಣೇಶನ ಹಬ್ಬಕ್ಕೆ ತುಸು ನೆಮ್ಮದಿಯ ಸುದ್ದಿ ಕೊಟ್ಟಿದೆ.

ಶನಿವಾರದಂದು ಬೈಲಪಾರ, ಅಂಬೇವಾಡಿ, ಟೌನ್ ಶಿಪ್ ನ ಕೇವಲ ಮೂರು ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು ಈವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಇವರಲ್ಲಿ ಮೃತಪಟ್ಟಿರುವ ಟೌನ್ ಶಿಪ್ ನ 74 ವರ್ಷದ ವೃದ್ದನಲ್ಲಿಯೂ ಪಾಸಿಟಿವ್ ಬಂದಿರುವ ಮಾಹಿತಿಯಿದೆ.

ಶುಕ್ರವಾರ ಗುಣಮುಖರಾದ 13 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ 746 ಪ್ರಕರಣಗಳು ದಾಖಲಾಗಿದ್ದು, 551 ಗುಣಮುಖರಾಗಿ ಮನೆ ಸೇರಿದ್ದಾರೆ.

ಒಡನಾಡಿ ಮನವಿ

ಬಂಧುಗಳೆ, ಕೊರೊನಾ ಕರಿನೆರಳಿನ ನಡುವೆ ನಾವು ಹಬ್ಬಗಳನ್ನು ಆಚರಿಸಬೇಕಾದಂತ ಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ಹಬ್ಬದ ಅಚರಣೆ ಸಂಭ್ರಮವಾಗಿರದೇ ಸರಳವಾಗಿರಲಿ. ಕೊರೊನಾ ತಡೆಗಾಗಿ ಸರಕಾರದ ನಿಯಮಗಳ ಪಾಲನೆಯೊಂದಿಗೆ ಹಬ್ಬ ಅಚರಣೆಯಾಗಲಿ. ಜೀವ ಮತ್ತು ಜೀವನದ ಕಾಳಜಿಯಿರಲಿ ಎಂಬುದು ಒಡನಾಡಿ.ಕಾಂ ನ ಅರಿಕೆಯಾಗಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಗೌರಿ ಗಣೇಶ ಹಬ್ಬಕ್ಕೆ ನಮ್ಮಿಂದ ಹಾರ್ದಿಕವಾದ ಶುಭಾಶಯಗಳು ಗಣೇಶ್ ವಿಘ್ನ ಹಾರಕ ಎಲ್ಲರ ತೊಂದರೆಗಳನ್ನು ಪರಿಹರಿಸಲೆಂದೇ ಬೇಡಿಕೊಳ್ಳುತ್ತೇವೆ

Leave a Reply

Your email address will not be published.


*