ಹಳಿಯಾಳ ಪುರಸಭೆಯ ಮಾಜಿ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರೂ ಆಗಿದ್ದ ಶ್ರೀಕಾಂತ ಹೂಲಿ (73)ಯವರು ದೈವಾಧಿನರಾದರು.
ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಇವರು ರಾಜಕೀಯ ಅನುಭವಿಗಳಾಗಿದ್ದರು. ರೈತರ ಸೇವಾ ಸಹಕಾರಿ ಸಂಘ, ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ, ಹಳಿಯಾಳ ಮಹಾಗಣಪತಿ ದೇವಸ್ಥಾನ, ಪೇಟೆ ಬಸವೇಶ್ವರ ದೇವಸ್ಥಾನದ ಟ್ರಸ್ಟ್ ಕಮೀಟಿ ಹಿರಿಯ ಸದಸ್ಯರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹಳಿಯಾಳ ಪುರಸಭೆಯ ಸದಸ್ಯರಾಗು ಹಲವು ಬಾರಿ ಆಯ್ಕೆಯಾಗಿದ್ದ ಇವರು ಪಟ್ಟಣದ ಆಭಿವೃದ್ದಿಯ ಮುನ್ನೋಟವಿಟ್ಟುಕೊಂಡವರಾಗಿದ್ದರು. ಕೆಲ ದಿನಗಳ ಹಿಂದೆ ಕೊವಿಡ್ ಪಾಸಿಟಿವ್ ಬಂದು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚೇತರಿಸಿಕೊಂಡಿದ್ದರು. ನಂತರ ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಆದರೆ ಗುರುವಾರ ತಡರಾತ್ರಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದರೆಂದು ಆಸ್ಪತ್ರೆಯ ವೈದ್ಯರು ದೃಢ ಪಡಿಸಿದ್ದಾರೆ . ಇವರ ನಿಧನಕ್ಕೆ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.
ಶ್ರೀ ಶ್ರೀಕಾಂತ ಹೂಲಿ ಅವರ ನಿಧನಿಸಿದಕೆ ನಮ್ಮ ಇಂಟೆಕ್INTUC ದಾಂಡೇಲಿ ಘಟಕದಿಂದ ಅವರಿಗೆ ಸಂತಾಪವನ್ನು ಸೂಚಿಸುತ್ತಾ ಇದ್ದೇವೆ ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಬೇಡಿಕೊಳ್ಳುತ್ತೇವೆ
ಶ್ರೀಕಾಂತ ಹೂಲಿ ಯವರ ನಿದನದಿಂದ ನಮ್ಮ ಕುಟುಂಬದ ಹಿರಿಯರೊಬ್ಬರನ್ನು ಕಳೆದು ಕೊಂಡಿದ್ದೇವೆ..
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಆಶಿಸುತ್ತೇನೆ ಮತ್ತು ಅವರ ಕುಟುಂಬ ಸದಸ್ಯರಿಗೂ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.